ಹೆಸರು ಖರೀದಿಸದ ಸರ್ಕಾರ: ರೈತರಿಗೆ ದೊಡ್ಡ ಹಾನಿ

ಲೋಕದರ್ಶನ ವರದಿ 

ನವಲಗುಂದ 08: ಸರ್ಕಾರ ರೈತರಿಂದ ಹೆಸರು ಖರೀದಿಸದೆ ಇರುವದರಿಂದ ರೈತರು ಖಾಸಗಿ ವ್ಯಾಪಾರಸ್ತರಿಗೆ ಕಡಿಮೆ ದರದಲ್ಲಿ ಮಾರಾಟ ಮಾಡುತ್ತಿದ್ದಾರೆ ಇದರಿಂದ ರೈತರಿಗೆ ದೊಡ್ಡ ಹಾನಿಯಾಗಿದೆ ಎಂದು ಸರ್ಕಾರದ ವಿರುದ್ದ ಕಾಂಗ್ರೆಸ್ ಮುಖಂಡ ನವಲಗುಂದ ವಿಧಾನ ಸಭಾ ಕ್ಷೇತ್ರದ ಮಾಜಿ ಶಾಸಕ ಎನ್‌.ಹೆಚ್‌.ಕೋನರಡ್ಡಿ ಆಕ್ರೋಶ ವ್ಯಕ್ತಪಡಿಸಿದರು. 

  ಅವರು ಇಂದು ನವಲಗುಂದ ಎಪಿಎಮ್‌ಸಿ ಯಲ್ಲಿ ಇರುವ ಹೆಸರು ಖರೀದಿ ಕೇಂದ್ರಕ್ಕೆ ಭೇಟಿ ನೀಡಿ ಮಾತನಾಡಿದ ಅವರು ಸೊಸೈಟಿ ಅವರು ರೈತರಿಂದ ಹೆಸರು ಖರೀದಿ ಮಾಡಿ ಪೆಡರೇಶನ್‌ಗೆ ಕಳಿಸಿದರೆ ತೇವಾಂಶ ಬಂದಿಲ್ಲ ಎಂದು ಕುಂಟು ನೆಪಹೇಳಿ ರೈತರ ಹೆಸರು ಕಾಳನ್ನು 8 ಲೋಡಗಳನ್ನು ಕಳಿಸಿದರೆ ಕೇವಲ 3 ಲೋಡಗಳನ್ನು ತೆಗೆದುಕೊಂಡು 5 ಲೋಡಗಳನ್ನು ವಾಪಾಸ ಕಳಿಸಿದ್ದಾರೆ ಎಂದು ರೈತರು ಹೇಳಿದರು. ಖರೀದಿ ಕೇಂದ್ರವನ್ನು ಹೆಸರಿಗೆ ಮಾತ್ರ ಪ್ರಾರಂಭಿಸಿದ್ದು ರೈತರಿಗೆ ಯಾವುದೇ ಪ್ರಯೋಜನವಾಗಲಿಲ್ಲ ಅನಿವಾರ್ಯವಾಗಿ ರೈತರು ಖಾಸಗಿ ಮಾರುಕಟ್ಟೆಯಲ್ಲಿ ಮಾರಾಟ ಮಾಡಿ ತಮ್ಮ ಅಡಚನೆ ನಿವಾರಿಸಿಕೊಳ್ಳುತ್ತಿದ್ದಾರೆ. ರೈತರು ನವಲಗುಂದ ವಿಧಾನ ಸಭಾ ಕ್ಷೇತ್ರದ ನವಲಗುಂದ, ಅಣ್ಣಿಗೇರಿ, ಹುಬ್ಬಳ್ಳಿ, ಶಿರಗುಪ್ಪಿ, ಹೆಬಸೂರ ಮುಂತಾದ ಕಡೆ ರಸ್ತೆ ತಡೆಮಾಡಿ ಮನವಿ ಸಲ್ಲಿಸಿ ಹೆಸರು ಖರೀದಿಸಲು ಅಧಿಕಾರಿಗಳಿಗೆ ಒತ್ತಾಯಿಸಿದರೂ ಸರ್ಕಾರ ಯಾವುದೇ ಕ್ರಮ ತೆಗೆದುಕೊಳ್ಳಲಿಲ್ಲ. ಎಲ್ಲ ರೈತರಿಗೆ ಇಲ್ಲಿಯವರೆಗೂ ಪೂರ್ತಿ ಬೆಳೆ, ವಿಮೆ ಪರಿಹಾರ ಹಾಗೂ ಮನೆ ಬಿದ್ದವರಿಗೆ ಪರಿಹಾರ ನೀಡದೇ ತಾರತಮ್ಯ ಮಾಡಿದ್ದಾರೆ. ರೈತರ ಹಾಗೂ ಸಾರ್ವಜನಿಕರಿಗೆ ಸಂಚರಿಸಲು ರಸ್ತೆಗಳು ಕೂಡಾ ಸರಿ ಇಲ್ಲದೆ ದುರಸ್ತಿ ಮಾಡದೆ ಇರುವದರಿಂದ ಅವರಗೋಳು ಕೇಳಲು ಸರ್ಕಾರಕ್ಕೆ ಕಣ್ಣು ಇಲ್ಲಾ ಕಿವಿಯು ಇಲ್ಲ ಎಂದು ಸರ್ಕಾರದ ವಿರುದ್ದ ಕೋನರಡ್ಡಿ ಹರಿಹಾಯ್ದರು. 

ಈ ಸಂದರ್ಭದಲ್ಲಿ ನಾವಳ್ಳಿ ಗ್ರಾ.ಪಂ ಸದಸ್ಯ ಜಿ.ಎಮ್‌. ಮಣಕವಾಡ, ಮುಖಂಡರುಗಳಾದ ಬಿ.ವ್ಹಿ.ಪಾಟೀಲ, ಎಸ್‌.ಕೆ.ಅಂಗಡಿ, ರಾಮಚಂದ್ರ​‍್ಪ ಅಂಗಡಿ, ಯಲ್ಲಪ್ಪ ನಾಗನೂರ, ಶ್ರೀಶೈಲ ಬಸವರಡ್ಡಿ, ಮಾಂತಗೌಡ ಸಾಲಮನಿ, ಕುಮಾರ ಮಾದರ, ಬಸು ತಳವಾರ, ಹನಮಂತ ಕೆಳಗೇರಿ ಮುಂತಾದವರು ಉಪಸ್ಥಿತರಿದ್ದರು.