ಮನೆಗೊಂದು ಮರ ಬೆಳೆಸಿ: ಪರಿಸರ ಸಂರಕ್ಷಣೆಗೆ ಕರೆ

ಮನೆಗೊಂದು ಮರ ಬೆಳೆಸಿ: ಪರಿಸರ ಸಂರಕ್ಷಣೆಗೆ ಕರೆ  Grow a tree for every home: A call for environmental conservation.

ಮನೆಗೊಂದು ಮರ ಬೆಳೆಸಿ: ಪರಿಸರ ಸಂರಕ್ಷಣೆಗೆ ಕರೆ  

ಕೊಪ್ಪಳ 11: ಪರಿಸರ ಸಂರಕ್ಷಣೆಗಾಗಿ ಗಿಡ-ಮರಗಳನ್ನು ಬೆಳೆಸುವುದರ ಜೊತೆಗೆ ಗ್ರಾಮಸ್ಥರಲ್ಲಿ ಜಾಗೃತಿ ಮೂಡಿಸುವ ಅಗತ್ಯವಿದೆ ಎಂದು ಕೊಪ್ಪಳ ಇನ್ನರ್ ವೀಲ್ ಕ್ಲಬ್ ಅಧ್ಯಕ್ಷೆ ಮೀನಾಕ್ಷಿ ಬಣ್ಣದ ಭಾವಿ ಹೇಳಿದರು.  

ದದೆಗಲ್ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಆವರಣದಲ್ಲಿ ಕ್ಲಬ್ ವತಿಯಿಂದ ಆಯೋಜಿಸಿದ್ದ ಓಜೋನ್ ದಿನಾಚರಣೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಪ್ರತಿಯೊಬ್ಬರೂ ‘ಮನೆಗೊಂದು ಮರ’ ಬೆಳೆಸಿ ಗ್ರಾಮವನ್ನು ನಂದನವನವನ್ನಾಗಿ ಮಾಡಬೇಕು ಎಂದು ವಿದ್ಯಾರ್ಥಿಗಳಿಗೆ ಕರೆ ನೀಡಿದರು.  

ಓಜೋನ್ ಪದರದ ರಕ್ಷಣೆ, ಹಾನಿಕಾರಕ ರಾಸಾಯನಿಕಗಳ ಬಳಕೆ ಕಡಿಮೆ ಮಾಡುವುದು, ಪರಿಸರ ಸ್ನೇಹಿ ಉತ್ಪನ್ನಗಳನ್ನು ಬಳಸುವುದು ಹಾಗೂ ಮರಗಳನ್ನು ಬೆಳೆಸುವ ಮೂಲಕ ಪರಿಸರ ಸಂರಕ್ಷಿಸಬೇಕು ಎಂದು ಅವರು ತಿಳಿಸಿದರು. ಓಜೋನ್ ಪದರಕ್ಕೆ ಹಾನಿಯಾದರೆ ಮಾನವನ ಆರೋಗ್ಯ, ಪ್ರಾಣಿ-ಪಕ್ಷಿಗಳು ಹಾಗೂ ಪರಿಸರದ ಮೇಲೆ ದುಷ್ಪರಿಣಾಮ ಉಂಟಾಗಬಹುದು ಎಂದು ಎಚ್ಚರಿಸಿದರು.  

ಕಾರ್ಯದರ್ಶಿ ಶ್ರೀದೇವಿ ಪಾಟೀಲ, ಖಜಾಂಚಿ ಶಿಲ್ಪಾ ರಾಜು, ಎಲ್‌ಐಸಿಓ ಲತಾ ಪಟ್ಟಣಶೆಟ್ಟಿ, ಎಡಿಟರ್ ಮಾಲಾ ಎಸ್‌. ಕಂಚಿ, ಹಿರಿಯ ಸದಸ್ಯರಾದ ಡಾ. ರಾಧಾ ಕುಲಕರ್ಣಿ, ಶರಣಮ್ಮ ಪಾಟೀಲ, ಪಾರ್ವತಿ ಪಾಟೀಲ, ಶಾರದಾ ಸೇರಿದಂತೆ ಕ್ಲಬ್ ಪದಾಧಿಕಾರಿಗಳು, ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.