ಶಿಕ್ಷಣದ ಜೊತೆಗೆ ಕ್ರೀಡೆಗಳಿಗೂ ಆದ್ಯತೆ ನೀಡಿ - ವಿಜಯ ವಿಠಲ
Give priority to sports along with education - Vijaya Vitthal
ಬಳ್ಳಾರಿ 21: ಮಕ್ಕಳಿಗೆ ಗುಣಮಟ್ಟದ ಶಿಕ್ಷಣದ ಜೊತೆಗೆ ಕ್ರೀಡೆಗಳಿಗೂ ಆದ್ಯತೆ ನೀಡಬೇಕು, ವರ್ಷಪೂರ್ತಿ ಶಾಲೆಗೆ ತೆರಳಿರುವ ಮಕ್ಕಳು ಬೇಸಿಗೆ ವೇಳೆ ಮನೋರಂಜನೆ, ಕ್ರೀಡೆಗಳ ಕಡೆ ಹೆಚ್ಚು ಗಮನಹರಿಸುತ್ತಾರೆ ಎಂದು ಕರಾಟೆ ಪಟು, ಜ್ಞಾನಶ್ರೀ ಪ್ರತಿಷ್ಠಾನದ ಅಧ್ಯಕ್ಷ ವಿಜಯ ವಿಠಲ ಅವರು ಹೇಳಿದರು. ನಗರದ ಎಸ್.ಎನ್.ಪೇಟೆ, ಗಣೇಶ ಕಾಲೋನಿಯಲ್ಲಿ ಜ್ನಾನಶ್ರೀ ಪ್ರತಿಷ್ಠಾನ, ಬ್ರಾಹ್ಮಣ ಒಕ್ಕೂಟದ ಆಶ್ರಯದಲ್ಲಿ ಕಳೆದ17 ವರ್ಷಗಳಿಂದ ಮಕ್ಕಳಿಗಾಗಿ ಆಯೋಜಿಸಲಾಗುತ್ತಿರುವ ಉಚಿತ ಬೇಸಿಗೆ ಶಿಬಿರದಲ್ಲಿ ಮಾತನಾಡಿದರು. ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಕಲ್ಪಿಸಬೇಕು, ಆದರೆ, ಅದರ ಜೊತೆಗೆ ಕ್ರೀಡೆ, ಯೋಗ, ಸಂಗೀತ ಸೇರಿದಂತೆ ಇತರೆ ಚಟುವಟಿಕೆಗಳ ಕಡೆಗೆ ಕೊಂಡೊಯ್ಯಬೇಕು,
ಇದರಿಂದ ಮಕ್ಕಳ ಜ್ಞಾನ, ನೆನಪಿನ ಶಕ್ತಿ ಹೆಚ್ಚಾಗುವುದರ ಜೊತೆಗೆ ಆರೋಗ್ಯ ಸದೃಢವಾಗಿರಲಿದೆ. ಕರಾಟೆ ಪುರುಷರು, ಮಹಿಳೆಯರಿಗೆ ತಮ್ಮ ರಕ್ಷಣೆಗೆ ರಾಮಬಾಣವಿದ್ದಂತೆ, ಅದರಲ್ಲೂ ಇತ್ತೀಚಿನ ದಿನಗಳಲ್ಲಿ ಮಹಿಳೆಯರು ಕರಾಟೆ ತರಬೇತಿ ಪಡೆಯಬೇಕು, ಕರಾಟೆ ಮಹಿಳೆಯರಿಗೆ ರಕ್ಷಾ ಕವಚವಿದ್ದಂತೆ ಎಂದರು.1ನೇ ತರಗತಿಯಿಂದ ಡಿಗ್ರಿ ಓದುವ ಹೆಣ್ಣು ಮಕ್ಕಳಿಗೆ ಶಿಬಿರದಲ್ಲಿ ಉಚಿತ ಕರಾಟೆ ಕಲಿಸಲಾಗುವುದು. ಎಲ್ಲ ಸಹಕಾರದಿಂದ ಕಳೆದ 17 ವರ್ಷಗಳಿಂದ ಉಚಿತ ಬೇಸಿಗೆ ಶಿಬಿರವನ್ನು ನಡೆಸಿಕೊಂಡು ಬರಲಾಗುತ್ತಿದೆ. ಮಕ್ಕಳು ಇದರ ಸದುಪಯೋಗ ಪಡೆದು ಕೊಳ್ಳಬಹುದು, ಶಿಬಿರದಲ್ಲಿ ಭಾಗವಹಿಸಿದ ಎಲ್ಲ ಮಕ್ಕಳಿಗೂ ಪ್ರಮಾಣ ಪತ್ರಗಳನ್ನು ನೀಡಲಾಗುವುದು ಎಂದರು. ಸಂದರ್ಭದಲ್ಲಿ ಮಕ್ಕಳ ಪಾಲಕರು, ವಿವಿಧ ಗಣ್ಯರು ಉಪಸ್ಥಿತರಿದ್ದರು.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 