34 ವರ್ಷಗಳ ಶಿಕ್ಷಣ ಸೇವೆಗೆ ಜಿ.ಎಂ. ಮುಂದಿನಮನಿ ಅವರಿಗೆ ಅಭಿಮಾನೋತ್ಸವ
G.M. Saadamani felicitated for 34 years of education service
ಲಕ್ಷ್ಮೇಶ್ವರ, ಆ. 3: ಶಿಕ್ಷಣ ಕ್ಷೇತ್ರದಲ್ಲಿ ಸುಮಾರು 34 ವರ್ಷಗಳ ಕಾಲ ಶಿಕ್ಷಕರಾಗಿ, ಶಿರಹಟ್ಟಿ ಕ್ಷೇತ್ರ ಶಿಕ್ಷಣಾಧಿಕಾರಿಯಾಗಿ ಹಾಗೂ ಗದಗ ಕ್ಷೇತ್ರ ಶಿಕ್ಷಣಾಧಿಕಾರಿಯಾಗಿ ಸೇವೆ ಸಲ್ಲಿಸಿ ನಿವೃತ್ತರಾದ ಜಿ.ಎಂ. ಮುಂದಿನಮನಿ ಅವರಿಗೆ ಅಭಿಮಾನಿಗಳು ಲಕ್ಷ್ಮೇಶ್ವರ ಪಟ್ಟಣದ ಗದಗ ರಸ್ತೆಯ ಬಾಳೆಹಳ್ಳಿ ಕಲ್ಯಾಣ ಮಂಟಪದಲ್ಲಿ ಅದ್ದೂರಿಯಾಗಿ ಅಭಿಮಾನೋತ್ಸವ ಆಯೋಜಿಸಿದರು.
ಕಾರ್ಯಕ್ರಮದಲ್ಲಿ ಜಿ.ಎಂ. ಮುಂದಿನಮನಿ ದಂಪತಿಯನ್ನು ವಿವಿಧ ಹೂಮಾಲೆಗಳು, ಸನ್ಮಾನ ಪತ್ರ, ಸ್ಮರಣಿಕೆ ಹಾಗೂ ಡಾ. ಬಿ.ಆರ್. ಅಂಬೇಡ್ಕರ್ ಮತ್ತು ಸಂಗೊಳ್ಳಿ ರಾಯಣ್ಣ ಅವರ ಸ್ಮರಣಿಕೆಯೊಂದಿಗೆ ಗೌರವಿಸಲಾಯಿತು. ಅಭಿಮಾನಿಗಳು ಹಾಗೂ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಶುಭಾಶಯ ಕೋರಿದರು.
ಇದಕ್ಕೂ ಮುನ್ನ ಪಟ್ಟಣದ ಪಂಪಾ ವೃತ್ತದಿಂದ ಜಿ.ಎಂ. ಮುಂದಿನಮನಿ ದಂಪತಿಯ ಭವ್ಯ ಮೆರವಣಿಗೆ ನಡೆಯಿತು. ಮೆರವಣಿಗೆಯಲ್ಲಿ ವಿವಿಧ ಕಲಾತಂಡಗಳು ಭಾಗವಹಿಸಿ ಕಾರ್ಯಕ್ರಮಕ್ಕೆ ಮೆರುಗು ತಂದವು.
ಕಾರ್ಯಕ್ರಮದ ಸಾನ್ನಿಧ್ಯವನ್ನು ಮುಕ್ತಿಮಂದಿರ ಧರ್ಮಕ್ಷೇತ್ರದ ಪೀಠಾಧ್ಯಕ್ಷ ಶ್ರೀ ವಿಮಲ ರೇಣುಕ ವೀರಮಹಾಮುನಿ ಸ್ವಾಮೀಜಿ ಹಾಗೂ ಟಿಬೆಟಿಯನ್ ಲಾಮಾ ಗುರುಗಳು ವಹಿಸಿದ್ದರು. ಸಸಿಗೆ ನೀರೆರೆಯುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿ, ಡಾ. ಬಿ.ಆರ್. ಅಂಬೇಡ್ಕರ್ ಹಾಗೂ ಬಸವಣ್ಣ ಅವರ ಭಾವಚಿತ್ರಗಳಿಗೆ ಪುಷ್ಪನಮನ ಸಲ್ಲಿಸಲಾಯಿತು. ಇದೇ ಸಂದರ್ಭದಲ್ಲಿ ಜಿ.ಎಂ. ಮುಂದಿನಮನಿ ಅವರ ಸೇವಾ ಜೀವನ ಕುರಿತ ಗ್ರಂಥವನ್ನು ಬಿಡುಗಡೆ ಮಾಡಲಾಯಿತು.
