ಅಜ್ಜನ ಜಾತ್ರೆ: ಭಕ್ತರಿಗೆ ವಿಶೇಷ ಪ್ರಸಾದ ವ್ಯವಸ್ಥೆ
Grandfather's Fair: Special Prasada arrangements for devotees
ತಾಳಿಕೋಟಿ 28 : ಪಟ್ಟಣದ ಆರಾಧ್ಯ ದೈವ ಖಾಸ್ಗತ ಮಹಾ ಶಿವಯೋಗಿಗಳ ಜಾತ್ರೋತ್ಸವದ ಕೊನೆಯ ದಿನವಾದ ಸೋಮವಾರದಂದು ಜಾತ್ರೆಯ ವಿಶೇಷ ಕಾರ್ಯಕ್ರಮವಾದ ಆನೆ ಅಂಬಾರಿ ಹಾಗೂ ರಥೋತ್ಸಕ್ಕೆ ಆಗಮಿಸುವ ಭಕ್ತಾದಿಗಳಿಗೆ ಗಜಾನನ ವೃತ್ತ ಬಳಗ, ಮಾನಸಿಂಗ್ ಗೆಳೆಯರ ಬಳಗ ಹಾಗೂ ಮಲ್ಲಿಕಾರ್ಜುನ ತರುಣ ಸಂಘದ ಸಹಯೋಗದಲ್ಲಿ ವಿಶೇಷ ಸಾಬುದಾನಿ ಸುಸಲಾ, ಭಜಿ ಹಾಗೂ ಕರದಂಟು ಪ್ರಸಾದ ವ್ಯವಸ್ಥೆಯನ್ನು ಮಾಡಲಾಗಿತ್ತು. ಈ ಸಂದರ್ಭದಲ್ಲಿ ಪ್ರಸಾದ ವಿತರಣೆಗೆ ಚಾಲನೆ ನೀಡಿ ಮಾತನಾಡಿದ ಬಳಗದ ಅಧ್ಯಕ್ಷ ಮಾನಸಿಂಗ್ ಕೊಕಟನೂರ ಅವರು ಖಾಸ್ಗತ ಅಜ್ಜನ ಜಾತ್ರೆ ಇಡೀ ರಾಜ್ಯದಲ್ಲಿಯೇ ಹೆಸರುವಾಸಿಯಾದ ಜಾತ್ರೆಯಾಗಿ ಇಂದು ಬೆಳದಿದೆ.
ಮಠದ ಪೂಜ್ಯ ಸಿದ್ದಲಿಂಗ ದೇವರು ಈ ಭಾಗದ ಭಕ್ತರನ್ನು ಆಧ್ಯಾತ್ಮಿಕವಾಗಿ ಸಂಸ್ಕರಿಸುವ ಕೆಲಸ ಮಾಡುತ್ತಿದ್ದಾರೆ. ನಾವು ನಮ್ಮ ಬಳಗದಿಂದ ಕಳೆದ 22 ವರ್ಷಗಳಿಂದ ಪ್ರಸಾದ ಸೇವೆ ಮಾಡುತ್ತಿದ್ದೇವೆ ಪ್ರತಿ ವರ್ಷವೂ ವಿಭಿನ್ನವಾದ ಆಹಾರ ಪದಾರ್ಥಗಳನ್ನು ಸಿದ್ದುಪಡಿಸುತ್ತಿರುವುದು ನಮ್ಮ ವಿಶೇಷತೆಯಾಗಿದೆ. ಇವತ್ತು ಸುಮಾರು ಹತ್ತು ಸಾವಿರ ಭಕ್ತರಿಗೆ ಆಗುವಷ್ಟು ಪ್ರಸಾದವನ್ನು ಸಿದ್ದಪಡಿಸಿದ್ದೇವೆ. ಭಕ್ತರು ಶಾಂತ ರೀತಿಯಿಂದ ಪ್ರಸಾದವನ್ನು ಸ್ವೀಕರಿಸಿ ಅಜ್ಜನ ಕೃಪೆಗೆ ಪಾತ್ರರಾಗಬೇಕು ಎಂದರು.
ಪ್ರಸಾದ ಸೇವೆಯಲ್ಲಿ ಬಳಗದ ಸದಸ್ಯರಾದಕಸ್ತೂರಿ ಪ್ರಥಮಶೇಟ್ಟಿ, ಸಂತೋಷ ಕುಲಕರ್ಣಿ, ಅನಿಲ್ ಕಸ್ತೂರಿ, ಕುಮಾರ ಸಜ್ಜನ, ಅಮರ್ಪ ಗೋನಾಳ, ರಮೇಶ ಮಾಲಿಪಾಟೀಲ, ಅನಿಲ್ ಕುಂಬಾರ, ಚಿನ್ನ ಹಿಪ್ಪರಗಿ, ಸೋಮು ಗೆಜ್ಜಿ, ಬಸವರಾಜ ಹೊಟ್ಟಿ, ಮಲ್ಲಿಕಾರ್ಜುನ ಕಸಭೆಗೌಡರ, ರಮೇಶ ಮದ್ರಾಸಿ, ವೀರೇಶ ಕಸಭೆಗೌಡ್ರ್, ಶರಣಗೌಡ ಗೊಟಗುಣಕಿ, ಪಾಪು ಸಗರ, ರವೀಂದ್ರ ಕೊಳಕೂರ, ಮಹಮ್ಮದ ಸಾಲವಾಡಗಿ, ಅಪ್ಪುಗೌಡ ಪಾಟೀಲ, ವೀವೇಕ ಪತ್ತಾರ, ಮಹಾಂತೇಶ ಗೋಗಿ, ದತ್ತು ಉಭಾಳೆ, ರವಿ ಚಂದುಕರ, ರಾಜು ಸಜ್ಜನ, ಪ್ರಕಾಶ ಹಜೇರಿ, ಜಗದೀಶ ಬಿಳೇಭಾವಿ ಮತ್ತೀತರರು ಇದ್ದರು.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 