ಬಿಲ್ಡರ್‌ಗಳ ಲಾಬಿಗೆ ಮಣಿದ ಸರ್ಕಾರ: ಆಪ್ ಆಕ್ರೋಶ
ಬೆಂಗಳೂರು, ಮೇ 6,43 ದಿನಗಳ ಲಾಕ್‌ಡೌನ್ ಸಂದರ್ಭದಲ್ಲಿ ವಲಸೆ ಕಾರ್ಮಿಕರನ್ನು ಗೌರವದಿಂದ ನಡೆಸಿಕೊಳ್ಳದ ಸರ್ಕಾರ, ಈಗ ಬಿಲ್ಡರ್‌ಗಳ, ಉಳ್ಳವರ ಲಾಬಿಗೆ ಮಣಿದು ಉಳಿದ ಕಾರ್ಮಿಕರನ್ನು ಅವರವರ ಊರಿಗೆ ಕಳುಹಿಸಲು ಮೀನಾಮೇಷ ಎಣಿಸುತ್ತಿರುವುದು ನಿಜಕ್ಕೂ ವಿಷಾದನೀಯ ಎಂದು ಆಮ್‌ಆದ್ಮಿ ಪಕ್ಷ(ಆಪ್) ಖಂಡಿಸಿದೆ.ಪರ ಊರುಗಳಿಂದ ಬದುಕು ಕಟ್ಟಲು ಬಂದಂತಹ ದಿನಗೂಲಿ ಕಾರ್ಮಿಕರನ್ನು ಕಾಲು ಕಸದಂತೆ ಕಂಡ ಸರ್ಕಾರ ಹಾಗೂ ಕಾರ್ಮಿಕ ಇಲಾಖೆ ಈಗ ಕೈ ಮುಗಿದು ಊರಿಗೆ ಹೋಗಬೇಡಿ ಎಂದು ಬೇಡಿಕೊಳ್ಳುತ್ತಿದೆ. ಕಾರ್ಮಿಕರು ತಮ್ಮ ಊರುಗಳಿಗೆ ಸೇರಿದರೆ, ಕಟ್ಟಡ ನಿರ್ಮಾಣದಂತಹ ಕಾಮಗಾರಿಗಳಿಗೆ ಕೂಲಿ ಕೆಲಸ ಮಾಡಲು ಕಾರ್ಮಿಕರು ಸಿಗುವುದಿಲ್ಲ. ಇದರಿಂದಾಗಿ ರಿಯಲ್ ಎಸ್ಟೇಟ್ ದೂರ್ತರ ಕೆಲಸಗಳು ನಿಂತು ಹೋಗುತ್ತವೆ ಎಂಬ ಕಾರಣಕ್ಕಾಗಿ ಹೊರಗೆ ಹೋಗದಂತೆ ತಡೆಯುವ ಸಂಚು ಇದಾಗಿದೆ ಎಂದು ರಾಜ್ಯ ಆಪ್ ಮುಖಂಡರು ಹೇಳಿದ್ದಾರೆ.
ಲಾಕ್‌ಡೌನ್ ಸಮಯದಲ್ಲಿ ಕಾರ್ಮಿಕರಿಗೆ ಊಟ ಸಿಗುತ್ತಿದೆಯೇ, ಅವರಿಗೆ ಸಂಬಳ ಹೋಗುತ್ತಿದೆಯೇ ಎಂಬುದರ ಬಗ್ಗೆ ಕಿಂಚಿತ್ತೂ ಯೋಚಿಸದೇ ತಮ್ಮ ಪಾಡಿಗೆ ಇದ್ದ ಬಿಲ್ಡರ್‌ಗಳು, ಅಧಿಕಾರಿಗಳು, ಸಚಿವರ ಮೇಲೆ ಸರ್ಕಾರದ ಮೇಲೆ ಒತ್ತಡ ಹೇರುತ್ತಿರುವುದು ನಿಜಕ್ಕೂ ಅಮಾನವೀಯ ನಡೆ. ಕಾರ್ಮಿಕರ ಖಾತೆಗೆ 2 ಸಾವಿರ ರೂ. ನೀಡುವುದಾಗಿ ಹೇಳಿದ್ದ ಸರ್ಕಾರ, ಈ ಭರವಸೆಯನ್ನೆ ಮರೆತು ಕಾರ್ಮಿಕರಿಗೆ ಯಾವುದೇ ರೀತಿಯ ಸೌಲಭ್ಯಗಳನ್ನೂ ನೀಡದೆ, ಈಗ ಕೆಲಸ ನೀಡುತ್ತೇವೆ ತೆರಳಬೇಡಿ ಎಂದು ಕೈಮುಗಿದು ಹೇಳುತ್ತಿರುವುದು ವ್ಯಂಗ್ಯ ಎಂದು ಅದು ಟೀಕಿಸಿದೆ.
