ಫೆ.27 ರಿಂದ ಹಜರತ್ ಸೈಯದ್ ಬಾಷಾ ರಹಮತುಲ್ಲಾ ಅಲೈ ಉರುಸ್

ಮುಂಡರಗಿ 25 : ತಾಲೂಕಿನ ಕಲಕೇರಿ ಗ್ರಾಮದಲ್ಲಿ ಫೆ.27 ರಿಂದ 29ರವರೆಗೆ ಹಜರತ್ ಸೈಯದ್ ಬಾಷಾ ರಹಮತುಲ್ಲಾ ಅಲೈ ಅವರ ಉರುಸು ಕಾರ್ಯಕ್ರಮ ಜರುಗುವುದು ಎಂದು ದರ್ಗಾ ಕಮಿಟಿ ಅಧ್ಯಕ್ಷ ಎಂ.ಯು.ಮಕಾಂದಾರ ಹೇಳಿದರು. 

ಪಟ್ಟಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹಿಂದೂ-ಮುಸ್ಲಿಂ ಬಾಂಧವರ ಹಾಗೂ ಸರ್ವ ಧರ್ಮಗಳ ಭಾವೈಕ್ಯತೆಯಿಂದ ಕೂಡಿದ ಈ ಉರುಸು ಬಹಳ ವಿಜ್ರಂಭಣೆಯಿಂದ ಆಯೋಜಿಸಲಾಗಿದೆ. 

ಈ ಕಾರ್ಯಕ್ರಮದಲ್ಲಿ ಕೊಪ್ಪಳ ತಾಲೂಕಿನ ಬೆಳಗಟ್ಟಿ ಗ್ರಾಮದ ಶ್ರೀ ಹಜರತ್ ಸೈಯದ ಷಾ ಮುಸ್ತಫಾ ಖಾದ್ರಿ ಸಾಹೇಬ, ಕಲಕೇರಿ-ವಿರುಪಾಪೂರ ಶ್ರೀ ಮುದುಕೇಶ್ವರ ಶಿವಾಚಾರ್ಯ ಮಹಾಸ್ವಾಮಿಗಳು ಹಾಗೂ ಚಿಕೇನಕೊಪ್ಪ ಬಳಗಾನೂರ ಶ್ರೀ ಶಿವಶಾಂತವೀರ ಶರಣರು ಈ ಉರುಸು ಕಾರ್ಯಕ್ರಮದ ದಿವ್ಯ ಸಾನಿದ್ಯವನ್ನು ವಹಿಸಲಿದ್ದಾರೆ. 

ಅಲ್ಲದೇ ಫೆ.27 ರಂದು ಬೆಳಿಗ್ಗೆ 10:30 ರಂದು ಹಾವೇರಿ ಜಿಲ್ಲೆಯ ಗುಡಗೇರಿಯ ತಾಜ್ ಮ್ಯುಜಿಕಲ್ ಬ್ರಾಸ್ ಬ್ಯಾಂಡ್ ಕಂಪನಿ ಹಾಗೂ ಕಲಕೇರಿ ಗ್ರಾಮದ ಶ್ರೀ ದುರ್ಗಾದೇವಿ ಮ್ಯೂಜಿಕಲ್ ಬ್ರಾಸ್ ಬ್ಯಾಂಡ್ ಆರ್ಕೇಸ್ಟ್ರಾ ಕಂಪನಿಯಿಂದ ಗಂಧದ ಮೆರವಣಿಗೆ ಮೂಲಕ ದರ್ಗಾ ತಲುಪುವದು. 

