ಗಂಗಾ ಕಲ್ಯಾಣ ಯೋಜನೆ: ಮೋಟಾರು, ಪಂಪ್ ಸೆಟ್ ವಿತರಣೆ
ಹೂವಿನಹಡಗಲಿ 14: ಕರ್ನಾಟಕ ತಾಂಡ ಅಭಿವೃದ್ಧಿ ನಿಗಮದ ವತಿಯಿಂದ 2023- 24 ಹಾಗೂ 2024- 25 ನೇ ಸಾಲಿನ ಗಂಗಾ ಕಲ್ಯಾಣ ಯೋಜನೆಯಡಿಯಲ್ಲಿ ಮೋಟರ್ ಪಂಪ್ ಪಡೆದಿರುವ ಎಲ್ಲಾ ಫಲಾನುಭವಿಗಳು ಅದನ್ನು ಸದ್ಬಳಕೆ ಮಾಡಿಕೊಂಡು ಆರ್ಥಿಕವಾಗಿ ಸಬಲರಾಗಿಸಮಾಜದ ಮುಖ್ಯ ವಾಹಿನಿಗೆ ಬರಬೇಕು ಎಂದು ಶಾಸಕ ಎಲ್.ಕೃಷ್ಣನಾಯಕ ಹೇಳಿದರು.ಪಟ್ಟಣದ ತಾಲೂಕು ಪಂಚಾಯತ್ ಯಲ್ಲಿ ಶನಿವಾರ ರಾಜ್ಯದ ತಾಂಡ ಅಭಿವೃದ್ಧಿ ನಿಗಮದಿಂದ ಗಂಗಾಕಲ್ಯಾಣ ಯೋಜನೆಯಡಿ ಫಲಾನುಭವಿಗಳಿಗೆ ಮೋಟರ್ ಪಂಪ್, ಪೈಪ್ ಮತ್ತು ಸಾಮಾಗ್ರಿಗಳನ್ನು ವಿತರಿಸಿ ಅವರು ಮಾತನಾಡಿದರು.ಇದೇ ವೇಳೆ ಬಿಜೆಪಿ ಮಹಿಳಾ ಮುಖಂಡ ರಾದ ವಿಜಯಲಕ್ಷ್ಮಿ, ಮೀರಾಬಾಯಿ ,ಫಲಾನುಭವಿಗಳಿ ಇದ್ದರು.