ದಿ. 25ರಂದು ಉಚಿತ ಥೈರಾಯ್ಡ ತಪಾಸಣಾ ಶಿಬಿರ
Free Thyroid Checkup Camp on 25th
ಲೋಕದರ್ಶನ ವರದಿ
ಬೆಳಗಾವಿ 23: ವಿಶ್ವ ಥೈರಾಯ್ಡ ದಿನಾಚರಣೆ ಅಂಗವಾಗಿ ಕೆಎಲ್ಇ ಸಂಸ್ಥೆಯ ಡಾ. ಪ್ರಭಾಕರ ಕೋರೆ ಆಸ್ಪತ್ರೆ ಹಾಗೂ ವೈದ್ಯಕೀಯ ಸಂಶೋಧನಾ ಕೇಂದ್ರದ ಎಂಡೋಕ್ರಿನಾಲಜಿ ವಿಭಾಗವು ಉಚಿತ ಥೈರಾಯ್ಡ ತಪಾಸಣಾ ಶಿಬಿರವನ್ನು ದಿ. 25 ಮೇ 2026ರಂದು ಬೆಳಗ್ಗೆ 10 ರಿಂದ 1 ಗಂಟೆಯವರೆಗೆ ಆಸ್ಪತ್ರೆಯಲ್ಲಿ ಏರಿ್ಡಸಲಾಗಿದೆ. ತಿಂಗಳ ಋತುಚಕ್ರದಲ್ಲಿ ಏರುಪೇರು, ಮಕ್ಕಳಲ್ಲಿ ಬೆಳವಣಿಗೆ ಇಲ್ಲದಿರುವದು, ದೇಹ ತೂಕದಲ್ಲಿ ವಿಪರೀತ ಹೆಚ್ಚಳ, ಜೀರ್ಣಕ್ರಿಯೆಯಲ್ಲಿ ತೊಂದರೆ, ಅಶಕ್ತತೆ, ತೀವ್ರತರವಾದ ಚಳಿ, ಕೂದಲು ಉದುರುವದು ಹಾಗೂ ಅತಿಯಾದ ನಿದ್ದೆ ಸೇರಿದಂತೆ ಥೈರಾಯ್ಡಗೆ ಸಂಬಂಧಿಸಿದ ಅನೇಕ ಸಮಸ್ಯೆಗಳಿಂದ ಬಳಲುತ್ತಿರುವವರು ಈ ಶಿಬಿರದಲ್ಲಿ ಪಾಲ್ಗೊಂಡು ತಪಾಸಿಸಿಕೊಳ್ಳುವಂತೆ ಕೋರಲಾಗಿದೆ. ಡಾ. ವಿಕ್ರಾಂತ ಘಟನಟ್ಟಿ, ಡಾ. ಮಂಜುನಾಥ ಗೊರೊಶಿ ಹಾಗೂ ಡಾ. ವಾನಿಶ್ರೀ (ಎಂಡೊಕ್ರಿನಾಲಾಜಿಸ್ಟ) ಅವರು ರೋಗಿಗಳನ್ನು ಸಮಗ್ರವಾಗಿ ತಪಾಸಿಸಿ ಸೂಕ್ತ ಸಲಹೆ ನೀಡಲಿದ್ದಾರೆ. ಥೈರಾಯಿಡ (ಟಿಎಸ್ಹೆಚ್) ರಕ್ತ ತಪಾಸಣೆ ಮಾಡಲಿದ್ದಾರೆ.
ಮತ್ತೆ ಬೆಳಗಾವಿಯಲ್ಲಿ ಭಾಷಾ ಕ್ಯಾತೆ ಆರಂಭಿಸಿದ ಎಮ್ ಇಎಸ್ : 22ರಂದು ಡಾಂಬರ ಮೋರ್ಚಾ ಮಾಡತಾರಂತೆ
ಇಂದು ರಾತ್ರಿ ಬೆಳಗಾವಿಗೆ ಮಹಾರಾಷ್ಟ್ರ ಶಾಸಕ ಸಾಮಂತ ಆಗಮನ : 31ರಂದು ಎಮ್ ಇಎಸ್ ಮುಖಂಡರ ಜತೆ ಸಭೆ, ಚರ್ಚೆ
ಕಂಟ್ರಿ ಬಂದೂಕು ತಯಾರಿಸುತ್ತಿದ್ದ ಖದೀಮರ ಬಂಧನ : 9 ಪಿಸ್ತೂಲ್ ವಶ: 13 ಜನ ಬಂಧನ
ಹಳೆದಿಗ್ಗೆವಾಡಿ ಗ್ರಾಮದ ಮಹಾದೇವ ಗಂಗಾಯಿ ಅಜ್ಜ ವಿಧಿವಶ
ಆರೈಕೆಗಿದ್ದವನಿಂದ 1.02 ಕೋಟಿಯ 930 ಗ್ರಾಂ ಚಿನ್ನ ಕಳ್ಳತನ: ಇಬ್ಬರ ಬಂಧನ, 73.03 ಲಕ್ಷದ ಚಿನ್ನ ವಶಕ್ಕೆ
ಹಳೆ ವೈಷಮ್ಯ : ಬೆಳಗಾವಿಯಲ್ಲಿ ಯುವಕನ ಕೊಚ್ವಿ ಹತ್ಯೆ 