ಉತ್ತಮ ಮಳೆ ಚುರುಕುಗೊಂಡ ಕೃಷಿ ಚಟುವಟಿಕೆ
Good rains boost agricultural activity
ಲಕ್ಷ್ಮೇಶ್ವರ 16 : " ಭೂಮಿ ತಾಯಿಯನ್ನು ನಂಬಿರುವ ರೈತರು ಕೃಷಿಯಿಂದ ಎಷ್ಟೇ ಕಷ್ಟ ಸುಖ ಬರಲಿ ಕೃಷಿಯನ್ನು ಮಾತ್ರ ಬಿಡುವುದಿಲ್ಲ ಕೃಷಿಯೇ ನಮ್ಮ ಮೂಲ ಜೀವನ ಭೂಮಿ ತಾಯಿ ನಂಬಿದವರಿಗೆ ಎಂದು ಮೋಸ ಮಾಡೋದಿಲ್ಲ ಎಂಬ ಅಪಾರ ನಂಬಿಕೆ ಅನ್ನದಾತರಲ್ಲಿ ಅದರಂತೆ ತಾಲೂಕಿನಲ್ಲಿ ಕಳೆದ ಎರಡು ದಿನಗಳ ಹಿಂದೆ ಸುರಿದ ಉತ್ತಮ ಮಳೆಯಿಂದ ಕೃಷಿ ಚಟುವಟಿಕೆಗಳು ಚುರುಕುಗೊಂಡಿದ್ದು ರೈತರಲ್ಲಿ ಹೊಸ ಉತ್ಸಾಹವನ್ನು ಮೂಡಿಸಿದೆ ಅದರಂತೆ ತಾಲೂಕಿನ ಬಟ್ಟೂರು ಗ್ರಾಮದ ವ್ಯಾಪ್ತಿಯಲ್ಲಿ ಬರುವ ಜಮೀನು ಒಂದರಲ್ಲಿ ರೈತನೊಬ್ಬ ಟ್ಯಾಕ್ಟರ್ ಮೂಲಕ ಮುಂಗಾರು ಬೆಳೆಗಳಾದ ಹೆಸರು ಅಲಸಂದಿ ಗೋವಿನಜೋಳ ಶೇಂಗಾ ಬಿಟಿ ಹತ್ತಿ ಸೇರಿದಂತೆ ಇನ್ನಿತರೆ ಮುಂಗಾರು ಬೆಳೆಗಳ ಬಿತ್ತನೆಗೆ ಭೂಮಿಯನ್ನು ಹದ ಗೋಳಿಸುತ್ತಿರುವುದು ಕಂಡು ಬಂದಿತು ಇನ್ನೇನು ಉತ್ತಮವಾಗಿ ಮಳೆ ಆಗುತ್ತಾ ಹೋದರೆ ಸಾಕು ರೈತರು ಆ ದೇವರ ಮೇಲೆ ಭಾರ ಹಾಕಿ ಮುಂಗಾರು ಬಿತ್ತನೆಯನ್ನು ಪ್ರಾರಂಭ ಮಾಡುತ್ತಾರೆ
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 