ಮಾಧ್ಯಮ ವೃತ್ತಿಯಲ್ಲಿಯ ಮೋಜಿನ ಪ್ರಸಂಗಗಳು ವಿನೋದ ಕಾರ್ಯಕ್ರಮ
Fun program about funny incidents in the media profession
ಬೆಳಗಾವಿ 10- ಹಾಸ್ಯಕೂಟ ಬೆಳಗಾವಿ ಮತ್ತು ಕನ್ನಡ ಸಾಹಿತ್ಯ ಭವನ ವಿಶ್ವಸ್ತ ಮಂಡಳಿ ಸಂಯುಕ್ತ ಆಶ್ರಯದಲ್ಲಿ ಇದೇ ದಿ. 13 ಶನಿವಾರದಂದು ಸಾಯಂಕಾಲ 4-30 ಕ್ಕೆ ನಗರದ ಚೆನ್ನಮ್ನ ವೃತ್ತದ ಬಳಿಯಿರುವ ಕನ್ನಡ ಸಾಹಿತ್ಯ ಭವನದಲ್ಲಿ "ಮಾಧ್ಯಮ ವೃತ್ತಿಯಲ್ಲಿಯ ಮೋಜಿನ ಪ್ರಸಂಗಗಳು" ಎಂಬ ಹಾಸ್ಯ ಕಾರ್ಯಕ್ರಮವನ್ನು ಹಮ್ನಿಕೊಂಡಿದ್ದಾರೆ.
ಹಿರಿಯ ಪತ್ರಕರ್ತರಾದ ಎಲ್. ಎಸ್. ಶಾಸ್ತ್ರಿಯವರು ಕಾರ್ಯಕ್ರಮಕ್ಕೆ ಚಾಲನೆಯನ್ನು ನೀಡಲಿದ್ದು ಅಧ್ಯಕ್ಷತೆಯನ್ನು ಹಿರಿಯ ಕವಿಗಳಾದ ಪ್ರೊ. ಎಂ. ಎಸ್. ಇಂಚಲ ವಹಿಸಿಕೊಂಡಿದ್ದಾರೆ. ಪ್ರಾಯೋಜಕತ್ವವನ್ನು ಹಿರಿಯ ಪತ್ರಿಕಾ ವರದಿಗಾರರಾದ ಶ್ರೀಮತಿ ಕೀರ್ತಿಶೇಖರ ಕಾಸರಗೋಡು ಅವರು ವಹಿಸಿಕೊಂಡಿದ್ದು ವಪ್ರಾಸ್ತಾವಿಕ ನುಡಿಯನ್ನು ಹಾಸ್ಯಕೂಟ ಸಂಚಾಲಕ, ವರದಿಗಾರ ಗುಂಡೇನಟ್ಟಿ ಮಧುಕರ ಆಡಲಿದ್ದಾರೆ.
ಮಾಧ್ಯಮದಲ್ಲಿಯ. ಮಜಾ ಪ್ರಸಂಗಗಳನ್ನು ಹಿರಿಯ ವರದಿಗಾರರಾದ ಸುಭಾಸ ಕುಲಕರ್ಣಿ, ಮುರುಗೇಶ ಶಿವಪೂಜಿ, ಹೃಷಿಕೇಶ ಬಹಾದ್ಧೂರ ದೇಸಾಯಿ, ರವೀಂದ್ರ ಉಪ್ಪಾರ, ಮೆಹಬೂಬ ಮಕಾನದಾರ ಹಂಚಿಕೊಳ್ಳಲ್ಲಿದ್ದಾರೆ. ಹಾಸ್ಯಕೂಟ ಕಲಾವಿದ ಜಿ. ಎಸ್. ಸೋನಾರ ನಿರೂಪಿಸಲಿದ್ದಾರೆ. ಹೆಚ್ಚಿನ ಸಂಖ್ಯೆಯಲ್ಲಿ ಹಾಸ್ಯಾಸಕ್ತರು ಆಗಮಿಸುವಂತೆ ಸಾಹಿತ್ಯ ಭವನದ ಗೌರವ ಕಾರ್ಯದರ್ಶಿ ರಾಮಚಂದ್ರ ಕಟ್ಟಿ ಪ್ರಕಟನೆಯಲ್ಲಿ ತಿಳಿಸಿದ್ದಾರೆ.
ಚಿನ್ನ ದೋಚಿದ್ದ ಖದೀಮನ ಬಂಧನ : 15.73 ಲಕ್ಷ ಮೌಲ್ಯದ 103.97 ಗ್ರಾಂ ಚಿನ್ನ ವಶ
ಕಣಗಲಾ ಬಳಿ ಲಾರಿ, ದ್ವಿಚಕ್ರವಾಹನ ನಡುವೆ ಅಪಘಾತ : ಇಬ್ಬರ ಸಾವು
ಗಾಂಜಾ ಮಾರಾಟಗಾರರ ಮೇಲೆ ದಾಳಿ; 9,21 ಲಕ್ಷದ ವಸ್ತುಗಳ ವಶ, ಐವರ ಬಂಧನ
ಹೆತ್ತ ವೃದ್ದ ತಾಯಿಯನ್ನೆ ನಿರ್ಜನ ಪ್ರದೇಶಕ್ಕೆ ರಾತ್ರಿ ಎಸೆದು ಹೋದ ಪಾಪಿ ಪುತ್ರ : ಅನ್ನ ನೀರು ಇಲ್ಲದೆ ಈಡಿ ರಾತ್ರಿ ಕಳೆದ ಹಿರಿಯ ಜೀವ
ಹಿಜಾಬ್ ವಿರುದ್ದ ಕೇಸರಿ ಶಾಲು ನೀಡಲು ಹೊರಟ ಶ್ರೀರಾಮಸೇನೆ ಕಾರ್ಯಕರ್ತರು ಪೊಲೀಸ ವಶಕ್ಕೆ
ನಿಡಸೋಸಿ ರಸ್ತೆ ಅಗಲಿಕರಣ: ಸ್ಮಶಾನದ ಸಮಾಧಿಗಳ ತೆರವು ಕಾರ್ಯ ಪ್ರಾರಂಭ, ನುಡಿದಂತೆ ನಡೆದ ಜಿಲ್ಲಾಧಿಕಾರಿ ಮೊಹ್ಮದ್ ರೋಶನ್ 