ವಾಳಕಿ ಗ್ರಾಮದ ಅಭಿವೃದ್ಧಿಗೆ 8.47 ಕೋಟಿ ಸರ್ಕಾರದಿಂದ ಅನುದಾನ ಹಿಪ್ರಕಾಶ ಹುಕ್ಕೇರಿ
Government grants Rs 8.47 crore for the development of Valaki village Hiprakash Hukkeri
ಚಿಕ್ಕೋಡಿ 23: ಚಿಕ್ಕೋಡಿ- ಸದಲಗಾ ಮತಕ್ಷೇತ್ರ ವ್ಯಾಪ್ತಿಯ ತಾಲ್ಲೂಕಿನ ವಾಳಕಿ ಗ್ರಾಮದಲ್ಲಿ ವಿವಿಧ ಮೂಲಭೂತ ಸೌಲಭ್ಯಗಳ ಅಭಿವೃದ್ಧಿಗಾಗಿ ಒಟ್ಟು ?8.47 ಕೋಟಿ ಅನುದಾನವನ್ನು ಮಂಜೂರು ಮಾಡಲಾಗಿದೆ ಎಂದು ವಿಧಾನ ಪರಿಷತ್ ಸದಸ್ಯರಾದ ಪ್ರಕಾಶ್ ಹುಕ್ಕೇರಿ ತಿಳಿಸಿದ್ದಾರೆ.ತಾಲೂಕಿನ ಯಕ್ಸಂಬಾ ಗ್ರಾಮದಲ್ಲಿ ಸುದ್ದಿಗೋಷ್ಟಿಯಲ್ಲಿ ಈ ವಿಷಯ ತಿಳಿಸಿದ ಅವರು. ಗ್ರಾಮದಲ್ಲಿ ರಸ್ತೆ, ಚರಂಡಿ, ಕಾಲೋನಿಗಳ ಅಭಿವೃದ್ಧಿ, ಶಾಲಾ ಕೊಠಡಿಗಳು ಹಾಗೂ ದೇವಾಲಯಗಳ ಸುಧಾರಣೆಗಾಗಿ ಗ್ರಾಮಸ್ಥರು ಸಲ್ಲಿಸಿದ್ದ ಮನವಿಗೆ ಸ್ಪಂದಿಸಿ, ಶಾಸಕ ಗಣೇಶ್ ಹುಕ್ಕೇರಿ ಅವರೊಂದಿಗೆ ಚರ್ಚಿಸಿ ಸರ್ಕಾರದಿಂದ ವಿಶೇಷ ಅನುದಾನವನ್ನು ತರಲಾಗಿದೆ ಎಂದರು.
ಈ ಅನುದಾನದಲ್ಲಿ ಗ್ರಾಮದ ಒಳ ರಸ್ತೆ ಮತ್ತು ಚರಂಡಿ ನಿರ್ಮಾಣಕ್ಕೆ ?50 ಲಕ್ಷ, ಪರಿಶಿಷ್ಟ ಪಂಗಡ ಕಾಲೋನಿಗೆ ರಸ್ತೆ ಮತ್ತು ಚರಂಡಿಗೆ ?50 ಲಕ್ಷ, ವಿವಿಧ ಕಾಲೋನಿಗಳಲ್ಲಿ ಸಿಸಿ ರಸ್ತೆ ಮತ್ತು ಚರಂಡಿ ನಿರ್ಮಾಣಕ್ಕೆ ?75 ಲಕ್ಷ, ಕನಗಲಾ ರಸ್ತೆ ಭಾಗದಲ್ಲಿ ಮೂಲಭೂತ ಸೌಲಭ್ಯಗಳಿಗೆ ?2.30 ಕೋಟಿ, ಶ್ರೀ ಗಣೇಶ ಮತ್ತು ಶ್ರೀ ಬಸವೇಶ್ವರ ದೇವಸ್ಥಾನಗಳ ಅಭಿವೃದ್ಧಿಗೆ ತಲಾ ?10 ಲಕ್ಷ ಅನುದಾನ ನೀಡಲಾಗಿದೆ.ಅದೇ ರೀತಿ ೃಳ್ಲಿಳಿಾ್ದೂಳ್ತಹ್ಝ್ಣ್ಛಿ್ತೂಹಿೂೂಷ್ಚ್ಣ ರಸ್ತೆ ಸುಧಾರಣೆಗೆ ?3.87 ಕೋಟಿ ಮಂಜೂರು ಮಾಡಲಾಗಿದ್ದು, ಇದರಿಂದ ಗ್ರಾಮದಲ್ಲಿ ಸಂಚಾರ ಸುಗಮವಾಗಲಿದೆ. ಗ್ರಾಮದಲ್ಲಿನ ಸರ್ಕಾರಿ ಕನ್ನಡ ಹಿರಿಯ ಪ್ರಾಥಮಿಕ ಶಾಲೆಗೆ 4 ಹೊಸ ಕೊಠಡಿಗಳ ನಿರ್ಮಾಣಕ್ಕಾಗಿ ?59.30 ಲಕ್ಷ ಮೀಸಲಿಡಲಾಗಿದೆ.
