'ಗಣಿತಶಾಸ್ತ್ರದಲ್ಲಿ ಇತ್ತೀಚಿನ ಬೆಳವಣಿಗೆಗಳು' ಕುರಿತು ಅಂತರಾಷ್ಟ್ರೀಯ ಸಮ್ಮೇಳನ

ಲೋಕದರ್ಶನ ವರದಿ

ಬೆಳಗಾವಿ, 27:  ನಗರದ ಪ್ರತಿಷ್ಠಿತ ಕೆ.ಎಲ್.ಇ. ಸಂಸ್ಥೆಯ ರಾಜಾ ಲಖಮಗೌಡ ವಿಜ್ಞಾನ ಸ್ವಾಯತ್ತ ಮಹಾವಿದ್ಯಾಲಯದಲ್ಲಿ ಗಣಿತಶಾಸ್ತ್ರ ಮತ್ತು ಸಂಖ್ಯಾಶಾಸ್ತ್ರ ವಿಭಾಗ ಹಾಗೂ ರಾಣಿ ಚನ್ನಮ್ಮ ವಿಶ್ವವಿದ್ಯಾಲಯ ಮತ್ತು ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ ಸಹಯೋಗದಲ್ಲಿ "ಗಣಿತಶಾಸ್ತ್ರದಲ್ಲಿ ಇತ್ತೀಚಿನ ಬೆಳವಣಿಗೆಗಳು" ಎಂಬ ವಿಷಯ ಕುರಿತು ಅಂತರಾಷ್ಟ್ರೀಯ ಸಮ್ಮೇಳನವನ್ನು ದಿ. 27. ರಂದು ಬೆಳಿಗ್ಗೆ 10.30 ಗಂಟೆ ಬೆಳಗಾವಿ ಜೆಎನ್ಎಂಸಿ ಆವರಣದ ಕೆ.ಎಲ್.ಇ. ಶತಮಾನೋತ್ಸವ ಭವನದ ಡಾ.ಎಚ್.ಬಿ. ರಾಜಶೇಖರ ಸಭಾಗೃಹದಲ್ಲಿ ಉದ್ಘಾಟಿಸಲಾಯಿತು.

ಈ ಸಮ್ಮೇಳನವನ್ನು ಉದ್ಘಾಟಿಸಿದ ಕೆ.ಎಲ್.ಇ. ಸಂಸ್ಥೆ ಕಾಯರ್ಾಧ್ಯಕ್ಷರಾದ ಹಾಗೂ ರಾಜ್ಯ ಸಭಾ ಸದಸ್ಯರಾದ ಡಾ. ಪ್ರಭಾಕರ ಬಿ. ಕೋರೆ ಅವರು ಮಾತನಾಡುತ್ತ, ಕೆ.ಎಲ್.ಇ. ಸಂಸ್ಥೆಯಲ್ಲಿ ಇಂತಹ ಕಾಯರ್ಾಗಾರಗಳು ಅರ್ಥಪೂರ್ಣವಾಗಿ ಜರುಗಬೇಕು.  ಅಧ್ಯಾಪಕರು ಹೊಸ-ಹೊಸ ವಿಷಯ ಪರಿಚಯ ಹಾಗೂ ಅಧ್ಯಯನ ಮಾಡಿಕೊಂಡು ವಿದ್ಯಾಥರ್ಿಗಳಿಗೆ ಪರಿಣಾಮಕಾರಿಯಾಗಿ ಮುಟ್ಟುವಂತೆ ಮಾಡಬೇಕು ಎಂದು ಕರೆನೀಡಿದರು.

ಈ ಸಮಾರಂಭದ ಮುಖ್ಯ ಅತಿಥಿಗಳು ಮುಂಬೈನ (ಎನ್ಬಿಎಚ್ಎಮ್) ರಾಷ್ಟ್ರೀಯ ಉನ್ನತ ಗಣಿತ ಮಂಡಳಿಯ ಅಧ್ಯಕ್ಷರಾದ ಪ್ರೊ. ವಿ ಶ್ರೀನಿವಾಸ ಅವರು ಮಾತನಾಡುತ್ತ, ಕೆ.ಎಲ್.ಇ. ಸಂಸ್ಥೆಯು ಪ್ರಸ್ತುತ ಸಂದರ್ಭದಲ್ಲಿ ಜಾಗತಿಕ ಶಿಕ್ಷಣ ನೀಡುವ ಕೇಂದ್ರವಾಗಿದೆ.  ಸ್ನಾತಕ ಮತ್ತು ಸ್ನಾತಕೊತ್ತರ ವಿದ್ಯಾಥರ್ಿಗಳು ಹೆಚ್ಚಿನ ಶಿಕ್ಷಣ ಪಡೆಯಲಿಕ್ಕೆ ಇಂತಹ ಸಮ್ಮೇಳನಗಳು ನಿರಂತರ ಜರುಗಬೇಕು.  ಜಾಗತಿಕರಣ ಸಂದರ್ಭದಲ್ಲಿ ಗಣಿತ ವಿಷಯದಲ್ಲಿ ಹೆಚ್ಚೆಚ್ಚು ಮಹತ್ವದ ಸಂಶೋಧನೆಗಳು ನಡೆಯಬೇಕೆಂದು ಕರೆನೀಡಿದರು.

ಸಮಾರಂಭದ ಅಧ್ಯಕ್ಷತೆಯನ್ನು ಬೆಳಗಾವಿ ಕೆ.ಎಲ್.ಇ ವಿಶ್ವವಿದ್ಯಾಲಯದ ಕುಲಪತಿಗಳಾದ ಡಾ. ವಿವೇಕ ಸಾವೋಜಿ ವಹಿಸಿ ಮಾತನಾಡುತ್ತಾ, ಕೆ.ಎಲ್.ಇ. ಶಿಕ್ಷಣ ಸಂಸ್ಥೆಯಲ್ಲಿ ಗಣಿತಶಾಸ್ತ್ರದ ವಿಭಾಗದ ಮೂಲಕ ಅಧಿಕ ಶೈಕ್ಷಣಿಕ ಸಮ್ಮೇಳನಗಳು ಜರುಗಬೇಕು.  ಮೂಲ ವಿಜ್ಞಾನ ವಿದ್ಯಾಥರ್ಿಗಳಿಗೆ ಇದು ಅನುಕುಲ ವಾಗುತ್ತದೆ.  ಕೆ.ಎಲ್.ಇ. ಸಂಸ್ಥೆಯು ಮೂಲ ವಿಜ್ಞಾನ ಶಿಕ್ಷಣಕ್ಕೆ ಮಹತ್ವಕೊಡುತ್ತದೆ. ಈ ಹಿನ್ನೆಲೆಯಲ್ಲಿ ಪದವಿ ವಿದ್ಯಾಥರ್ಿಗಳಿಗೆ ಈ ಸಮ್ಮೇಳನಗಳಲ್ಲಿ ಭಾಗವಹಿಸುವ ಅವಕಾಶ ಸಿಗಬೇಕು.  ವಿಭಿನ್ನ ವಿಷಯಗಳ ಕುರಿತು ವಿದ್ಯಾಥರ್ಿಗಳಿಗೆ ಸಮಗ್ರವಾಗಿ ತಿಳಿಸಿಕೊಡಬೇಕು.  ಇಂದಿನ ವಿದ್ಯಾಥರ್ಿಗಳು ಪರಿಪೂರ್ಣ ವಿಷಯ ಆಯ್ಕೆಮಾಡಿಕೊಂಡು ಸಾಧನೆಮಾಡಿ ಜೀವನ ಯಶಸ್ವಿ ಮಾಡಿಕೊಳ್ಳಬೇಕೆಂದು ಕರೆನೀಡಿದರು.  

ಈ ಸಮಾರಂಭ ಗೌರವಾನ್ವಿತ ಅತಿಥಿಗಳಾಗಿ ಬೆಳಗಾವಿ ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಉಪ ಕುಲಪತಿಗಳಾದ ಡಾ. ಶಿವಾನಂದ ಬಿ. ಹೊಸಮನಿ ಅವರು ಉಪಸ್ಥಿತರಿದ್ದರು.  

ಸಭೆಯ ನಂತರ ದಿಕ್ಸೂಚಿ ಭಾಷಣ ಪ್ರೊ. ವಿ. ಶ್ರೀನಿವಾಸ ಅವರು ನೆರೆವೇರಿಸಿ ಕೊಟ್ಟರು.  

ಮಿಸ್. ವಿಜಯಲಕ್ಮಿ ಹಾಗೂ ಸಂಗಡಿಗರು ಪ್ರಾಥರ್ಿಸಿದರು.  ಪ್ರಾಚಾರ್ಯರಾದ ಡಾ.ವ್ಹಿ.ಡಿ. ಯಳಮಲಿ ಅವರು ಸ್ವಾಗತಿಸಿದರು.  ಪ್ರೊ. ಟಿ. ವೆಂಕಟೇಶ ಅವರು ಅತಿಥಿಗಳನ್ನು ಪರಿಚಯಿಸಿದರು.  ಪ್ರೊ.(ಶ್ರೀಮತಿ.) ಎಸ್.ಎಸ್. ಚೋಬಾರಿ ಅವರು ವಂದಿಸಿದರು.  ಪ್ರೊ.(ಮಿಸ್.) ಎಮ್.ಎಸ್. ಬಾಗಿ ಮತ್ತು ಪ್ರೊ.(ಮಿಸ್.) ದಿವ್ಯಾ ಪರುಲೇಕರ ಕಾರ್ಯಕ್ರಮ ನಿರೂಪಿಸಿದರು.  ಈ ಸಮಾರಂಭದಲ್ಲಿ ಕಾಲೇಜಿನ ಆಡಳಿತ ಮಂಡಳಿಯ ಕಾಯರ್ಾಧ್ಯಕ್ಷರಾದ ಶ್ರೀ. ಎಲ್.ವ್ಹಿ. ದೇಸಾಯಿ ಹಾಗೂ ಸದಸ್ಯರು, ಡಾ.ಎಚ್.ಬಿ. ರಾಜಶೇಖರ ಮತ್ತು ಶಿಕ್ಷಕ ಪ್ರತಿನಿಧಿಗಳು ಕಾಲೇಜಿ ಸಿಬ್ಬಂದಿಯವರು, ವಿದ್ಯಾಥರ್ಿವೃಂದದವರು ಉಪಸ್ಥಿತರಿದ್ದರು.