ಪೌರಕಾರ್ಮಿಕರ ಆರೋಗ್ಯದ ಕಡೆ ಹೆಚ್ಚಿನ ಗಮನ ಅಗತ್ಯ: ಡಾ. ಸರಿತಾ

ಪೌರಕಾರ್ಮಿಕರ ಆರೋಗ್ಯದ ಕಡೆ ಹೆಚ್ಚಿನ ಗಮನ ಅಗತ್ಯ: ಡಾ. ಸರಿತಾ  Greater attention needed towards the health of civic workers: Dr. Saritha


ಹಾವೇರಿ, ಸೆ.24: ಪ್ರತಿದಿನ ಶ್ರಮವಹಿಸಿ ಕಾರ್ಯನಿರ್ವಹಿಸುವ ಪೌರಕಾರ್ಮಿಕರು ತಮ್ಮ ಆರೋಗ್ಯದ ಕಡೆ ಹೆಚ್ಚಿನ ಗಮನ ನೀಡಬೇಕು ಎಂದು ಜಿಲ್ಲಾ ರೋಗವಾಹಕ ಮತ್ತು ಆಶ್ರಿತ ರೋಗಗಳ ನಿಯಂತ್ರಣಾಧಿಕಾರಿ ಡಾ. ಸರಿತಾ ಹೇಳಿದರು.  

ನಗರಸಭೆ ಹಾಗೂ ಆರೋಗ್ಯ ಇಲಾಖೆ ಸಹಯೋಗದಲ್ಲಿ ಪೌರಕಾರ್ಮಿಕರ ದಿನಾಚರಣೆ ಅಂಗವಾಗಿ ನಗರಸಭೆ ಸಭಾಂಗಣದಲ್ಲಿ ಆಯೋಜಿಸಿದ್ದ ಪೌರಕಾರ್ಮಿಕರ ಆರೋಗ್ಯ ತಪಾಸಣಾ ಶಿಬಿರದ ಮುಖ್ಯ ಅತಿಥಿಯಾಗಿ ಅವರು ಮಾತನಾಡಿದರು.  ಪೌರಕಾರ್ಮಿಕರು ಕೈ ಹಾಗೂ ಕಾಲುಗಳಿಗೆ ರಕ್ಷಣಾ ಕವಚ ಧರಿಸಿ ಕೆಲಸ ಮಾಡಬೇಕು. ರೋಗಾಣುಗಳು ದೇಹ ಪ್ರವೇಶಿಸದಂತೆ ಮುನ್ನೆಚ್ಚರಿಕೆ ವಹಿಸಬೇಕು ಎಂದು ಸಲಹೆ ನೀಡಿದರು.  

ನಗರಸಭೆ ಪೌರಾಯುಕ್ತ ಎಚ್‌. ಕಾಂತರಾಜು ಮಾತನಾಡಿ, ಆರೋಗ್ಯವೇ ಎಲ್ಲ ಸಂಪತ್ತಿಗಿಂತ ಶ್ರೇಷ್ಠ. ನಗರದ ಸ್ವಚ್ಛತೆ ಹಾಗೂ ಸುಂದರತೆಗೆ ಪೌರಕಾರ್ಮಿಕರ ಸೇವೆ ಸ್ಮರಣೀಯವಾಗಿದೆ. ಪೌರಕಾರ್ಮಿಕರು ತಮ್ಮ ಆರೋಗ್ಯವನ್ನು ಉತ್ತಮವಾಗಿ ಕಾಪಾಡಿಕೊಂಡರೆ ನೆಮ್ಮದಿಯ ಜೀವನ ನಡೆಸಲು ಸಾಧ್ಯ. ಅವರ ಅಪಾರ ಸೇವೆಯನ್ನು ಎಲ್ಲರೂ ಸ್ಮರಿಸುತ್ತೇವೆ ಎಂದು ಪೌರಕಾರ್ಮಿಕರಿಗೆ ಶುಭ ಕೋರಿದರು.  

ಈ ಸಂದರ್ಭದಲ್ಲಿ ತಾಲ್ಲೂಕು ಆರೋಗ್ಯಾಧಿಕಾರಿ ಡಾ. ಪ್ರಭಾಕರ ಕುಂದೂರ, ನಗರಸಭೆ ಹಿರಿಯ ಆರೋಗ್ಯ ನೀರೀಕ್ಷಕಿ ರೂಪಾ ನಾಯ್ಕ, ಕಿರಿಯ ಆರೋಗ್ಯ ನೀರೀಕ್ಷಕರಾದ ರಮೇಶ ಮುಂಜೋಜಿ, ಗೀರೀಶ ಹರವಿ, ತಬಸೂಮ್, ದುರ್ಗೇಶ ತಿಮ್ಮಾಪುರ, ಅಣ್ಣಪ್ಪ ತಗಡಿನಮನಿ, ರಾಜು ಮಾಳಗಿ ಸೇರಿದಂತೆ ನಗರಸಭೆ ಹಾಗೂ ಆರೋಗ್ಯ ಇಲಾಖೆ ಸಿಬ್ಬಂದಿ ಮತ್ತು ಪೌರಕಾರ್ಮಿಕರು ಉಪಸ್ಥಿತರಿದ್ದರು.