ಯೋಗದಿಂದ ಉತ್ತಮ ಆರೋಗ್ಯ : ಸಂಗಮೇಶ ಮಲ್ಲೇದ
Good health through yoga: Sangamesh Malleda
ದೇವರಹಿಪ್ಪರಗಿ 20: ದಿನನಿತ್ಯ ಯೋಗ ಪದ್ಧತಿಯನ್ನು ವಿದ್ಯಾರ್ಥಿಗಳು ಅಳವಡಿಸಿಕೊಂಡರೆ ಉತ್ತಮ ಆರೋಗ್ಯ ಕಾಪಾಡಿಕೊಳ್ಳಲು ಸಾಧ್ಯವಾಗುತ್ತದೆ ಎಂದು ಜಾಲವಾದ ಗ್ರಾಮದ ಕರ್ನಾಟಕ ಪಬ್ಲಿಕ್ ಶಾಲೆಯ ದೈಹಿಕ ಶಿಕ್ಷಣ ಶಿಕ್ಷಕರಾದ ಸಂಗಮೇಶ ಮಲ್ಲೇದ ಹೇಳಿದರು. ತಾಲೂಕಿನ ಜಾಲವಾದ ಗ್ರಾಮದ ಕರ್ನಾಟಕ ಪಬ್ಲಿಕ್ ಶಾಲೆಯ ಆವರಣದಲ್ಲಿ ಶನಿವಾರ ಆಯೋಜಿಸಲಾಗಿದ್ದ ಜೂ.21,ವಿಶ್ವಯೋಗ ದಿನಾಚರಣೆಯ ಯೋಗಾಸನ ಪೂರ್ವ ತಯ್ಯಾರಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಯೋಗ ಸನ್ಯಾಸಿಗಳು, ಸಾಧುಗಳಿಗೆ ಮಾತ್ರ ಸೀಮಿತ. ಸಾಧಾರಣ ಜನರಿಗೂ ಯೋಗಕ್ಕೂ ಸಂಬಂಧ ಇಲ್ಲ ಎಂಬ ತಪ್ಪು ಕಲ್ಪನೆ ಜನರಲ್ಲಿತ್ತು. ಆದರೆ ಇತ್ತೀಚಿನ ದಿನಗಳಲ್ಲಿ ಆರೋಗ್ಯಕರ ಜೀವನ ನಡೆಸಲು ಪ್ರತಿಯೊಬ್ಬರಿಗೂ ಯೋಗ ಅತ್ಯಗತ್ಯ.
ಗ್ರಾಮೀಣ ಪ್ರದೇಶದಲ್ಲಿ ಯೋಗಾಸನದ ಮೂಲಕ ಹೆಸರಾದ ನಿಮ್ಮೂರಿನ ಯೋಗಪಟು ಸಿದ್ರಾಮಪ್ಪ ಗುಂದಗಿ ಅವರು ತಮ್ಮ ಇಳಿ ವಯಸ್ಸಿನಲ್ಲಿ ಅದ್ಭುತ ಕಾರ್ಯ ಮಾಡುತ್ತಿರುವುದು ಶ್ಲಾಘನೀಯ. ಅವರಿಂದ ವಿಶ್ವಯೋಗ ದಿನದ ಮಾಹಿತಿ ಪಡೆದುಕೊಂಡ ಯೋಗ ಶಿಕ್ಷಣವನ್ನು ನಿತ್ಯ ಜೀವನದಲ್ಲಿ ನಿರಂತರವಾಗಿ ಅಳವಡಿಸಿಕೊಳ್ಳಬೇಕು ಎಂದು ಕರೆ ನೀಡಿದರು. ಸಂದರ್ಭದಲ್ಲಿ ಯೋಗಪಟು ಸಿದ್ರಾಮಪ್ಪ ಗುಂದಗಿ ಅವರು ಯೋಗಾಸನದ ಕೆಲವು ಬಂಗಿಗಳನ್ನು ವಿದ್ಯಾರ್ಥಿಗಳಿಗೆ ತಿಳಿಸಿಕೊಟ್ಟರು.
ನಂತರ ಶಿಕ್ಷಕರಿಂದ ಅವರನ್ನು ಸನ್ಮಾನಿಸಿ, ಗೌರವಿಸಿದರು. ಸಂದರ್ಭದಲ್ಲಿ ಶಾಲೆಯ ಉಪ ಪ್ರಾಂಶುಪಾಲರಾದ ಎ.ಎಂ. ಹೊಸಗೌಡರ ಅಧ್ಯಕ್ಷತೆ ವಹಿಸಿದ್ದರು.ಇದೇ ಸಂದರ್ಭದಲ್ಲಿ ಶಿಕ್ಷಕರುಗಳಾದ ಬಿ.ಎಸ್. ಆಗಸಬಾಳ, ಆರ್.ಎಫ್. ನದಾಫ, ಬಸವರಾಜ ಕಮತರ, ಜಿ.ಕೆ.ಕುಂಬಾರ, ಎಚ್.ಎಂ.ಬಗಲಿ, ಎಂ.ಡಿ.ಹಳ್ಳಿ, ಸುನಿತಾ ಬಿರಾದಾರ,ಎ.ಎಸ್. ಪತ್ತಾರ, ಜಯಕ್ಕ, ಕವಿತಾ ಪಾಟೀಲ, ಸೇರಿದಂತೆ ಬೋಧಕ, ಬೋಧಕೇತರ ಸಿಬ್ಬಂದಿ ವರ್ಗ, ಅತಿಥಿ ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಸುಪ್ರೀಂ ಕೋರ್ಟ್ ನ್ಯಾಯವಾದಿ ಕಾತರಕಿ ಜೊತೆ ಕನ್ನಡ ಸಂಘಟನೆಗಳ ಸಂವಾದ ನಾಳೆ
ನಿಡಸೋಸಿ ರಸ್ತೆ ಅಗಲಿಕರಣಕ್ಕೆ ವೇಗ: ಭರದಿಂದ ಸಾಗಿದ ಮುಸ್ಲಿಂ ಸ್ಮಶಾನ ಆವರಣ ತೆರವು ಕಾರ್ಯಾಚರಣೆ; ಡಿಸಿ ಕಾರ್ಯಕ್ಕೆ ಮೆಚ್ವುಗೆ
ವಿಮೆ ಹಣಕ್ಕಾಗಿ ಪತಿ ಹತ್ಯೆ: ಪತ್ನಿ, ಎಫ್ಎಸ್ಎಲ್ ಅಧಿಕಾರಿ ಸೇರಿ 9 ಜನ ಬಂಧನ : ಎಸ್ ಪಿ ರಾಮರಾಜನ್
ಹಿಂಡಲಗಾ ಜೈಲಿನಿಂದ ಶಿವಾನಂದ ನಿಲಣ್ಣವರ ಬಿಡುಗಡೆ : ಎಲ್ಲದಕ್ಕು ಓಂ ನಮಃ ಶಿವಾಯ ಎಂದು ಪ್ರತಿಕ್ರಿಯೆ
ಕಲುಸಿತ ಆಹಾರ ಸೇವನೆ: 30 ವಿಧ್ಯಾರ್ಥಿಗಳು ಆಸ್ಪತ್ರೆಗೆ ಅಲೇದಾಟ, ಅಧಿಕಾರಿಗಳ ವಿರುದ್ಧ ತಡರಾತ್ರಿ ಪ್ರತಿಭಟನೆ
ಬಹುಕೋಟಿ ವಂಚನೆ ಪ್ರಕರಣ : ಶಿವಾನಂದ ನೀಲಣ್ಣವರಗೆ ಮಧ್ಯಂತರ ಜಾಮೀನು ಮಂಜೂರು 