ದಾಂಡೇಲಿಯ ಪ್ರಾಥಮಿಕ ಶಾಲೆಯಲ್ಲಿ ಶನಿವಾರ ಸಂಜೆ ಅಜ್ಜ-ಅಜ್ಜಿಯರ ದಿನ ಆಚರಣೆ
Grandparents' Day celebrated on Saturday evening at Dandeli Primary School
ದಾಂಡೇಲಿ ಫೇ 14 : ದಾಂಡೇಲಿಯ ಕೆನರಾವೆಲ್ಫೇರ್ ಟ್ರಸ್ಟಿನ ಇಂಗ್ಲೀಷ್ ಮಿಡಿಯಂ ನರ್ಸರಿ ಮತ್ತು ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶನಿವಾರ ಸಂಜೆ ಅಜ್ಜ-ಅಜ್ಜಿಯರ ದಿನವನ್ನು ಸಂಭ್ರಮದಿಂದ ಆಚರಿಸಲಾಯಿತು. ಕಾರ್ಯಕ್ರಮವನ್ನು ಹಿರಿಯ ಪತ್ರಕರ್ತ ಎನ್. ಜಯಚಂದ್ರನ್ ಅವರು ಜ್ಯೋತಿ ಬೆಳಗಿಸುವ ಮೂಲಕ ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು, ಭಾರತೀಯ ಸಂಸ್ಕ್ರತಿಯಲ್ಲಿ ಕೂಡು ಕುಟುಂಬದ ವ್ಯವಸ್ಥೆಯ ಮಹತ್ವವನ್ನು ವಿವರಿಸಿ, ಹಿಂದೆ ತಂದೆ-ತಾಯಿ, ಚಿಕ್ಕಪ್ಪ, ದೊಡ್ಡಪ,್ಪ ಅಜ್ಜ ಹಿಅಜ್ಜಿ, ಮಕ್ಕಳು ಮೊಮ್ಮಕ್ಕಳು ಒಂದೇ ಸೂರಿನಡಿ ಪ್ರೀತಿ ವಿಶ್ವಾಸದಿಂದ ಬದುಕುತ್ತಿದ್ದೆವು. ಹಬ್ಬ- ಹರಿದಿನ, ಸಾಮೂಹಿಕ ಭೋಜನ ಎಲ್ಲವೂ ಕುಟುಂಬದ ಭಾಂಧವ್ಯವನ್ನು ಗಟ್ಟಿಗೊಳಿಸುತ್ತಿತ್ತು.
ಆದರೆ ಇಂದು ಆ ವ್ಯವಸ್ಥೆ ನಿಧಾನವಾಗಿ ಕ್ಷೀಣಿಸುತ್ತಿದೆ ಎಂದು ವಿಷಾದ ವ್ಯಕ್ತ ಪಡಿಸಿದರು. 1978 ರಲ್ಲಿ ಅಮೇರಿಕಾದಲ್ಲಿ ಆರಂಭವಾದ ಗ್ಯ್ರಾಂಡ್ ಪೇರೆಂಟ್ಸ್ ಡೇ, ಹಿನ್ನೆಲಯನ್ನು ವಿವರಿಸಿದ ಅವರು ಅಜ್ಜ-ಅಜ್ಜಿಯರ ನಿಷ್ಕಲ್ಮಶ ಪ್ರೀತಿಯ ಮಹತ್ವವನ್ನು ಮಕ್ಕಳಿಗೆ ತಿಳಿಸಬೇಕು. ಮಕ್ಕಳನ್ನು ಅಜ್ಜ-ಅಜ್ಜಿಯರ ಪ್ರೀತಿಯಿಂದ ದೂರಮಾಡಬಾರದು ಎಂದು ಪಾಲಕರಿಗೆ ಕರೆ ನೀಡಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಶಾಲಾ ಮುಖ್ಯಾಧ್ಯಾಪಕ ನಾರಾಯಣ ನಾಯ್ಕ ಮಾತನಾಡಿ, ಸಂಬಂಧಗಳ ಕೊಂಡಿಗಳು ಕಳಚದಂತೆ ಮಕ್ಕಳಲ್ಲಿ ಅಜ್ಜ-ಅಜ್ಜಿಯರ ಪ್ರೀತಿ, ಮಾರ್ಗದರ್ಶನ ದೊರೆಯುವಂತೆ ಮಾಡುವದು ಪಾಲಕರ ಕರ್ತವ್ಯ ಎಂದು ನುಡಿದರು. ಕಾರ್ಯಕ್ರಮದ ಅತಿಥಿಗಳಾಗಿ ಪ್ರಶಾಂತ ಬಸ್ರೂತೇಕರ್, ರಾಘವೇಂದ್ರ ಗಡಕರ್, ರೇಣುಕಾ ಕಿಲ್ಲೆಕರ್, ಅಶೋಕ ಮಾನೆ, ಶಿಕ್ಷಕರಾದ ಸುಜಾತಾ ಬೋಜ್, ಫಿರ್ದೋಶ್ ಉಪಸ್ಥಿತರಿದ್ದರು.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 