ಸಮುಧಾಯ ಭವನ ನಿರ್ಮಾಣ ಕಾಮಗಾರಿಗೆ ಗುದ್ದಿಲಿ ಪೂಜೆ
Guddi Puja for the construction of the community hall
ಉಗರಗೋಳ 01: ಹಳ್ಳಿ ಹಳ್ಳಿಗಳಲ್ಲಿ ಸಮುದಾಯ ಭವನಗಳನ್ನು ನಿರ್ಮಿಸುವುದರಿಂದ ಗ್ರಾಮಗಳ ಪ್ರತಿಯೊಂದು ಸಮಾಜದ ಜನರಿಗೆ ಅನುಕೂಲ ಕಲ್ಪಿಸಿದಂತಾಗುತ್ತದೆ ಎಂದು ಶಾಸಕ ವಿಶ್ವಾಸ ವೈದ್ಯ ಹೇಳಿದರು.
ಸವದತ್ತಿ ತಾಲೂಕಿನ ಉಗರಗೋಳ ಗ್ರಾಮದಲ್ಲಿ ಮಂಗಳವಾರ 49.00 ಲಕ್ಷ ರೂ ವೆಚ್ಚದಲ್ಲಿ ಸಿಎಮ್‌ಆಯ್‌ಡಿಪಿ ಯೋಜನೆಯಡಿ, ಶ್ರೀಬಸವೇಶ್ವರ ದೇವಸ್ಥಾನದ ಆವರಣದಲ್ಲಿ ಸಮುಧಾಯ ಭವನ ನಿರ್ಮಾಣ ಕಾಮಗಾರಿಗೆ ಗುದ್ದಿಲಿ ಪೂಜೆ ನೇರವೆರಿಸಿ ಮಾತನಾಡಿದ ಅವರು.
ಸಮುದಾಯ ಭವನಗಳು ಗ್ರಾಮೀಣ ಭಾಗದ ಜನರ ಅಗತ್ಯತೆ ಪೂರೈಸುತ್ತಿವೆ. ಈ ಕಾಮಗಾರಿ ಮುಗಿದ ಬಳಿಕ ಸಮುದಾಯ ಭವನವನ್ನು ಎಲ್ಲ ಸಮುದಾಯದವರೂ ಸದ್ಬಳಕೆ ಮಾಡಿಕೊಳ್ಳಬೇಕು ಎಂದರು.
ಯಲ್ಲಮ್ಮ ದೇವಸ್ಥಾನ ಅಭಿವೃದ್ದಿ ಪ್ರಾಧಿಕಾರದ ಸದಸ್ಯ ಸಿದ್ದನಗೌಡ ಗೂಡರಾಶಿ, ಯಲ್ಲಮ್ಮ ದೇವಸ್ಥಾನ ವೈವಸ್ಥಾಪನಾ ಸಮಿತಿ ಅಧ್ಯಕ್ಷ ರಾಮನಗೌಡ ತಿಪರಾಶಿ, ಮಂಜುನಾಥ ಕಾಳಪ್ಪನವರ, ನಿಂಗಪ್ಪ ಶಿದ್ದಕ್ಕನವರ, ನಿಂಗನಗೌಡ ಹರಳಕಟ್ಟಿ, ಹನಮಂತ ಶಿದ್ದಕ್ಕನವರ, ಶಿವನಗೌಡ ಮೇದಗೊಪ್ಪ, ಗೊವಿಂದಗೌಡ ತಿಪರಾಶಿ, ಬಸವರಾಜ ಗುಳೇದ, ನಿಂಗಪ್ಪ ಗೊವಪ್ಪನವರ, ಅಭಿಷಕ ತಿಪರಾಶಿ, ಮಾರುತಿ ಶಿಂಧೆ, ಪ್ರಲ್ಹಾದ ಕೆಳಗಡೆ, ನಾಗರಾಜ ಬಡೆಪ್ಪನವರ, ಬಸನಪ್ಪ ಅಳಗವಾಡಿ, ಪರಸಪ್ಪ ಇಮ್ರಾಪೂರ, ರಾಜೇಶ ಅಂಗಡಿ, ವಿಜಯ ನರಗುಂದ, ರಮೇಶ ಕರಿಕಟ್ಟಿ, ಸಂಜು ಚನ್ನಪ್ಪಗೌಡ್ರ, ಬಸು ರೂಗಿ ವೀರಭದ್ರ ಗುಳೇದ ಹಾಗೂ ಗ್ರಾಮಸ್ಥರು ಇದ್ದರು.
ಮಹಾರಾಷ್ಟ್ರ ಸಚಿವನ ಟಿಪಿಯಲ್ಲಿ ಬೆಳಗಾವಿ ಎಂದು ನಮೂದು : ಎಮ್ ಇಎಸ್ ಆಕ್ಷೇಪ, ಕ್ರಮ ಖಂಡಿತ ಎಂದ ಸಾಮಂತ
ಮತ್ತೆ ಬೆಳಗಾವಿಯಲ್ಲಿ ಭಾಷಾ ಕ್ಯಾತೆ ಆರಂಭಿಸಿದ ಎಮ್ ಇಎಸ್ : 22ರಂದು ಡಾಂಬರ ಮೋರ್ಚಾ ಮಾಡತಾರಂತೆ
ಇಂದು ರಾತ್ರಿ ಬೆಳಗಾವಿಗೆ ಮಹಾರಾಷ್ಟ್ರ ಶಾಸಕ ಸಾಮಂತ ಆಗಮನ : 31ರಂದು ಎಮ್ ಇಎಸ್ ಮುಖಂಡರ ಜತೆ ಸಭೆ, ಚರ್ಚೆ
ಕಂಟ್ರಿ ಬಂದೂಕು ತಯಾರಿಸುತ್ತಿದ್ದ ಖದೀಮರ ಬಂಧನ : 9 ಪಿಸ್ತೂಲ್ ವಶ: 13 ಜನ ಬಂಧನ
ಹಳೆದಿಗ್ಗೆವಾಡಿ ಗ್ರಾಮದ ಮಹಾದೇವ ಗಂಗಾಯಿ ಅಜ್ಜ ವಿಧಿವಶ
ಆರೈಕೆಗಿದ್ದವನಿಂದ 1.02 ಕೋಟಿಯ 930 ಗ್ರಾಂ ಚಿನ್ನ ಕಳ್ಳತನ: ಇಬ್ಬರ ಬಂಧನ, 73.03 ಲಕ್ಷದ ಚಿನ್ನ ವಶಕ್ಕೆ 