ಜಿ.ಎಂ.ಪವಿತ್ರಾಗೆ ಪ್ರತಿಭಾ ಪುರಸ್ಕಾರದ ಗೌರವ

ಜಿ.ಎಂ.ಪವಿತ್ರಾಗೆ ಪ್ರತಿಭಾ ಪುರಸ್ಕಾರದ ಗೌರವ G.M. Pavitra honored with Pratibha Award

ಲೋಕದರ್ಶನ ವರದಿ

ಕಂಪ್ಲಿ 04:  ಚಿಕ್ಕಬಳ್ಳಾಪುರ ನಗರದ ಕನ್ನಡ ಭವನದಲ್ಲಿ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ನೇತೃತ್ವದಲ್ಲಿ ನಡೆದ ಪತ್ರಕರ್ತರ ಮಕ್ಕಳ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಕಂಪ್ಲಿಯ ಎಮ್ಮಿಗನೂರಿನ ಹಿರಿಯ ಪತ್ರಕರ್ತರಾದ ಜಿ.ಎಂ.ಬಸಯ್ಯಸ್ವಾಮಿ ಪುಷ್ಪಾವತಿ ದಂಪತಿಯ ಸುಪುತ್ರಿ ಜಿ.ಎಂ.ಪವಿತ್ರ ಇವರಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು.  

ಇಲ್ಲಿನ ಕಾರ್ಯಕ್ರಮದಲ್ಲಿ ದ್ವಿತೀಯ ಪಿಯುಸಿಯಲ್ಲಿ 581(ಶೇ.96.83ಅ) ಅಂಕಗಳನ್ನು ಪಡೆದ ಹಿನ್ನಲೆ ಪತ್ರಕರ್ತರ ಸಂಘದಿಂದ ಪ್ರತಿಭಾ ಪುರಸ್ಕಾರವನ್ನು ಗೌರವಿತವಾಗಿ ಸ್ವೀಕರಿಸಿದರು. ಈ ಸಂದರ್ಭದಲ್ಲಿ ಸಂಘದ ರಾಜ್ಯಾಧ್ಯಕ್ಷ ಶಿವಾನಂದ ತಗಡೂರು, ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ.ಸುಧಾಕರ್, ಜಿಲ್ಲಾಧ್ಯಕ್ಷ ರವಿಕುಮಾರ ಸೇರಿದಂತೆ ಇತರರು ಇದ್ದರು.