ನಂತರ ಫೆ.28 ಬೆಳಿಗ್ಗೆ 10:30 ರಂದು ಬೆಳಗಟ್ಟಿ ಗ್ರಾಮದ ಶ್ರೀ ಹಜರತ್ ಸೈಯದ ಷಾ ಮುಸ್ತಫಾ ಖಾದ್ರಿ ಸಾಹೇಬ, ಕಲಕೇರಿ-ವಿರುಪಾಪೂರ ಶ್ರೀ ಮುದುಕೇಶ್ವರ ಶಿವಾಚಾರ್ಯ ಮಹಾಸ್ವಾಮಿಗಳು ಸಾಂಸ್ಕೃತಿಕ ಸಂಭ್ರಮ ಕಾರ್ಯಕ್ರಮದಲ್ಲಿ ಸಾನಿಧ್ಯವಹಿಸುವರು. ಹಾಗೂ ತಹಶಿಲ್ದಾರ ಧನಂಜಯ ಮಾಲಗಿತ್ತಿ ಇವರು ಉದ್ಘಾಟಿಸಲಿದ್ದಾರೆ, ಅಧ್ಯಕ್ಷತೆಯನ್ನು ಕಲಕೇರಿ ಅಂಜುಮನ್ ಕಮೀಟಿಯ ಮಾಜಿ ಅಧ್ಯಕ್ಷ ಜನಾಬ ಎಂ.ಎಂ.ಮುಲ್ಲಾ ಅಧ್ಯಕ್ಷತೆ ವಹಿಸಲಿದ್ದಾರೆ. ಈ ವೇಳೆ ಕಲಕೇರಿ ಗ್ರಾಮದ ಸದ್ಬಕ್ತರು ಪಾಲ್ಗೊಳ್ಳಲಿದ್ದಾರೆ. ಮದ್ಯಾಹ್ನ 12:00 ಕ್ಕೆ ರಂದು ನವ ಕರ್ನಾಟಕ ಜಾಂಜ್ ಮೇಳದೊಂದಿಗೆ ಅಕ್ಕಿ ಬಂಡಿ ಮೆರವಣಿಗೆ ಪ್ರಾರಂಭಿಸಿ ಗ್ರಾಮದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ರಾತ್ರಿ 10:00 ಗಂಟೆಗೆ ಉರುಸು ಷರೀಫ ದರ್ಗಾ ತಲುಪುವದು. ನಂತರ ಕರ್ನಾಟಕ ಮೆಲೋಡೀಸ್ ಕಲಾ ತಂಡದ ಮೂಲಕ ಜೀ ಟೀವಿಯ ಸರಿಗಮಪ ಖ್ಯಾತ ಗಾಯಕಿ ಮುಂಡರಗಿ ಪಟ್ಟಣದ ನಯನಾ ಅಳವಂಡಿಯವರಿಂದ ಸಂಗೀತ ಹಾಗೂ ಹಾಸ್ಯ ರಸಮಂಜರಿ ಕಾರ್ಯಕ್ರಮ ಜರುಗುವುದು. 

ಹಾಗೂ ಫೆ.29 ರಂದು ಬೆಳಿಗ್ಗೆ 11:30 ಗಂಟೆಗೆ ದರ್ಗಾ ಆವರಣದಲ್ಲಿ ಜಿಯಾರತ್ ಫಾತೆಹಾ ಕಾರ್ಯಕ್ರಮದ ಜರುಗುವದು. ನಂತರ ಧರ್ಮಸಬೆಯನ್ನು ಶಿರಹಟ್ಟಿ ಶಾಸಕ ಡಾ.ಚಂದ್ರು ಲಮಾಣಿ ಇವರು ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ. ದರ್ಗಾ ಕಮಿಟಿ ಅಧ್ಯಕ್ಷ ಎಂ.ಯು.ಮಕಾಂದಾರ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಲಿದ್ದಾರೆ. ಇದೇ ವೇಳೆ ದಿನಪತ್ರಿಕೆ ಸಂಪಾದಕರ ಸಂಘದ ಅಧ್ಯಕ್ಷ ನೂರಹ್ಮದ ಮಕಾಂದಾರ ಇವರಿಂದ ಪ್ರಾಸ್ತಾವಿಕ ನುಡಿ ಜರುಗುವದರು. ಈ ವೇಳೆ ಶಿವಕುಮಾರಗೌಡ ಪಾಟೀಲ್, ಹೇಮಗೀರೀಶ ಹಾವಿನಳ, ಎಸ್‌.ಡಿ.ಮಕಾಂದಾರ, ಕೆ.ಎಂ.ಸೈಯದ್ ಸುಜಾತಾ ದೊಡ್ಡಮನಿ, ದೀಪಾ ತಿಪ್ಪಾಪೂರ, ಶ್ರೀ ಶಿವಲಿಂಗಯ್ಯ ಗುರುವಿನ,  ಎಸ್‌.ಎಸ್‌.ಮೇಟಿ, ಲಿಂಗರಾಜಗೌಡ ಪಾಟೀಲ್, ಬಿ.ಕೆ.ದೇಸಾಯಿ, ರಾಜು ಡಾವಣಗೇರಿ, ರಮೇಶ ಹುಳಕಣ್ಣವರ, ಸಂಗನಗೌಡ ಪಾಟೀಲ, ಫೀರಸಾಬ ನಧಾಫ್, ಆರ್‌.ಎಸ್‌.ತಳಕಲ್ ಇವರು ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಇವರು ಹಾಗೂ ಮದ್ಯಾಹ್ನ 12:30 ಗಂಟೆಗೆ ಮನರಂಜನೆ ಕಾರ್ಯಕ್ರಮ ಹಾಗೂ ಅಂಗನವಾಡಿ, ಎಂ.ಸಿ.ಎಸ್, ಕೆ.ಜಿ.ಎಸ್, ಎಚ್‌.ಯು.ಬಿ.ಎಸ್, ಎಸ್‌.ಜಿ.ಎಂ.ಎಚ್‌.ಎಸ್ ಶಾಲೆಗಳು, ಖಾದ್ರಿ ಕಲಾ ತಂಡ, ಗಾಂದಿ ನಗರ, ರೈಸಿಂಗ್ ಸ್ಟಾರ್, ಮದಕರಿ ಕಲಾತಂಡ, ಮುಬಾರಕ್ ಕಲಾತಂಡ, ಜೈ ಭೀಮ ಕಲಾತಂಡ ಇತರೆ ಸಂಘ ಸಂಸ್ಥೆಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯುವುದು. 

