ಸರ್ಕಾರಿ ಅಧಿಕಾರಿಗಳು ಸಾರ್ವಜನಿಕರೊಂದಿಗೆ ಸೌಜನ್ಯದಿಂದ ವರ್ತಿಸಬೇಕು: ಲೋಕಾಯುಕ್ತ ಡಿವೈಎಸ್ಪಿ
Government officials should behave courteously with the public: Lokayukta DySP
ಸರ್ಕಾರಿ ಅಧಿಕಾರಿಗಳು ಸಾರ್ವಜನಿಕರೊಂದಿಗೆ ಸೌಜನ್ಯದಿಂದ ವರ್ತಿಸಬೇಕು: ಲೋಕಾಯುಕ್ತ ಡಿವೈಎಸ್ಪಿ
ಬ್ಯಾಡಗಿ 11 : ಅಧಿಕಾರಿಗಳು ಸಾರ್ವಜನಿಕರ ಜತೆಗೆ ಉದ್ಧಟತನ ತೋರಿದೆ ಸೌಜನ್ಯವಾಗಿ ವರ್ತಿಸಿ, ಜನಸಾಮಾನ್ಯರ ಕೆಲಸ ನಿರ್ವಹಿಸಿ ಎಂದು ಲೋಕಾಯುಕ್ತ ಅಧಿಕಾರಿ ಮಧುಸೂದನ ಸಿ ಅಧಿಕಾರಿಗಳಿಗೆ ಸೂಚಿಸಿದರು. ಪಟ್ಟಣದ ತಹಸೀಲ್ದಾರ್ ಕಚೇರಿಯಲ್ಲಿಲೋಕಾಯುಕ್ತ ಅಧಿಕಾರಿಗಳಿಂದ ಬುಧವಾರ ನಡೆದ ಸಾರ್ವಜನಿಕ ಕುಂದುಕೊರತೆ, ಅಹವಾಲು ಸ್ವಿ?ಕಾರ ಮತ್ತು ಜನ ಸಂಪರ್ಕ ಸಭೆಯಲ್ಲಿಮಾತನಾಡಿದ ಅವರು, ”ಅಧಿಕಾರಿಗಳು ಸಾರ್ವಜನಿಕರೊಂದಿಗೆ ಉದ್ಧಟತನದಿಂದ ಮಾತನಾಡಿದ ಬಹಳಷ್ಟು ಕೇಸ್ಗಳು ದಾಖಲಾದ ಉದಾಹರಣೆಗಳಿವೆ. ಹೀಗಾಗಿ ಸೌಜನ್ಯದಿಂದ ಮಾತನಾಡಿ. ಜನಸಾಮಾನ್ಯರನ್ನು ವಿನಾಕಾರಣ ಕಚೇರಿಗಳಿಗೆ ಅಲೆದಾಡಿಸದೆ ಕೆಲಸಗಳನ್ನು ನಿರ್ವಹಿಸಿ” ಎಂದರು.
ಲೋಕಾಯುಕ್ತ ಸಂಸ್ಥೆಯು ಕೇವಲ ಭ್ರಷ್ಟಾಚಾರದಂತಹ ತಪ್ಪುಗಳನ್ನಷ್ಟೆ? ಹುಡುಕುವುದಕ್ಕಲ್ಲ. ಅಧಿಕಾರಿಗಳ ಮತ್ತು ಜನಸಾಮಾನ್ಯರ ಲೋಪದೋಷಗಳನ್ನು ಸರಿಪಡಿಸಲು ಕೆಲಸ ಮಾಡುತ್ತದೆ. ಅಧಿಕಾರಿಗಳಿಗೆ ತೊಂದರೆಗಳಾಗುತ್ತಿದ್ದರೆ ನಿರ್ಭೀತಿಯಿಂದ ಲೋಕಾಯುಕ್ತರ ಬಳಿ ಹೇಳಿಕೊಳ್ಳಬಹುದು. ಅಧಿಕಾರಿಗಳ ಸಮಸ್ಯೆಗಳನ್ನು ಆಲಿಸಲು ಲೋಕಾಯುಕ್ತ ಅಧಿಕಾರಿಗಳು ಸಿದ್ಧ” ಎಂದು ಹೇಳಿದರು. ಅಹವಾಲು ಸ್ವಿ?ಕಾರ ಸಭೆಯಲ್ಲಿ ಪ್ರಚಾರದ ಕೊರತೆಯಿಂದ ಕೇವಲ 1 ಲಿಖಿತ ಅರ್ಜಿಗಳು ಮೌಖಿಕವಾಗಿ 2ಅರ್ಜಿಗಹು ಸ್ವೀಕೃತಗೊಂಡವು. ಮೊದಲನೇ ಲಿಖಿತ ಅರ್ಜೀ ಗ್ರಾಂ ಪಂ ಸಿಬ್ಬಂದಿ ಆಗಮಿಸಿ, ತಾಲೂಕಿನ ಬಡಮಲ್ಲಿ ಗ್ರಾಪಂ ವ್ಯಾಪ್ತಿಯಲ್ಲಿ ಸರಕಾರಿ ಕರಾಬು ಜಮೀನಿನಲ್ಲಿ ವೈಯಕ್ತಿಕ ಬೆಳೆ ಬೆಳೆದಿದ್ದು ಅಲ್ಲಿ ಅಕ್ಕಪಕ್ಕದ ಸಾರ್ವಜನಿಕರಿಗೆ ತೊಂದರೆಯಾಗುತ್ತಿದೆ ಎಂದು ಲೋಕಾಯುಕ್ತ ಅಧಿಕಾರಿಗಳಿಗೆ ದೂರವನ್ನು ನೀಡಿದರು.ಈ ಸಂದರ್ಭದಲ್ಲಿ ಲೋಕಾಯುಕ್ತ ಅಧಿಕಾರಿಗಳಾದ.ಜಾಧವ,ವಿಶ್ವನಾಥ ಕಬ್ಬೂರಿ, ದಾದಾವಲಿ ಕೆ.ಎಚ್., ತಹಸೀಲ್ದಾರ್ ಚಂದ್ರಶೇಖರ್ ನಾಯ್ಕ, ತಾಲೂಕು ಕಾರ್ಯನಿರ್ವಾಹಕ ಅಧಿಕಾರಿ ಕೆ ಎಂ ಮಲ್ಲಿಕಾರ್ಜುನ, ಅಬಕಾರಿ ಇಲಾಖೆ ಅಧಿಕಾರಿ ತಿರುಮಲೆಶ.ಪುರಸಭೆ ಮುಖ್ಯ ಅಧಿಕಾರಿ ವಿನಯ್ ಕುಮಾರ್ ಹೊಳೆಯಪ್ಪ ಗೋಳ.ತಾಲೂಕು ವೈದ್ಯಾಧಿಕಾರಿ ಡಾಕ್ಟರ್ ಕಾಂತೇಶ ಭಜಂತ್ರಿ, ಹಾಗೂ ಎಲ್ಲ ಇಲಾಖೆಯ ಅಧಿಕಾರಿಗಳು ಸಿಬ್ಬಂದಿಗಳು ಮತ್ತು ಗ್ರಾಮ ಪಂಚಾಯತಿಯ ಅಭಿವೃದ್ಧಿ ಅಧಿಕಾರಿಗಳು ಸಾರ್ವಜನಿಕರು ಉಪಸ್ಥಿತರಿದ್ದರು.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 