ಹೆಚ್‌.ಡಿ. ದೇವೇಗೌಡ ಹುಟ್ಟುಹಬ್ಬ: ರೋಗಿಗಳಿಗೆ ಹಣ್ಣು ವಿತರಣೆ

 ಹೆಚ್‌.ಡಿ. ದೇವೇಗೌಡ ಹುಟ್ಟುಹಬ್ಬ: ರೋಗಿಗಳಿಗೆ ಹಣ್ಣು ವಿತರಣೆ H.D. Deve Gowda's birthday: Fruit distribution to patients

ಲೋಕದರ್ಶನ ವರದಿ

ಸಿಂದಗಿ 19: ದೆಹಲಿಯ ಕೆಂಪುಕೋಟೆ ಮೇಲೆ ತ್ರಿವರ್ಣ ಧ್ವಜ ಹಾರಿಸಿದ ಹೆಮ್ಮೆಯ ಕನ್ನಡಿಗ, ಮಣ್ಣಿನ ಮಗ, ಮಾಜಿ ಪ್ರಧಾನಮಂತ್ರಿಗಳು ಹಾಗೂ ಜನತಾದಳ (ಜಾತ್ಯತೀತ) ಪಕ್ಷದ ರಾಷ್ಟ್ರೀಯ ಅಧ್ಯಕ್ಷರಾದ ಹೆಚ್‌.ಡಿ. ದೇವೇಗೌಡ ಸಾಹೇಬರ 94ನೇ ಜನ್ಮದಿನವನ್ನು ಯುವ ಜನತಾದಳ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶಿವಕುಮಾರ ಬಿರಾದಾರ ನೇತೃತ್ವದಲ್ಲಿ ಸಿಂದಗಿ ತಾಲೂಕ ಸಾರ್ವಜನಿಕ ಆಸ್ಪತ್ರೆಯಲ್ಲಿ ರೋಗಿಗಳಿಗೆ ಹಣ್ಣು ಹಂಪಲು ವಿತರಣೆ ಮಾಡಿ ದೇವೆಗೌಡರ ಹುಟ್ಟುಹಬ್ಬ ಆಚರಣೆ ಮಾಡಿದರು.  ಈ ಸಂದರ್ಭದಲ್ಲಿ ಆಲಮೇಲ ತಾಲೂಕ ಅಧ್ಯಕ್ಷ ಮೋಹ್ಮದ ಉಸ್ತಾದ, ಆಲಮೇಲ ತಾಲೂಕ ಯುವ ಘಟಕ ಅಧ್ಯಕ್ಷ ಪ್ರದೀಪ ನಾಯ್ಕೋಡಿ, ಹುಸೇನ ತಾಂಬೋಳಿ, ಭೀಮಾಶಂಕರ ರತ್ನಾಕರ ಸಿಂದಗಿ ಮತ್ತಿತರರು ಉಸ್ಥಿತರಿದ್ದರು.