ಗುಜರಾತ್ : 6 ಸಿಂಹದ ಮರಿಗಳ ಜನನ
ಜುನಾಗಡ, ಏ 06, ಇಲ್ಲಿನ ಸಕ್ಕರ್ ಬಾಗ್ ಮೃಗಾಲಯ ಹಾಗೂ ಅಂಬಾರ್ಡಿ ಸಫಾರಿ ಉದ್ಯಾನವನದಲ್ಲಿ ತಲಾ 3 ಸಿಂಹದ ಮರಿಗಳು ಸೇರಿದಂತೆ 6 ಮರಿಗಳ ಜನನವಾಗಿದೆ. ಸಕ್ಕರ್‌ಬಾಗ್ ಮೃಗಾಲಯದಲ್ಲಿ ಜನಿಸಿದ ಮೂರು ಮರಿಗಳನ್ನು ತಾಯಿ ಸಿಂಹಿಣಿ ಶುಶ್ರೂಷೆ ಮಾಡುತ್ತಿದೆ ಎಂದು ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಡಿ.ಸಿ.ವಾಸವಾಡ ತಿಳಿಸಿದ್ದಾರೆ.ಆದರೆ ಅಂಬಾರ್ಡಿಯಲ್ಲಿರುವ ತಾಯಿ ಸಿಂಹಿಣಿ ಈ ಹಿಂದೆ ಸ್ವಂತ ಮರಿಗಳನ್ನು ಕೊಂದಿದ್ದರಿಂದ, ನಾವು ಮರಿಗಳನ್ನು ಬೇರ್ಪಡಿಸಿದ್ದೇವೆ ಮತ್ತು ಅದರ ಪಾಲನೆಗಾಗಿ ಸಕ್ಕರ್‌ಬಾಗ್ ಮೃಗಾಲಯಕ್ಕೆ ಸ್ಥಳಾಂತರಿಸಲಾಗುತ್ತಿದೆ, '' ಎಂದು ಅವರು ಹೇಳಿದ್ದಾರೆ. ಕೆಲವೇ ದಿನಗಳಲ್ಲಿ ಒಟ್ಟು ಒಂಬತ್ತು ಸಿಂಹ ಮರಿಗಳು ಜನಿಸಿದಂತಾಗಿದೆ. ಇದಕ್ಕೂ ಮುನ್ನ ಏಪ್ರಿಲ್ 2 ರಂದು ರಾಜ್ಯದ ಅತ್ಯಂತ ಹಳೆಯ ಮೃಗಾಲಯದಲ್ಲಿ ಎರಡು ಗಂಡು ಮತ್ತು ಒಂದು ಹೆಣ್ಣು ಮರಿಗಳು ಜನಿಸಿದ್ದವು.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 