ಗಿಡಮರಗಳನ್ನು ಕಡ್ಡಾಯವಾಗಿ ಬೆಳೆಸಲು ಮುಂದಾಗಿ: ಸಾವಿತ್ರವ್ವ
ಲೋಕದರ್ಶನವರದಿ
ಹಾವೇರಿ 06: ಪರಿಸರ ಉಳಿವಿಗಾಗಿ ಗಿಡಮರಗಳನ್ನು ಕಡ್ಡಾಯವಾಗಿ ಎಲ್ಲರೂ ಬೆಳೆಸಲು ಮುಂದಾಗಬೇಕಾಗಿದೆ ಎಂದು ಗ್ರಾ.ಪಂ ಅಧ್ಯಕ್ಷರಾದ ಸಾವಿತ್ರವ್ವ ಹಿರೇಮಠ ಹೇಳಿದರು.
ಜಿಲ್ಲೆಯ ಹಿರೇಮುಗದೂರಗ್ರಾ.ಪಂ ಹಾಗೂ ಅಮ್ಮಾ ಸಂಸ್ಥೆ(ರಿ)ಯ ವತಿಯಿಂದ ವಿಶ್ವ ಪರಿಸರ ದಿನಾಚಾರಣೆ ನಿಮಿತ್ಯ ಪಂಚಾಯತಆವರಣದಲ್ಲಿ ಗಿಡ ನೆಡುವ ಮೂಲಕ ಚಾಲನೆ ನೀಡಿ ಅವರು ಮಾತನಾಡಿದರು.
ಪರಿಸರ ಸಮತೋಲನದಿಂದ ನಾವೆಲ್ಲರೂಆರೋಗ್ಯದಿಂದಇರಲು ಸಾಧ್ಯ ಗಿಡ ಮರಗಳನ್ನು ಬೆಳಿಸಿದರೆ ವಾತಾವರಣ ಉತ್ತಮವಾಗುತ್ತದೆ.ಆಮ್ಲಜನಕ ನೀಡುವ ಮರಗಳು ನಮಗೆ ಬೆಲೆ ಬಾಳುವ ಜೀವಕ್ಕೆ ಸಹಕಾರಿಯಾಗಲಿವೆ ಎಂದರು.
ಪಿಡಿಓಯೋಗೇಶ್ವರಚಾಕರಿ ಮಾತನಾಡಿ ಪ್ರತಿ ವರ್ಷವೂ ಪರಿಸರ ದಿನ ನಾವೆಲ್ಲರೂ ಗಿಡಗಳನ್ನು ನೆಡುವ ದಿನವಾಗದೇಎಲ್ಲಿ ಸಾರ್ವಜನಿಕ ಆಸ್ತಿಗಳು ಇರುತ್ತೇವೆಅಲ್ಲಿ ಗಿಡಗಳನ್ನು ನೆಡಲಾಗುವುದು.ಮನೆಗೊಂದು ಮರ ಎಂಬ ಪರಿಸರ ಕಾಳಜಿಗೆ ನಾವೆಲ್ಲರೂ ಮುಂದಾಗಬೇಕಾಗಿದೆ.ಮಳೆ ಪ್ರಾರಂಭವಾಗುತ್ತಿದ್ದು,ಗ್ರಾ.ಪಂ ವ್ಯಾಪ್ತಿಯಲ್ಲಿ ಗಿಡಗಳನ್ನು ಹೆಚ್ಚಿನ ಪ್ರಮಾಣದಲ್ಲಿ ನೆಟ್ಟು ಅವುಗಳನ್ನು ಸಂರಕ್ಷಣಗೆಎಲ್ಲರೂ ಕೈಜೋಡಿಸಿ ಎಂದರು.
ತಾ.ಪಂ ಮಾಜಿಸದಸ್ಯರಾಜಶೇಖರ ಎಂ ಮಾತನಾಡಿಗಿಡ-ಮರಗಳನ್ನು ಬೆಳೆಸಲು ಅರಣ್ಯ ಇಲಾಖೆ ಸಕರ್ಾರ ಹೆಚ್ಚು ಅನುದಾನವನ್ನು ನೀಡಲಾಗುತ್ತಿದೆ.ಪರಿಸರ ಸಂರಕ್ಷಣೆಯ ಕೆಲಸ ಪ್ರತಿಯೊಬ್ಬರದಾಗಿದ್ದು,ಸಾರ್ವಜನಿಕ ಹಾಗೂ ನಮ್ಮ ಮನೆಗಳ ಮುಂಭಾಗಗಿಡ ನೆಡೋಣಎಂದರು.ವಿಶ್ವ ಪರಿಸರ ದಿನ ನಿಮಿತ್ಯ ಸ್ಥಳೀಯ ಅಮ್ಮಾ ಸಂಸ್ಥೆ(ರಿ)ಯವರು ಗಿಡಗಳನ್ನು ಉಚಿತವಾಗಿ ನೀಡಿದರು.ಪರಿಸರ ಸಂರಕ್ಷಣೆಗೆಅಮ್ಮಾ ಸಂಸ್ಥೆ ಸದಾ ಬದ್ಧವಾಗಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿಗ್ರಾಪಂ ಸದಸ್ಯರಾದ ನೀಲಪ್ಪದೊಡ್ಡಮನಿ ,ಈರಣ್ಣ ಸಿ.ಊರಿನ ಮುಖಂಡರಾದ ಶಿವಪುತ್ರಪ್ಪ ಹಿರೇಮಠ.ನಿಂಗಪ್ಪ ಆರೇರ, ಫಕ್ಕಿರಸ್ವಾಮಿ ಎಚ್.ಗ್ರಾಪಂ ಸಿಬ್ಬಂದಿಗಳಾದ ವೀರೇಶಕಮ್ಮಾರ.,ಅಡಿವೆಪ್ಪ ಯಲ್ಲಣ್ಣನವರ, ಪುಷ್ಪಾಎ.ಗುಡ್ಡಪ್ಪ ಎ ಇದ್ದರು.
ಹೆತ್ತ ವೃದ್ದ ತಾಯಿಯನ್ನೆ ನಿರ್ಜನ ಪ್ರದೇಶಕ್ಕೆ ರಾತ್ರಿ ಎಸೆದು ಹೋದ ಪಾಪಿ ಪುತ್ರ : ಅನ್ನ ನೀರು ಇಲ್ಲದೆ ಈಡಿ ರಾತ್ರಿ ಕಳೆದ ಹಿರಿಯ ಜೀವ
ಹಿಜಾಬ್ ವಿರುದ್ದ ಕೇಸರಿ ಶಾಲು ನೀಡಲು ಹೊರಟ ಶ್ರೀರಾಮಸೇನೆ ಕಾರ್ಯಕರ್ತರು ಪೊಲೀಸ ವಶಕ್ಕೆ
ನಿಡಸೋಸಿ ರಸ್ತೆ ಅಗಲಿಕರಣ: ಸ್ಮಶಾನದ ಸಮಾಧಿಗಳ ತೆರವು ಕಾರ್ಯ ಪ್ರಾರಂಭ, ನುಡಿದಂತೆ ನಡೆದ ಜಿಲ್ಲಾಧಿಕಾರಿ ಮೊಹ್ಮದ್ ರೋಶನ್
ಮಹಾರಾಷ್ಟ್ರ ಸಚಿವನ ಟಿಪಿಯಲ್ಲಿ ಬೆಳಗಾವಿ ಎಂದು ನಮೂದು : ಎಮ್ ಇಎಸ್ ಆಕ್ಷೇಪ, ಕ್ರಮ ಖಂಡಿತ ಎಂದ ಸಾಮಂತ
ಮತ್ತೆ ಬೆಳಗಾವಿಯಲ್ಲಿ ಭಾಷಾ ಕ್ಯಾತೆ ಆರಂಭಿಸಿದ ಎಮ್ ಇಎಸ್ : 22ರಂದು ಡಾಂಬರ ಮೋರ್ಚಾ ಮಾಡತಾರಂತೆ
ಇಂದು ರಾತ್ರಿ ಬೆಳಗಾವಿಗೆ ಮಹಾರಾಷ್ಟ್ರ ಶಾಸಕ ಸಾಮಂತ ಆಗಮನ : 31ರಂದು ಎಮ್ ಇಎಸ್ ಮುಖಂಡರ ಜತೆ ಸಭೆ, ಚರ್ಚೆ 