ಕಾರ್ಮಿಕರಿಗೆ ಸರಬರಾಜು ಮಾಡುತ್ತಿದ್ದ ಪ್ರತಿ ಆಹಾರಕ್ಕೆ 26 ರೂ. ಪಾವತಿ ಮಾಡುತ್ತಿದ್ದ ಕಾರ್ಮಿಕ ಇಲಾಖೆ ಒಂದೂ ದಿನವೂ ಊಟದ ಗುಣಮಟ್ಟವನ್ನು ಪರೀಕ್ಷಿಸಲಿಲ್ಲ. ಹಳಸಿದ ಆಹಾರ ನೀಡಿ ಈಗ ಇಲ್ಲೇ ಇರಿ ಎಲ್ಲೂ ಹೋಗಬೇಡಿ ಎನ್ನಲು ಸರ್ಕಾರಕ್ಕೆ ಯಾವುದೇ ನೈತಿಕತೆ ಇಲ್ಲ. ಇದುವರೆಗೂ ಸುಮಾರು 96 ಸಾವಿರ ಕಾರ್ಮಿಕರು ತಮ್ಮ ತಮ್ಮ ಊರುಗಳಿಗೆ ತೆರಳಿದ್ದಾರೆ. 43 ದಿನಗಳ ಸಮಯವಿದ್ದರೂ ಇಷ್ಟೊಂದು ಮಂದಿಯ ಆರೋಗ್ಯ ತಪಾಸಣೆ ಮಾಡಲಿಲ್ಲ, ಶೆಡ್‌ಗಳಿಗೆ ಹೋಗಿ ಆಹಾರ ಕಿಟ್ ವಿತರಿಸಲಿಲ್ಲ, ಗರ್ಭಿಣಿ ಮಹಿಳೆಯರ ಆರೋಗ್ಯ ವಿಚಾರಿಸಲಿಲ್ಲ. ವೇತನ ನೀಡದಿದ್ದರೆ ಕಠಿಣ ಕ್ರಮ ಕೈಗೊಳ್ಳುವುದಾಗಿ ಹೇಳಿದ್ದ ಕಾರ್ಮಿಕ ಇಲಾಖೆ ಒಂದೂ ದಿನವೂ ಕಾರ್ಮಿಕರ ನೋವನ್ನು ಕಿವಿಯಾರೆ ಕೇಳಿಲ್ಲದಿರುವುದು ಸಂಪೂರ್ಣವಾಗಿ ಕಾರ್ಮಿಕ ಸಚಿವರ ಬೇಜವಾಬ್ದಾರಿ ನಡೆ ಎಂದು ಪಕ್ಷ ರಾಜ್ಯ ಮಾಧ್ಯಮ ಸಂಚಾಲಕ ಜಗದೀಶ್ ವಿ.ಸದಂ ಟೀಕಿಸಿದ್ದಾರೆ.ನರೇಗಾ ಕಾಮಗಾರಿಗಳನ್ನು ಹೆಚ್ಚಳಗೊಳಿಸಿ, ಪ್ರತಿಯೊಬ್ಬರಿಗೂ ಜಾಬ್ ಕಾರ್ಡ್ ನೀಡಬೇಕು.ನರೇಗಾ ಕೂಲಿಯನ್ನು ಹೆಚ್ಚಳ ಮಾಡಬೇಕು.ಮಡಿಲು ಯೋಜನೆ ಆಧಾರದಲ್ಲಿ ಗರ್ಭಿಣಿ ಮಹಿಳೆಯರಿಗೆ ಹೆಚ್ಚಿನ ಸಹಾಯಧನ ನೀಡಬೇಕು.ವಲಸೆ ಕಾರ್ಮಿಕರಿಗೆ ಪ್ರತ್ಯೇಕ ನಿಯೋಗ ರಚಿಸಬೇಕೆಂದು ಆಪ್ ಸರ್ಕಾರಕ್ಕೆ ಮನವಿ ಸಲ್ಲಿಸಿದೆ.
ಒಬ್ಬರಿಗೆ ಒಂದೇ ಹುದ್ದೆ ಕಾಂಗ್ರೆಸ್ ಪಕ್ಷದ ನಿಯಮದಿಂದ ಕೆಪಿಸಿಸಿ ಅಧ್ಯಕ್ಷ ಸ್ಥಾನ ಕೈ ತಪ್ಪಿದೆ : ಸಚಿವ ಸತೀಶ ಜಾರಕಿಹೊಳಿ
ಖಾತೆ ಮುಟ್ಟುಗೋಲಾದರೂ ಶಿವಂ ಸಂಸ್ಥೆಗೆ ಜನರಿಂದ ಇನ್ನೂ ದುಡ್ಡು ಠೇವಣಿ : ವಂಚನೆ ಜಾಲದಿಂದ ದೂರ ಇರಿ, ಜನರಿಗೆ ಸಿಐಡಿ ಡಿಐಜಿಪಿ ಗುಳೇದ್ ಮನವಿ
ಬಹುಕೋಟಿ ಹಣ ವಂಚನೆ : ಆದಿತ್ಯರಾಜ್ ಕೇಸು ಸಿಐಡಿಗೆ, ಸಿಇಓ ವಿರುದ್ಧ ಲುಕ್ ಔಟ್ ನೋಟಿಸ್ ಜಾರಿ, ಏರ್ಪೋರ್ಟ್ ಗಳಿಗೆ ಮಾಹಿತಿ ರವಾನೆ
ಚಿನ್ನ ದೋಚಿದ್ದ ಖದೀಮನ ಬಂಧನ : 15.73 ಲಕ್ಷ ಮೌಲ್ಯದ 103.97 ಗ್ರಾಂ ಚಿನ್ನ ವಶ
ಕಣಗಲಾ ಬಳಿ ಲಾರಿ, ದ್ವಿಚಕ್ರವಾಹನ ನಡುವೆ ಅಪಘಾತ : ಇಬ್ಬರ ಸಾವು
ಗಾಂಜಾ ಮಾರಾಟಗಾರರ ಮೇಲೆ ದಾಳಿ; 9,21 ಲಕ್ಷದ ವಸ್ತುಗಳ ವಶ, ಐವರ ಬಂಧನ 