ಲಕ್ಷ್ಮೇಶ್ವರದಲ್ಲಿ ವ್ಯಾಪಾರಸ್ಥರ ಸಂಘದಿಂದ ಗಣಪತಿ ಮಹಾಪ್ರಸಾದ

ಲಕ್ಷ್ಮೇಶ್ವರದಲ್ಲಿ ವ್ಯಾಪಾರಸ್ಥರ ಸಂಘದಿಂದ ಗಣಪತಿ ಮಹಾಪ್ರಸಾದ  Ganapati Mahaprasad from the Traders' Association in Lakshmeshwaram

ಲಕ್ಷ್ಮೇಶ್ವರ: ಪಟ್ಟಣದ ಭಾನು ಮಾರ್ಕೆಟ್ನಲ್ಲಿ ಪ್ರತಿಷ್ಠಾಪಿಸಲಾಗಿದ್ದ ಮಹಾಗಣಪತಿಯ ಮಹಾಪ್ರಸಾದವನ್ನು ವ್ಯಾಪಾರಸ್ಥರ ಸಂಘದ ವತಿಯಿಂದ ಏರಿ​‍್ಡಸಲಾಗಿತ್ತು.  ವ್ಯಾಪಾರಸ್ಥರ ಸಂಘದ ಅಧ್ಯಕ್ಷ ಬಸವೇಶ್ವರ ಮಹಾಂತಶೆಟ್ಟರ್ ಸೇರಿದಂತೆ ಪದಾಧಿಕಾರಿಗಳು ಭಕ್ತರಿಗೆ ಅನ್ನಪ್ರಸಾದ ಸೇವೆ ಸಲ್ಲಿಸಿದರು. ಅಪಾರ ಸಂಖ್ಯೆಯಲ್ಲಿ ಭಕ್ತರು ಪಾಲ್ಗೊಂಡು ಮಹಾಪ್ರಸಾದ ಸ್ವೀಕರಿಸಿದರು.  

ಈ ಸಂದರ್ಭದಲ್ಲಿ ರಾಜ್ಯದಲ್ಲಿ ಆವರಿಸಿರುವ ಬರಗಾಲದಿಂದ ರೈತರು ಸಂಕಷ್ಟಕ್ಕೆ ಸಿಲುಕಿದ್ದು, ಸಾಲ ಮಾಡಿ ಬಿತ್ತನೆ ಮಾಡಿದ್ದರೂ ಉತ್ತಮ ಬೆಳೆ ಬಾರದ ಕಾರಣ ತೊಂದರೆ ಅನುಭವಿಸುತ್ತಿದ್ದಾರೆ. ಸರ್ಕಾರ ಶಿರಹಟ್ಟಿ ಹಾಗೂ ಲಕ್ಷ್ಮೇಶ್ವರ ತಾಲೂಕುಗಳನ್ನು ಬರಪೀಡಿತ ತಾಲೂಕುಗಳ ಪಟ್ಟಿಗೆ ಸೇರೆ​‍್ಡಗೊಳಿಸಿರುವುದು ರೈತರಲ್ಲಿ ತುಸು ಸಮಾಧಾನ ತಂದಿದೆ ಎಂದು ತಿಳಿಸಲಾಯಿತು.  

ಸಂಕಷ್ಟದಲ್ಲಿರುವ ರೈತರಿಗೆ ಕೂಡಲೇ ನೆರವು ನೀಡುವ ನಿಟ್ಟಿನಲ್ಲಿ ಪ್ರತಿ ಎಕರೆಗೆ ?25 ಸಾವಿರ ಪರಿಹಾರ ಘೋಷಿಸಬೇಕು. ಜಾನುವಾರುಗಳಿಗೆ ಮೇವಿನ ಕೊರತೆ ಹಾಗೂ ನೀರಿನ ಸಮಸ್ಯೆ ಉಂಟಾಗದಂತೆ ಮುಂಜಾಗ್ರತಾ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಲಾಯಿತು.