ಪಿಂಜಾರ್ ನದಾಫ್ ಅಭಿವೃದ್ಧಿ ನಿಗಮಕ್ಕೆ ಅನುದಾನ ಬಿಡುಗಡೆ: ಶಾಸಕ ಜೆ.ಎನ್.ಗಣೇಶ ಭರವಸೆ
ಕಂಪ್ಲಿ 11: ಪಿಂಜಾರ್ ನದಾಫ್ ಸಮುದಾಯವು ಬಹಳಷ್ಟು ಹಿಂದುಳಿದ್ದು, ಅಭಿವೃದ್ಧಿಗಾಗಿ ಸಿಎಂ ಗಮನಕ್ಕೆ ತಂದು, ಪಿಂಜಾರ್ ನದಾಫ್ ಅಭಿವೃದ್ಧಿ ನಿಗಮಕ್ಕೆ ಅನುದಾನ ಬಿಡುಗಡೆ ಮಾಡಿಸಲಾಗುವುದು ಎಂದು ಶಾಸಕ ಜೆ.ಎನ್.ಗಣೇಶ ಭರವಸೆ ನೀಡಿದರು. ಕರ್ನಾಟಕ ರಾಜ್ಯ ಪಿಂಜಾರ್ ನದಾಫ್ ಸಂಘದ ಕಂಪ್ಲಿ ತಾಲೂಕು ಘಟಕದಿಂದ ಅಂಜುಮನ್ ಖಿದ್ಮತೆ ಎ ಇಸ್ಲಾಂ ಸಮಿತಿ ಸಹಯೋಗದಲ್ಲಿ ಭಾನುವಾರ ಪಟ್ಟಣದ ಹೊಸಪೇಟೆ ಬೈಪಾಸ್ ರಸ್ತೆಯ ಹಿಂದೂಸ್ತಾನ ಗಾರ್ಡನ್ ಪೈಲ್ವಾನ್ ರಂಜಾನ್ ಸಾಬ್ ವೇದಿಕೆಯಲ್ಲಿ ಆಯೋಜಿಸಿದ್ದ ಉಚಿತ ಮುಸ್ಲಿಂ ಸಾಮೂಹಿಕ ವಿವಾಹದಲ್ಲಿ ಮುಸ್ಲಿಂ ಧರ್ಮಗುರು ಸೈಯದ್ ಷಾ ಅಬುಲ್ ಹಸನ್ ಸಜ್ಜಾದೆ ನಸೀನ್ ಖಾದ್ರಿ ಅವರ ದಿವ್ಯ ಸಾನಿಧ್ಯದಲ್ಲಿ ನವ ವಸಂತಕ್ಕೆ ಕಾಲಿಟ್ಟ ಐದು ಜೋಡಿಗಳಿಗೆ ಆಶೀರ್ವದಿಸಿ ಮತ್ತು ವೇದಿಕೆ ಸಮಾರಂಭ ಉದ್ಘಾಟಿಸಿ ಮಾತನಾಡಿ ವಿವಿಧ ಎಮ್ಮೀಗನೂರು ಕಂಪ್ಲಿ ಕುರುಗೋಡು ಕಡೆಗಳಲ್ಲಿ ಶಾದಿ ಮಹಾಲ್ ನಿರ್ಮಾಣಕ್ಕೆ ಅತಿ ಶೀಘ್ರದಲ್ಲಿ ಶಂಕುಸ್ಥಾಪನೆ ನೆರವೇರಿಸಲಾಗುವುದು. ಪಿಂಜಾರ್ ನದಾಫ್ ಸಮುದಾಯ ಹಿಂದುಳಿದ್ದು, ಅಭಿವೃದ್ಧಿಗೆ ಎಲ್ಲಾ ರೀತಿಯಲ್ಲಿ ಸಹಕರಿಸಲಾಗುವುದು. ಸಿಎಂ ಗಮನಕ್ಕೆ ತಂದು ಅಭಿವೃದ್ಧಿ ನಿಗಮಕ್ಕೆ ಹೆಚ್ಚಿನ ಅನುದಾನ ಮೀಸಲಿಸಲಾಗುವುದು. ಸಮಾಜದ ಬದಲಾವಣೆಗೆ ಶಿಕ್ಷಣ ಅತಿ ಮುಖ್ಯವಾಗಿದೆ. ಒಳ್ಳೆಯ ಶಿಕ್ಷಣದೊಂದಿಗೆ ಸಮಾಜವನ್ನುಅಭಿವೃದ್ಧಿಯತ್ತ ಕೊಂಡೊಯ್ಯಬೇಕು. ಹೊಸ ಜೀವನಕ್ಕೆ ಕಾಲಿಟ್ಟ ಜೋಡಿಗಳು, ಹೊಂದಾಣಿಕೆ ಮೂಲಕ ಜೀವನ ಸಾಗಿಸಿ ಮಕ್ಕಳಿಗೆ ಒಳ್ಳೆಯ ಶಿಕ್ಷಣ ಕೊಡಿಸಿ, ಭವಿಷ್ಯದ ಉತ್ತಮ ಪ್ರಜೆಯನ್ನಾಗಿ ರೂಪಿಸಬೇಕು ಎಂದರು.ಪಿಂಜಾರ್ ನದಾಫ್ ಸಂಘದ ತಾಲೂಕು ಅಧ್ಯಕ್ಷ ಒ.ಎಸ್.ದಾದಾಸಾಬ್ ಕಾರ್ಯಕ್ರಮದ ಅಧ್ಯಕ್ಷತೆವಹಿಸಿ ಮಾತನಾಡಿ, ಇದೇ ಮೊದಲ ಬಾರಿಗೆ ಪ್ರತಿಯೊಬ್ಬರ ಸಹಕಾರದಿಂದ ಉಚಿತ ಮುಸ್ಲಿಂ ಸಾಮೂಹಿಕ ಮದುವೆ ಕಾರ್ಯಕ್ರಮ ಯಶಸ್ವಿ ಮಾಡಲಾಗಿದೆ. ಇದೇ ತರನಾಗಿ ಮುಂದಿನ ಸಮಾಜ ಸೇವಾ ಕಾರ್ಯ ಮತ್ತು ಸಮಾಜದ ಅಭಿವೃದ್ಧಿಗೆ ಕೈಜೋಡಿಸಬೇಕು ಎಂದರು.ಈ ಸಂದರ್ಭದಲ್ಲಿ ಮುಸ್ಲಿಂ ಧರ್ಮಗುರುಗಳಾದ ಸೈಯದ್ ಷಾ ಖಾಜಾ ಮುಹಿನೂದ್ದಿನ್ ಖಾದರಿ ಸೈಯದ್ ನೂರು ಖಾದರಿ ರೈಸ್ ಸಾಹೇಬ್, ನೂರುಸಾಹೇಬ್, ಎಪಿಎಂಸಿ ಅಧ್ಯಕ್ಷ ಹಬೀಬ್ ರೆಹಮಾನ್, ಪುರಸಭೆ ಸದಸ್ಯರಾದ ಸಿ.ಆರ್.ಹನುಮಂತ, ಎಲ್ ಹೊನ್ನುರವಲಿ, ಅಂಜುಮನ್ ಖಿದ್ಮತೆ ಎ ಇಸ್ಲಾಂ ಸಮಿತಿ ಅಧ್ಯಕ್ಷ ಪೆಂಟರ್ ಮಸ್ತಾನ್‌ಸಾಬ್ , ಪಿಂಜಾರ್ ನದಾಫ್ ಸಂಘದ ರಾಜ್ಯಾಧ್ಯಕ್ಷ ಹೆಚ್.ಜಲೀಲ್ ಸಾಬ್, ಉಪಾಧ್ಯಕ್ಷರಾದ ಹಾಜಿ ಜಿ.ಡಿ.ನದಾಫ್, ಮೌಲಾಸಾಬ್, ಪ್ರಧಾನ ಕಾರ್ಯದರ್ಶಿ ರಿಯಾಜ ಸಲೀಮ ನಾಗ್ತೆ, ಅಬ್ದುಲ್ ಕಲಾಂ ಟ್ರಸ್ಟ್ ಅಧ್ಯಕ್ಷ ಅಕ್ಕಿ ಜಿಲಾನ್, ಪಿಂಜಾರ್ ಸಂಘದ ತಾಲೂಕು ಪ್ರ.ಕಾರ್ಯದರ್ಶಿ ಕೆ.ರಾಜಾವಲಿ, ಜೆಸಿಐ ಸೋನಾ ಅಧ್ಯಕ್ಷ-ರಸೂಲ್,ಮುಖಂಡರಾದಬಿ.ನಾರಾಯಣಪ್ಪ, ಕೆ.ಷಣ್ಮುಖಪ್ಪ, ವಾಹೀದ್, ಮೆಹಮೂದ್, ಬಾವಿಕಟ್ಟೆ ಮೆಹಬೂಬ್ ಸೇರಿದಂತೆ ಅನೇಕರಿದ್ದರು.