ಈ ವೇಲೆ ಜಿ.ಎಸ್‌.ಪಾಟೀಲ್, ಶಿವಕುಮಾರಗೌಡ ಪಾಟೀಲ್, ಡಾ.ಚಂದ್ರು ಲಮಾಣಿ, ಡಾ.ಶಿರಾಷ್ ಪಕೃದ್ಧಿನ್ ಕಮ್ಮಾರ, ಚಂದ್ರಶೇಖರ ಜುಟ್ಟಲ್, ನೂರಟಹ್ಮದ ಮಕಾಂದಾರ, ಎಸ್‌.ಕೆ.ಇನಾಂದಾರ, ಮಹಾಬೂಸುಭಾನಿ ಅಳವಂಡಿ, ಅಬ್ದುಲಖಾರಜಿಲಾನಿ ಅಳವಂಡಿ ವಿರಿಗೆ ಸನ್ಮಾನಸಿ ಗೌರವಿಸಲಾಗುವದು. ಈ ಎಲ್ಲಾ ಕಾರ್ಯಕ್ರಮಕ್ಕೆ ಹಿಂದೂ ಮುಸ್ಲಿಂ ಬಾಂಧವರು ಸಕಲ ಸದ್ಭಕ್ತರು ಹಾಗೂ ಸುತ್ತಮುತ್ತಲಿನ ಗ್ರಾಮದ ಸಕಲ ಸರ್ವ ಸದ್ಭಕ್ತರು ತನುಮನ ಸೇವೆ ಸಲ್ಲಿಸಿ ಹಜರತ್ ಸೈಯದ್ ಬಾಷಾ ರಹಮತುಲ್ಲಾ ಅಲೇ ಇವರ ಉರುಸು ಕೃಪೆಗೆ ಪಾತ್ರರಾಗಬೇಕೆಮದು ವಿನಂತಿಸಲಾಗುವುದು ಎಂದು ಮಾಹಿತಿ ನೀಡಿದರು. 

ಈ ವೇಳೆ ಎಸ್‌.ಡಿ.ಮಕಾಂದಾರ ಬಾಬಜಾನ ಅಳವಂಡಿ, ಸಾದಿಕ್ ಮಕಾಂದಾರ, ಪ್ರಕಾಶಗೌಡ ತಿಪ್ಪಾಪೂರ, ಎಂ.ಎಸ್‌.ಮಕಾಂದಾರ, ಹಾಸಿಂಪೀರ್ ಲಕ್ಷ್ಮೇಶ್ವರ, ವಿನೋಧ ವಡ್ಡರ್ ಇತರರು ಇದ್ದರು.