ತರಬೇತಿಗೆ ತೆರಳುವ ಸಿಬ್ಬಂದಿಗೆ ಉಚಿತ ಸಾರಿಗೆ ವ್ಯವಸ್ಥೆ; ನಿಗದಿತ ಸಮಯಕ್ಕೆ ಹಾಜರಾಗಲು, ಡಿಸಿ ದಿವ್ಯ ಪ್ರಭು ಸೂಚನೆ

ಧಾರವಾಡ.28: ಲೋಕಸಭೆ ಸಾರ್ವತ್ರಿಕ ಚುನಾವಣೆ-2024 ನೇದ್ದಕ್ಕೆ ಸಂಬಂಧಿಸಿದಂತೆ ಧಾರವಾಡ ಜಿಲ್ಲೆಯಲ್ಲಿ ಕರ್ತವ್ಯ ನಿರ್ವಹಿಸುವ ಎಲ್ಲ ಮತಗಟ್ಟೆ ಸುಬ್ಬಂದಿಗಳಿಗೆ ಮೇ 1 ರಂದು, ಆಯಾ ವಿಧಾನಸಭಾ ಮತಕ್ಷೇತ್ರ ವ್ಯಾಪ್ತಿಯ ತರಬೇತಿ ಕೇಂದ್ರಗಳಲ್ಲಿ 2ನೆ ಹಂತದ ಚುನಾವಣಾ ತರಬೇತಿಯನ್ನು ಆಯೋಜಿಸಿದ್ದು, ಎಲ್ಲ ಮತಗಟ್ಟೆ ಸಿಬ್ಬಂದಿಗಳು ತಮ್ಮ ಆದೇಶದಲ್ಲಿ ತಿಳಿಸಿರುವ ತಾಲೂಕು ಸ್ಥಳಗಳಲ್ಲಿ ನಿಗದಿತ ಸಮಯಕ್ಕೆ ಹಾಜರಿದ್ದು, ಅಗತ್ಯ ತರಬೇತಿ ಪಡೆಯಬೇಕೆಂದು ಜಿಲ್ಲಾ ಚುನಾವಣಾಧಿಕಾರಿಗಳು ಆಗಿರುವ ಜಿಲ್ಕಾಧಿಕಾರಿ ದಿವ್ಯ ಪ್ರಭು ಅವರು ತಿಳಿಸಿದ್ದಾರೆ.

ಈ ಕುರಿತು ಪ್ರಕಟಣೆ ನೀಡಿರುವ ಅವರು, ಮತಗಟ್ಟೆ ಸಿಬ್ಬಂದಿಗಳಿಗೆ, ನವಲಗುಂದದ ಶಂಕರ ಕಲಾ ಮತ್ತು ವಾಣಿಜ್ಯ ಕಾಲೇಜು, ಕುಂದಗೋಳ ಹರಬಟ್ಟ ಪದವಿ ಪೂರ್ವ ಕಾಲೇಜು, ಧಾರವಾಡ ನಗರದ ಸ್ಟೇಶನ್ ರಸ್ತೆಯ ಬಾಶಲ್ ಮಿಶನ್ ಇಂಗ್ಲೀಷ ಮಿಡಿಯಂ ಹೈಸ್ಕೂಲ್, ಹು-ಧಾ ಪೂರ್ವ ಹುಬ್ಬಳ್ಳಿ ಯ ಹಳೇ ಬಸ್ ನಿಲ್ದಾಣ , 73-ಹು-ಧಾ ಕೇಂದ್ರ, ಲ್ಯಾಮಿಂಗಟನ್ ಹೈಸ್ಕೂಲ್, 74-ಹು-ಧಾ ಪಶ್ಚಿಮ ಧಾರವಾಡ ಆರ್‌.ಎಲ್‌.ಎಸ್ ಸಂಯುಕ್ತ ಪದವಿ ಪೂರ್ವ ಕಾಲೇಜು ಮತ್ತು 75-ಕಲಘಟಗಿ, ತಹಶೀಲದಾರ ಕಚೇರಿಯಿಂದ ಬಸ್ ಹೊರಡಲಿವೆ ಎಂದು ಅವರು ತಿಳಿಸಿದ್ದಾರೆ. ಪ್ರತಿ ವಿಧಾನಸಭಾ ಕ್ಷೇತ್ರದಿಂದ ಆಯಾ ಚುನಾವಣಾ ತರಬೇತಿ ಕೇಂದ್ರಕ್ಕೆ ಮತದಾನ ಸಿಬ್ಬಂದಿಗಳು ತೆರಳಿ, ತರಬೇತಿಗೆ ಸರಿಯಾದ ಸಮಯಕ್ಕೆ ಹಾಜರಿರುವ ಹಿತದೃಷ್ಟಿಯಿಂದ ಉಚಿತ ಸಾರಿಗೆ ವ್ಯವಸ್ಥೆ ಕಲ್ಪಿಸಲಾಗಿದೆ. ಮೇ.1 ರಂದು ಆಯಾ ವಿಧಾನಸಭಾ ಕ್ಷೇತ್ರದಿಂದ ಆಯಾ ಚುನಾವಣಾ ತರಬೇತಿ ಕೇಂದ್ರಕ್ಕೆ ಮತಗಟ್ಟೆ ಸಿಬ್ಬಂದಿಗಳು ತರಬೇತಿಗೆ ಸರಿಯಾದ ಸಮಯಕ್ಕೆ ಹಾಜರಿರುವ ಹಿತದೃಷ್ಟಿಯಿಂದ ಸಾರಿಗೆ ವ್ಯವಸ್ಥೆ ಕಲ್ಪಿಸಿಲಾಗಿದೆ. ಬೆಳಿಗ್ಗೆ 6-30 ಗಂಟೆಗೆ ಬಸ್ ಗಳು ಹೊರಡಲಿವೆ. ಬೇರೆ ಬೇರೆ ವಿಧಾನಸಭಾ ಕ್ಷೇತ್ರದ ತರಬೇತಿ ಕೇಂದ್ರಕ್ಕೆ ಹಾಜರಾಗುವ ಸಿಬ್ಬಂದಿಗಳ ಸಂಚಾರ ವ್ಯವಸ್ಥೆಗಾಗಿ ವಾಹನಗಳನ್ನು ನಿಯೋಜಿಸಲಾಗಿದೆ.

ಕರ್ತವ್ಯಕ್ಕೆ ಆದೇಶ ಪಡೆದಿರುವ ಎಲ್ಲರೂ ಈ ಸೌಲಭ್ಯ ಉಪಯೋಗಿಸಿಕೊಂಡು ತಪ್ಪದೇ ನಿಗದಿತ ಸಮಯಕ್ಕೆ ತರಬೇತಿಗೆ ಹಾಜರಾಗಬೇಕೆಂದು ಚುನಾವಣಾಧಿಕಾರಿಗಳು ಆಗಿರುವ ಜಿಲ್ಲಾಧಿಕಾರಿ ದಿವ್ಯ ಪ್ರಭು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