ಸಭೆಯಲ್ಲಿ ಮಾತನಾಡಿದ ಶ್ರೀ ವಿಮಲ ರೇಣುಕ ವೀರಮಹಾಮುನಿ ಸ್ವಾಮೀಜಿ, ಶಿಕ್ಷಣ ವೃತ್ತಿ ಅತ್ಯಂತ ಪವಿತ್ರವಾದ ಸೇವೆಯಾಗಿದ್ದು, ಜಿ.ಎಂ. ಮುಂದಿನಮನಿ ಅವರು ತಮ್ಮ ಸೇವಾವಧಿಯಲ್ಲಿ ಶಿಕ್ಷಣ ಕ್ಷೇತ್ರಕ್ಕೆ ವಿಶಿಷ್ಟ ಕೊಡುಗೆ ನೀಡಿದ್ದಾರೆ. ಅವರ ಸೇವೆಯನ್ನು ಗುರುತಿಸಿ ಅಭಿಮಾನಿಗಳು ನಡೆಸಿರುವ ಈ ಸನ್ಮಾನ ಅರ್ಥಪೂರ್ಣವಾಗಿದೆ ಎಂದು ಹೇಳಿದರು.
ಹಿರಿಯ ಮುಖಂಡ ಸಣ್ಣ ವೀರ್ಪ ಹಳೇಪ್ಪನವರ ಮಾತನಾಡಿ, ಉತ್ತಮ ವ್ಯಕ್ತಿತ್ವ ಮತ್ತು ನಿಷ್ಠಾವಂತ ಸೇವೆಯಿಂದ ಸಮಾಜದಲ್ಲಿ ಅಪಾರ ಅಭಿಮಾನವನ್ನು ಗಳಿಸಬಹುದು ಎಂಬುದಕ್ಕೆ ಜಿ.ಎಂ. ಮುಂದಿನಮನಿ ಅವರೇ ಉದಾಹರಣೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಕಾರ್ಯಕ್ರಮದಲ್ಲಿ ಜೂನಿಯರ್ ಶಂಕರ್ ನಾಗ್ ಅವರು ಗಾಯನ ಕಾರ್ಯಕ್ರಮ ನಡೆಸಿಕೊಟ್ಟರು. ಮಾಜಿ ಶಾಸಕ ಜಿ.ಎಸ್. ಗಡ್ಡದೇವರಮಠ, ರಾಮಕೃಷ್ಣ ದೊಡ್ಡಮನಿ, ಎಸ್.ಎಸ್. ಪಟ್ಟಣಶೆಟ್ಟಿ, ಡಾ. ಜಿ.ಎಚ್. ಇಮ್ರಾಪುರ, ಶಣಬಸಪ್ಪ ಪಾಟೀಲ, ಸುಲೇಮಾನ್ ಸಾಬ್, ಮಂಜುನಾಥ್ ಮಗಡಿ, ಈಶ್ವರ ಮೆಡ್ಲೇರಿ, ಹೊನ್ನಪ್ಪ ಸಂಜೀವಣ್ಣನವರ, ಚನ್ನಬಸಪ್ಪ ಹುಡೆದ, ಬಸವರಾಜ ಕುಂಬಾರ, ಬಸವರಾಜ ಹಿರೇಮನಿ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು, ಶಿಕ್ಷಣ ಇಲಾಖೆಯ ಸಿಬ್ಬಂದಿ ಹಾಗೂ ಗಣ್ಯರು ಉಪಸ್ಥಿತರಿದ್ದರು.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 