ಉಚಿತ ವೃತ್ತಿ ತರಬೇತಿಗಳು ಆರಂಭ
Free career training begins
ಗದಗ 25 : ಎಸ್.ಬಿ.ಆಯ್-ಎ,ಎಸ್,ಎಫ್‌ಆರ್‌ಸೆಟಿ ಹುಲಕೋಟಿ ಗದಗ ಗ್ರಾಮೀಣ ಸ್ವಉದ್ಯೋಗ ತರಬೇತಿ ಸಂಸ್ಥೆ ಹುಲಕೋಟಿ ಗದಗ ಸಂಸ್ಥೆಯಲ್ಲಿ ಗ್ರಾಮೀಣ ಭಾಗದ ನಿರುದ್ಯೋಗಿಯುವಕ/ಯುವತಿಯರಿಗೆ ಸುಮಾರು 20 ವರ್ಷಗಳಿಂದ ವಿವಿಧ ರೀತಿ ಸ್ವಯಂ ಉದ್ಯೋಗ ತರಬೇತಿಯನ್ನು ನೀಡುತ್ತಾ ಬಂದಿದೆ ಮತ್ತು ತರಬೇತಿ ಪಡೆದ ಅಭ್ಯರ್ಥಿಗಳಲ್ಲಿ 70ಅ ತಮ್ಮ ಉದ್ಯೋಗವನ್ನು ಕೈಗೊಂಡಿದ್ದಾರೆ.
ಅಗಸ್ಟ್ ಮತ್ತು ಸೆಪ್ಟಂಬರ್ ತಿಂಗಳಿನಲ್ಲಿ ಕುರಿ ಸಾಕಾಣಿಕೆ, ಅಣಬೆ ತಯಾರಿಕೆ, ಕಂಪ್ಯೂಟರ್ ಟ್ಯಾಲಿ, ಕಂಪ್ಯೂಟರ್ ಡಿ.ಟಿ.ಪಿ, ದ್ವಿ ಚಕ್ರ ವಾಹನ ರಿಪೇರಿ, ಪೋಟೊಗ್ರಾಪಿ ್ಘ ವಿಡಿಯೋಗ್ರಾಫಿ, ಮಹಿಳೆಯರ ಹೊಲಿಗೆ ತರಬೇತಿ. ಉಚಿತ ತರಬೇತಿಗಳು ಆರಂಭವಾಗುತ್ತವೆ.
ಆಸಕ್ತ 18-44 ರ ವಯಸ್ಸಿನೊಳಗಿನ ಗಂಡು ಅಥವಾ ಹೆಣ್ಣು ಗ್ರಾಮೀಣ ಪ್ರದೇಶದ ಬಿ.ಪಿ.ಎಲ್, ಆದ್ಯತಾ ಕುಟುಂಬ, ಪಿ,ಎಚ್,ಎಚ್, ಅಥವಾ ನರೇಗಾ ಜಾಬ್ ಕಾರ್ಡ ಹೊಂದಿರುವವರು ಈ ತರಬೇತಿಗಳನ್ನು ಪಡೆದುಕೊಳ್ಳಬಹುದು.
ತರಬೇತಿಗಳಲ್ಲಿ ಉಚಿತ ಊಟ ಮತ್ತು ವಸತಿ ಇರುತ್ತದೆ. ತರಬೇತಿ ಪಡೆದವರಿಗೆ ಕೇಂದ್ರ ಸರಕಾರದಿಂದ ಪ್ರಮಾಣ ಪತ್ರ ಮತ್ತು ಬ್ಯಾಂಕ್ ಸಾಲಕ್ಕೆ ಸಹಾಯ ಮಾಡಿಕೊಡಲಾಗುವುದು.
ಹೆಚ್ಚಿನ ಮಾಹಿತಿಗಾಗಿ ಕಛೇರಿ ವಿಳಾಸ ಎಸ್.ಬಿ.ಆಯ್-ಎ,ಎಸ್,ಎಫ್‌ಆರ್‌ಸೆಟಿ ಹುಲಕೋಟಿ ಗದಗ ಕೆ.ವಿ.ಕೆ ಆವರಣ ಹುಲಕೋಟಿ. ಜಿ.ಗದಗ. ಮೊ. 8880169996, 9632287949 ಇಲ್ಲಿ ಸಂಪರ್ಕಿಸಬಹುದಾಗಿದೆ.
ನಿಡಸೋಸಿ ರಸ್ತೆ ಅಗಲಿಕರಣ: ಸ್ಮಶಾನದ ಸಮಾಧಿಗಳ ತೆರವು ಕಾರ್ಯ ಪ್ರಾರಂಭ, ನುಡಿದಂತೆ ನಡೆದ ಜಿಲ್ಲಾಧಿಕಾರಿ ಮೊಹ್ಮದ್ ರೋಶನ್
ಮಹಾರಾಷ್ಟ್ರ ಸಚಿವನ ಟಿಪಿಯಲ್ಲಿ ಬೆಳಗಾವಿ ಎಂದು ನಮೂದು : ಎಮ್ ಇಎಸ್ ಆಕ್ಷೇಪ, ಕ್ರಮ ಖಂಡಿತ ಎಂದ ಸಾಮಂತ
ಮತ್ತೆ ಬೆಳಗಾವಿಯಲ್ಲಿ ಭಾಷಾ ಕ್ಯಾತೆ ಆರಂಭಿಸಿದ ಎಮ್ ಇಎಸ್ : 22ರಂದು ಡಾಂಬರ ಮೋರ್ಚಾ ಮಾಡತಾರಂತೆ
ಇಂದು ರಾತ್ರಿ ಬೆಳಗಾವಿಗೆ ಮಹಾರಾಷ್ಟ್ರ ಶಾಸಕ ಸಾಮಂತ ಆಗಮನ : 31ರಂದು ಎಮ್ ಇಎಸ್ ಮುಖಂಡರ ಜತೆ ಸಭೆ, ಚರ್ಚೆ
ಕಂಟ್ರಿ ಬಂದೂಕು ತಯಾರಿಸುತ್ತಿದ್ದ ಖದೀಮರ ಬಂಧನ : 9 ಪಿಸ್ತೂಲ್ ವಶ: 13 ಜನ ಬಂಧನ
ಹಳೆದಿಗ್ಗೆವಾಡಿ ಗ್ರಾಮದ ಮಹಾದೇವ ಗಂಗಾಯಿ ಅಜ್ಜ ವಿಧಿವಶ 