ಜಿಬಿಆರ್ ಪಪೂ ಕಾಲೇಜು: ವಿದ್ಯಾರ್ಥಿನಿಯರ ಸಾಧನೆ

ಹೂವಿನಹಡಗಲಿ 13: ಪಟ್ಟಣದ ಜಿಬಿಆರ್ ಪದವಿಪೂರ್ವ ಕಾಲೇಜಿಗೆ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಶೇ 58ರಷ್ಟು ಫಲಿತಾಂಶ ಲಭಿಸಿದೆ ಎಂದು ಪ್ರಾಚಾರ್ಯ ಎನ್‌.ಅಮರೇಗೌಡ ಪಾಟೀಲ್ ತಿಳಿಸಿದ್ದಾರೆ.ಪರೀಕ್ಷೆ ಬರೆದ 288 ವಿದ್ಯಾರ್ಥಿಗಳಲ್ಲಿ 166 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. 17 ಡಿಸ್ಟಿಂಕ್ಷನ್, 94 ಪ್ರಥಮ, 35 ದ್ವಿತೀಯ, 20ವಿದ್ಯಾರ್ಥಿಗಳು ತೃತೀಯ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ.ಕಲಾ ವಿಭಾಗದಲ್ಲಿ ರೇಖಾ (ಶೇ 93.5), ಎಚ್‌. ಭೂಮಿಕಾ (ಶೇ 92.3), ಪಿ. ಪರ್ವೀನ್ (ಶೇ 90.6), ವಿ. ಸ್ವಪ್ನಾ (ಶೇ 90.1), ವಾಣಿಜ್ಯ ವಿಭಾಗದಲ್ಲಿ ವಿಜಯಲಕ್ಷ್ಮಿ ಮೇಟಿ (ಶೇ 94.16), ಯು.ರೋಹಿಣಿ. ( 92.16), . ಕೆ.ಲಕ್ಷ್ಮೀ (ಶೇ 90), ಶಿಕ್ಷಣ ವಿಭಾಗದಲ್ಲಿ ಎಚ್‌.ಸಾಕಮ್ಮ (ಶೇ 92) ಗರಿಷ್ಠ ಅಂಕ ಪಡೆದಿದ್ದಾರೆ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.