ಕಾಗವಾಡ

ಉಗಾರದಲ್ಲಿ ಉಚಿತ ಆರೋಗ್ಯ ತಪಾಸಣಾ ಶಿಬಿರ: 150 ಮಂದಿಗೆ ತಪಾಸಣೆ

ಉಗಾರದಲ್ಲಿ ಉಚಿತ ಆರೋಗ್ಯ ತಪಾಸಣಾ ಶಿಬಿರ: 150 ಮಂದಿಗೆ ತಪಾಸಣೆ

ಲೋಕದರ್ಶನ ವರದಿ 

ಕಾಗವಾಡ 20 : ತಾಲ್ಲೂಕಿನ ಉಗಾರ ಖುರ್ದ ಪಟ್ಟಣದಲ್ಲಿ ಗುರುವಾರ ಮಹಾರಾಷ್ಟ್ರದ ಮಿರಜ್ ಪಟ್ಟಣದ ಸ್ಪಂದನ ಹೃದಯಾಲಯ ಮತ್ತು ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯ ವತಿಯಿಂದ ಉಗಾರ ಸಕ್ಕರೆ ಕಾರ್ಖಾನೆಯ ಸಹಯೋಗದಲ್ಲಿ ಉಚಿತ ಆರೋಗ್ಯ ತಪಾಸಣಾ ಶಿಬಿರ ಆಯೋಜಿಸಲಾಗಿತ್ತು.  ಉಗಾರ ಪಟ್ಟಣದ ವೈದ್ಯರಾದ ಡಾ. ಸಾಗರ ಮಾಳಿ ಹಾಗೂ ಡಾ. ಸುರೇಶ ಕುಂದರಗಿ ಅವರು ಶಿಬಿರವನ್ನು ಉದ್ಘಾಟಿಸಿದರು.  

ಶಿಬಿರದಲ್ಲಿ ಭಾಗವಹಿಸಿದ್ದ ಸಾರ್ವಜನಿಕರಿಗೆ ವಿವಿಧ ಆರೋಗ್ಯ ತಪಾಸಣೆಗಳನ್ನು ನಡೆಸಲಾಯಿತು. 50 ಮಂದಿಗೆ ಇಸಿಜಿ, 50 ಮಂದಿಗೆ ಸಕ್ಕರೆ ಕಾಯಿಲೆ, 5 ಮಂದಿಗೆ ಕ್ಯಾನ್ಸರ್, 5 ಮಂದಿಗೆ ಅಸ್ಥಿ ಸಂಬಂಧಿತ ಹಾಗೂ 40 ಮಂದಿಗೆ ಇತರೆ ಕಾಯಿಲೆಗಳ ತಪಾಸಣೆ ಸೇರಿದಂತೆ ಒಟ್ಟು 150 ಮಂದಿಗೆ ಆರೋಗ್ಯ ತಪಾಸಣೆ ನಡೆಸಲಾಯಿತು.  

ಈ ಸಂದರ್ಭದಲ್ಲಿ ಸ್ಪಂದನ ಹೃದಯಾಲಯದ ನಿರ್ದೇಶಕ ಡಾ. ಅಮಿತ್ ಜೋಶಿ ಮಾತನಾಡಿ, ಆಯುಷ್ಮಾನ್ ಭಾರತ್ ಆರೋಗ್ಯ ಕರ್ನಾಟಕ ಯೋಜನೆಯಡಿ ಆಸ್ಪತ್ರೆಯಲ್ಲಿ ಉಚಿತವಾಗಿ ಚಿಕಿತ್ಸೆ ನೀಡಲಾಗುತ್ತಿದೆ. ಪ್ರತಿಯೊಬ್ಬರೂ ಕರ್ನಾಟಕ ಸರ್ಕಾರದ ಆರೋಗ್ಯ ಯೋಜನೆಗಳ ಪ್ರಯೋಜನ ಪಡೆದುಕೊಳ್ಳಬೇಕು ಎಂದು ಮನವಿ ಮಾಡಿದರು.  

ಡಾ. ಅಮಿತ್ ಜೋಶಿ, ಡಾ. ಸಾಗರ ಮಾಳಿ, ಡಾ. ಸುರೇಶ ಕುಂದರಗಿ, ಡಾ. ಅಶ್ಪಕ್ ಮೌಲ್ವಿ, ಡಾ. ಪ್ರಜಕ್ತಾ ಶೇಳಕೆ, ಆದಿನಾಥ ತಾಂದಳೆ, ವಿನಾಯಕ ಕಾಂಬಳೆ, ರಫೀಕ್ ಸಯ್ಯದ್, ಶ್ರೀಕಾಂತ ಭಟ್, ಸ್ಪನಿಲ್ ಬೋರಗಾಂವೆ ಸೇರಿದಂತೆ ಆಸ್ಪತ್ರೆಯ ಸಿಬ್ಬಂದಿ ಹಾಗೂ ಪಟ್ಟಣದ ನಿವಾಸಿಗಳು ಉಪಸ್ಥಿತರಿದ್ದರು.   


ಸುದ್ದಿ ಓದಿ