ಮಂಜೂರಾದ ಕಾಮಗಾರಿಗಳನ್ನು ಶೀಘ್ರವಾಗಿ ಆರಂಭಿಸಿ ಗುಣಮಟ್ಟದೊಂದಿಗೆ ಪೂರ್ಣಗೊಳಿಸಲು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಲಾಗಿದೆ.ಗ್ರಾಮಸ್ಥರು ಮುಂದೆ ನಿಂತು ಗುಣಮಟ್ಟದ ಕಾಮಗಾರಿ ನಿರ್ಮಿಸಿಕೊಳ್ಳಬೇಕು ಎಂದರು.ಬಳಿಕ ವಾಳಕಿ ಗ್ರಾಮಸ್ಥರಿಗೆ ಪ್ರಕಾಶ ಹುಕ್ಕೇರಿ ಅವರು ಮಂಜೂರಾದ ಅನುದಾನದ ಆದೇಶ ಪತ್ರ ವಿತರಿಸಿದರು.ಈ ಸಂಧರ್ಭದಲ್ಲಿ ವಾಳಕಿ ಗ್ರಾಮದ ಮಾಜಿ ಜಿಲ್ಲಾ ಪಂಚಾಯತ ಸದಸ್ಯರಾದ ಅಣ್ಣಾಸಾಬ ನಾಯಿಕ, ಮಾಜಿ ಗ್ರಾ.ಪಂ ಅಧ್ಯಕ್ಷರಾದ ರಾಹುಲ ಥೋನೆ, ಪಿ.ಕೆ.ಪಿ.ಎಸ್ ಅಧ್ಯಕ್ಷಾರಾದ ಮಲ್ಲಪ್ಪಾ ಖೋತ, ಬಸಗೌಡಾ ಖೋತ, ರಾಜು ಗೋಮಾಯಿ, ಗಜಾನನ ಕಮತೆ, ಬಾಹುಸಾಬ ಪಾಟೀಲ, ಬಬನ ನಾಯಿಕ, ಲಕ್ಕಪ್ಪಾ ತರಾಳ, ಸಂತೋಷ ಖೋತ, ಪರಶರಾಮ ಜಗದಾಳೆ, ಅಣ್ಣಾಸಾಬ ನಾಯಿಕ, ಬಾಳು ಸ್ವಾಮಿ, ಸುಭಾಷ ನಾಯಿಕ, ಅಜೀತ ಗಂದಗುಡೆ, ತುಕಾರಾಮ ಪಾಟೀಲ, ಮಲ್ಲಪ್ಪಾ ಮಗದುಮ್ಮ, ಕಾಂತು ನಾಯಿಕ, ಬಾಳು ನಾಯಿಕ, ಸಂತೋಷ ಪಾಟೀಲ, ಮಹೇಶ ಚೌಗುಲಾ ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 