ಹೂವಿನ ಹಡಗಲಿ

ಕೃಷಿ ಸಹಾಯಕ ನಿರ್ದೇಶಕರಾಗಿ ಎಚ್‌.ನಾಗರಾಜ

ಕೃಷಿ ಸಹಾಯಕ ನಿರ್ದೇಶಕರಾಗಿ ಎಚ್‌.ನಾಗರಾಜ

 ಹೂವಿನಹಡಗಲಿ 02: ಪಟ್ಟಣದ ಕೃಷಿ ಇಲಾಖೆಗೆ   ನೂತನವಾಗಿ ಆಗಮಿಸಿದ ಕೃಷಿ ಸಹಾಯಕ  ನಿರ್ದೇಶಕರಾದ ಎಚ್‌.ನಾಗರಾಜ ಇವರಿಗೆ  ಕಾವೇರಿ ಆಗ್ರೋ ಟ್ರೇಡರ್ಸ್‌ ಹಾಗೂ ಕರ್ನಾಟಕ ರಾಜ್ಯ ರೈತ ಸಂಘದ ವತಿಯಿಂದ ಸನ್ಮಾನಿಸಲಾಯಿತು.ಕಾವೇರಿ ಟ್ರೇಡರ್ಸ್‌ ಮಾಲೀಕರಾದ ಮಹೇಶನಾಯ್ಕ್‌ ಮಾತನಾಡಿ ಕೃಷಿ ಇಲಾಖೆಯ ಸರ್ಕಾರದಿಂದ ಸಿಗುವ ಸಬ್ಸಿಡಿ ಮತ್ತು ಕೃಷಿ ಉಪಕರಣಗಳು  ಓಷಧಿಗಳು,  ಪಂಪ್,   ತಾಡ್ ಪಾಲ್  ಕೃಷಿ ಉಪಕರಣಗಳಾದ ಎಡೆಕುಂಟೆ, ಬಿತ್ತನೆ ಕೂರಿಗೆ ಹಾಗೂ ಇತರೆ ಸಾಮಗ್ರಿಗಳನ್ನು ಉತ್ತಮ  ಗುಣಮಟ್ಟ ಹೆಚ್ಚುದಿನ ರೈತರಿಗೆ  ತಾಳಿಕೆ ಬರುವಂತೆ    ವ್ಯವಸ್ಥೆ ಕಲ್ಪಿಸಿಕೊಡಿ ಎಂದು ಹೇಳಿದರು.ಈ ವೇಳೆ  ಹಡಗಲಿ ಕೃಷಿ ಸಹಾಯಕ ನಿರ್ದೇಶಕರಾದ ಹೆಚ್‌.ನಾಗರಾಜ, ಕಾವೇರಿ ಟ್ರೇಡರ್ಸ್‌ ಮಾಲೀಕರಾದ  ಮಹೇಶ್ ನಾಯ್ಕ್‌, ಕರ್ನಾಟಕ ರಾಜ್ಯ ರೈತ ಸಂಘದ ತಾಲೂಕು ಪ್ರಧಾನ ಕಾರ್ಯದರ್ಶಿ ಹೊಳಗುಂದಿ   ಶಿವರಾಜ್ ಸಂಘಟನಾ  ಕಾರ್ಯದರ್ಶಿ ಡಿ. ಗೀರೀಶ್ ಹಾಗೂ ದುರ್ಗಪ್ಪ ಇದ್ದರು. 


ಸುದ್ದಿ ಓದಿ