ಹೂವಿನ ಹಡಗಲಿ

ವಿದ್ಯಾರ್ಥಿಗಳಿಗೆ ಉಚಿತ ಪಠ್ಯಪುಸ್ತಕ ವಿತರಣೆ - ಶಾಸಕ ಕೃಷ್ಣ ನಾಯಕ

ವಿದ್ಯಾರ್ಥಿಗಳಿಗೆ ಉಚಿತ ಪಠ್ಯಪುಸ್ತಕ ವಿತರಣೆ - ಶಾಸಕ ಕೃಷ್ಣ ನಾಯಕ

ಲೋಕದರ್ಶನ ವರದಿ 

ಹೂವಿನಹಡಗಲಿ 25:  ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿಗೆ ಉತ್ತೇಜನ ನೀಡುವ ಮಹತ್ವದ ಕ್ರಮವಾಗಿ  ಸರ್ಕಾರ ಮೊದಲ ಬಾರಿಗೆ ಪದವಿಪೂರ್ವ ಕಾಲೇಜುಗಳ ವಿದ್ಯಾರ್ಥಿಗಳಿಗೆ ಉಚಿತ ಪಠ್ಯಪುಸ್ತಕ ವಿತರಣೆ ಆರಂಭಿಸಿದೆ. ಇದರ ಸದುಪಯೋಗ ಪಡಿಸಿಕೊಳ್ಳಬೇಕು ಎಂದು ಶಾಸಕ ಎಲ್ ಕೃಷ್ಣನಾಯಕ ಅಭಿಮತ ವ್ಯಕ್ತಪಡಿಸಿದರು.ಪಟ್ಟಣದ ಸೊಪ್ಪಿನ ಕಾಳಮ್ಮನವರ ಬಾಲಕಿಯರ ಸರಕಾರಿ ಪದವಿಪೂರ್ವ ಕಾಲೇಜಿನಲ್ಲಿ ಗುರುವಾರ ಪಠ್ಯಪುಸ್ತಕ ವಿತರಿಸಿ ಮಾತನಾಡಿದರು. ಕಾಲೇಜಿನ ಶೈಕ್ಷಣಿಕ ಹಾಗೂ ಮೂಲಸೌಕರ್ಯ ಅಭಿವೃದ್ಧಿಗೆ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗುವುದು. ಅಧ್ಯಕ್ಷತೆ ವಹಿಸಿದ್ದ ಪ್ರಾಚಾರ್ಯ ಕೊಟ್ರಗೌಡ ಅಯ್ಯನಗೌಡ್ರ ಮಾತನಾಡಿ ಪ್ರಸಕ್ತ ಶೈಕ್ಷಣಿಕ ವರ್ಷ ಕಂಪ್ಯೂಟರ್ ಸೈನ್ಸ್‌ ಜತೆಗೆಗ್ರಾಮೀಣ ಭಾಗದ ವಿದ್ಯಾರ್ಥಿನಿಯರಿಗೆ ಆಧುನಿಕ ತಾಂತ್ರಿಕ ಶಿಕ್ಷಣದ ಅವಕಾಶ ಕಲ್ಪಿಸಲಾಗಿದೆ ಎಂದರು. ಉಪನ್ಯಾಸಕರಾದ ಬಸೆಟ್ಟಿ ಪ್ರಕಾಶ್, ಶಿವಕುಮಾರ್, ದುಷ್ಯಂತ, ಶ್ರೀಕಾಂತ್, ಆರತಿ, ಶಂಕರ್, ಪರಂಜ್ಯೋತಿ, ಉಮಾ ಹಾಗೂ ರಶ್ಮಿ ಉಪಸ್ಥಿತರಿದ್ದರು. ಎನ್‌ಎಸ್‌ಎಸ್ ಅಧಿಕಾರಿಗಳಾದ ವೀರೇಶ್ ಹಾಗೂ ಮಂಜುನಾಥ್ ಭಾಗವಹಿಸಿದ್ದರು. 


ಸುದ್ದಿ ಓದಿ