ಉಚಿತ ತರಬೇತಿ ಶಿಬಿರ ಆಯ್ಕೆ ಪ್ರಕ್ರಿಯೆ

ಶಿಗ್ಗಾವಿ 08: ಭಾರತ ಸೇವಾ ಸಂಸ್ಥೆ ಅಧ್ಯಕ್ಷ ಶ್ರೀಕಾಂತ ದುಂಡಿಗೌಡ್ರ ಪ್ರಾಯೋಜಕತ್ವದಲ್ಲಿ ಉಚಿತ ತರಬೇತಿ ಶಿಬಿರ ಆಯ್ಕೆ ಪ್ರಕ್ರಿಯೆ ಇಂದು ಪಟ್ಟಣದ ತಾಲೂಕಾ ಕ್ರೀಡಾಂಗಣದಲ್ಲಿ ವಿಧ್ಯಾರ್ಥಿಗಳು ಮತ್ತು ಪಾಲಕರು, ಪೋಷಕರು, ನಿರ್ಣಾಯಕರ ನೇತೃತ್ವದಲ್ಲಿ  ಈ ಆಯ್ಕೆ ಪ್ರಕ್ರಿಯೇಯಲ್ಲಿ ಒಟ್ಟು 114 ವಿಧ್ಯಾರ್ಥಿಗಳು ಹುಡುಗರು-91, ಹುಡುಗಿಯರು-23 ಭಾಗವಹಿಸಿದ್ದು ಅದರಲ್ಲಿ 30 ಹುಡುಗರು, 20 ಹುಡುಗಿಯರ ಆಯ್ಕೆಗೆ ಪ್ರಕ್ರೀಯೇ ನಡೆಯಿತು. ಈ ಎಲ್ಲ ಪ್ರಕ್ರಿಯೇಯನ್ನು ಆಯ್ಕೆ ಸಮಿತಿ ಸದಸ್ಯರು ನಿಸಕಲ್ಮಶವಾಗಿ ನೇರವೇರಿಸಿದರು. ಆಯ್ಕೆಯಾದ ಬಗ್ಗೆ ಮಂಗಳವಾರ ದಿ : 9 ರಂದು ದೂರವಾಣಿ ಮೂಲಕ ತಿಳಿಸುತ್ತೇವೆ ಎಂದು ಸಮಿತಿ ಸದಸ್ಯರು ತಿಳಿಸಿದ್ದಾರೆ.