ದಾಂಡೇಲಿಯ ಕಾಳಿನದಿ ಸೇತುವೆಯಲ್ಲಿ ಕುಸಿದು ಬಿದ್ದ ಅಡಿಪಾಯದ ಕಲ್ಲುಗಳು: ಜನರ ಸಂಚಾರಕ್ಕೆ ತೊಂದರೆ
Foundation stones collapse on Dandeli's Kali Nadi bridge: Traffic disruption
ದಾಂಡೇಲಿ 27 : ದಾಂಡೇಲಿಯ ಕುಳಗಿ ರಸ್ತೆಯಲ್ಲಿರುವ ಕಾಳಿನದಿ ಸೇತುವೆಯ ರಕ್ಷಣಾ ಗೋಡೆಯ ಒಂದೊಂದೆ ಕಲ್ಲುಗಳು ಉದುರಿ ಬೀಳುತ್ತಿವೆ. ರಕ್ಷಣಾ ಗೋಡೆಯ ಅಡಿಪಾಯದ ಕಲ್ಲುಗಳನ್ನು ನದಿಯ ನೀರಿನ ರಭಸಕ್ಕೆ ಈಗಾಗಲೇ ಕಿತ್ತುಕೊಂಡು ಹೋಗಿದೆ. ಗೋಡೆ ಯಾವ ಕ್ಷಣದಲ್ಲಾದರೂ ಕುಸಿಯಬಹುದಾದ ಸ್ಥಿತಿ ಸ್ಪಷ್ಟವಾಗಿ ಕಾಣಿಸುತ್ತಿದ್ದರೂ ಸಂಬಂಧಿತ ಇಲಾಖೆಗಳು ಮಾತ್ರ ಇನ್ನೂ ಯಾವುದೇ ಕ್ರಮ ಜರುಗಿಸದಿರುವದು ಸಾರ್ವಜನಿಕರ ಅಸಮಾಧಾನಕ್ಕೆ ಕಾರಣವಾಗಿದೆ.
ಈ ಭಾಗ ಸಾಮಾನ್ಯ ಪ್ರದೇಶವಲ್ಲ. ಇಲ್ಲಿ ಪ್ರತಿದಿನ ಜನರ ಸಂಚಾರ, ಚಟುವಟಿಕೆ ಇರುತ್ತದೆ. ಕೋಗಿಲಬನ ಗ್ರಾಮದ ಮಹಿಳೆಯರು ಬಟ್ಟೆ ತೊಳೆಯಲು, ಪುರುಷರು ಸ್ನಾನಕ್ಕೆ, ಪ್ರಯಾಣಿಕರು ನದಿ ನೀರಿನ ಬಳಕೆಗಾಗಿ ಇದೇ ಭಾಗಕ್ಕೆ ಬರುತ್ತಾರೆ. ಅರಣ್ಯ ಇಲಾಖೆ ಮೊಸಳೆಗಳಿಂದ ರಕ್ಷಿಸಲು ಬೇಲಿ ನಿರ್ಮಿಸಿರುವುದೇ ಇಲ್ಲಿಯ ಜನರು ನದಿ ನೀರನ್ನು ಬಳಸುವದಕ್ಕಾಗಿ. ಇಲ್ಲಿ ಯಾವಾಗಲೂ ಜನರಿರುತ್ತಾರೆ. ಇದು ಕೇವಲ ಸೇತುವೆಯ ರಕ್ಷಣಾಗೋಡೆಯಲ್ಲ, ಜನರ ಜೀವದ ಭದ್ರತೆಯ ಪ್ರಶ್ನೆಅಡಗಿದೆ. ಈ ಅಪಾಯವನ್ನು ಅಧಿಕಾರಿಗಳು ಕಾಣುತ್ತಿಲ್ಲವೇ ? ಅಥವಾ ಕಾಣಿಸಿಕೊಂಡರೂ ನಿರ್ಲಕ್ಷ ತೋರಿಸುತ್ತಿದ್ದಾರೆಯೇ? ಕಳೆದ ಮಳೆಗಾಲದಲ್ಲಿ ಈಶ್ವರ ಗುಡಿ ಸಮೀಪದ ಮತ್ತೊಂದ ರಕ್ಷಣಾ ಗೋಡೆ ಕುಸಿದಿತ್ತು. ಆಗ ಅದೃಷ್ಟವಶಾತ್ ಜನರ ಓಡಾಟ ಕಡಿಮೆ ಇದ್ದುದ್ದರಿಂದ ಪ್ರಾಣ ಹಾನಿ ಸಂಭವಿಸಿರಲಿಲ್ಲ. ಆದರೆ ಅದೇ ಘಟನೆ ಆಡಳಿತಕ್ಕೆ ಎಚ್ಚರಿಕೆ ಗಂಟೆ ಆಗಬೇಕಿತ್ತು. ಸೇತುವೆಯ ಇತರೇ ಭಾಗಗಳು ಅಪಾಯದಲ್ಲಿರಹುದು ಎಂಬ ತಾಂತ್ರಿಕ ಪರೀಶೀಲನೆ ತಕ್ಷಣ ನಡೆಯಬೇಕಿತ್ತು. ಆದರೆ ಅದು ನಡೆದಿಲ್ಲ. ಈಗ ಮತ್ತೊಂದು ಭಾಗ ಕುಸಿಯುವ ಹಂತ ತಲುಪಿದ ನಂತರ ಮಾತ್ರ ಪರಿಸ್ಥಿತಿಯ ಗಂಭೀರತೆ ಮತ್ತೇ ಚರ್ಚೆಗೆ ಬಂದಿದೆ. ಆದ್ದರಿಂದ ಕೂಡಲೇ ಸಂಬಂಧಿತ ಜಿಲ್ಲಾಡಳಿತ ಮತ್ತು ಲೋಕೊಪಯೋಗಿ ಇಲಾಖೆ ಅಪಾಯ ಸಂಭವಿಸುವ ಪೂರ್ವದಲ್ಲೇ ಪರೀಶೀಲನೆ ನಡೆಸಿ ಅಗತ್ಯ ಕ್ರಮ ಜರುಗಿಸಬೇಕಿದೆ.
ಕೆಪಿಸಿಸಿ ಮಾಜಿ ಸದಸ್ಯ, ವೈದ್ಯ ಡಾ. ಡಿ.ಎಚ್.ಮಾಲದಾರ ವಿಧಿವಶ
ಕನ್ನಡಪರ ನಿರ್ಣಯಕ್ಕೆ ಹಿಂದೇಟು: ಮಹಾಪೌರರ ನಡೆ ಈಗ ಸಂಶಯಕ್ಕೆ ಯಡೆ
ಬೆಳಗಾವಿಯಲ್ಲಿ ಬಿಗ್ ಹಾಕಿದ ಮನೆಗಳಿಗೆ ಪೊಲೀಸ ಭದ್ರತೆ ವ್ಯವಸ್ಥೆಗೆ ಜನರ ಮೆಚ್ಚುಗೆ
ಬೆಳಗಾವಿಗೆ ಬಂದ 20 ಜನ ಬಾಂಗ್ಲಾದವರಲ್ಲ : ಬಂಗಾಳ ಮೂಲದ ಚಿನ್ನದಂಗಡಿ ಕೂಲಿ ಕಾರ್ಮಿಕರು
ಭೀಕರ ಅಪಘಾತಕ್ಕೆ ಓರ್ವ ಸಾವು : ಮೂವರಿಗೆ ಗಂಭೀರ ಗಾಯ
ಶವ ವಾಹನದಲ್ಲಿ ಹಾಳಾದ ಸ್ಟ್ರೆಚರ್ : ಶವ ಸಾಗಿಸಲು ನಾಗರಿಕರ ಪರದಾಟ : ಸ್ಟ್ರೆಚರ್ ಖರೀದಿಗೆ ಪುರಸಭೆಯಲ್ಲಿ ದುಡ್ಡು ಇಲ್ಲವಾ? 