ಅಂಗನವಾಡಿ ಕೇಂದ್ರದ ಆಹಾರ ಅಶುಚಿತ್ವ: ಸಾರ್ವಜನಿಕರ ಆಕ್ರೋಶ

ಪಟ್ಟಣದ ಆಂಜನೇಯ ನಗರದ ಅಂಗನವಾಡಿ ಕೇಂದ್ರದಲ್ಲಿರುವ ಅಶುಚಿತ್ವಗೊಂಡ ಗೋಧಿ ರವೆ.


ರಾಮದುರ್ಗ 15: ಅಶುಚಿತ್ವಗೊಂಡ ರೇಷನ್ ಮಕ್ಕಳ ಆಹಾರಕ್ಕೆ ಬಳಕೆ ಮಾಡುತ್ತಿರುವ ಘಟನೆಯನ್ನು ಸ್ಥಳೀಯ ಸಾರ್ವಜನಿಕರು ಪ್ರಶ್ನಿಸಿದ ಘಟನೆ ಪಟ್ಟಣದ ಆಂಜನೇಯ ನಗರದಲ್ಲಿರುವ ಅಂಗನವಾಡಿಯೊಂದರಲ್ಲಿ ಗುರುವಾರ ನಡೆದಿದೆ.

ಮಕ್ಕಳ ಆಹಾರ ತಯಾರಿಕೆಗೆ ಬಳಕೆ ಮಾಡುತ್ತಿರುವ ಗೋಧಿಯ ರವೆ ಸಂಪೂರ್ಣ ಹುಳು ಹತ್ತುವ ಹಂತ ತಲುಪಿದರೂ ಅಲ್ಲಿನ ಅಂಗನವಾಡಿ ಕಾರ್ಯಕತರ್ೆ ಹಾಗೂ ಸಹಾಯಕಿ ಗಮನ ಹರಿಸದೇ ಅದನ್ನೆ ಬಳಕೆ ಮಾಡುತ್ತಿದ್ದರು ಎಂದು ಸ್ಥಳೀಯರು ಆರೋಪಿಸಿದ್ದಾರೆ.

ಈ ಹಿಂದೆ ತಾಲೂಕಿನ ಮುಳ್ಳೂರ ಅಂಗನವಾಡಿ ಕೇಂದ್ರದಲ್ಲಿಯೂ ಸಹ ಅಂಗನವಾಡಿ ಅಶುಚಿತ್ವದ ಆಹಾರ ಸಂಗ್ರಹ ಹಾಗೂ ವಿತರಣೆ ಮಾಡಲಾಗುತ್ತಿದೆ ಎಂದು ಸಾರ್ವಜನಿಕ ಆರೋಪಿಸಿ ಪ್ರತಿಭಟಿಸಿದ್ದರು. ಮಕ್ಕಳಿಗೆ ನೀಡುತ್ತಿರುವ ಆಹಾರ ಪದಾರ್ಥಗಳಲ್ಲಿ ಹುಳುಗಳು ಕಂಡುಬಂದ ಘಟನೆ ಇನ್ನು ಮಾಸದೇ ಇರುವಾಗ ಇಂಥದೊಂದು ಘಟನೆ ಮರುಕಳಿಸಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.

ವಿಷಯ ತಿಳಿಯುತ್ತಿದ್ದಂತೆ ಇಲಾಖೆಯ ಅಧಿಕಾರಿಗಳು ಹುಳು ಬೀಳುತ್ತಿರುವ ರೇಷನ್  ಬದಲಾವಣೆ ಮಾಡಿ, ಮತ್ತೆ ಹೊಸದಾಗಿ ಸಂಸ್ಕೃರಿಸಿದ ಆಹಾರ ಪದಾರ್ಥಗಳನ್ನು ಅಂಗನವಾಡಿ ಕೇಂದ್ರಕ್ಕೆ ಕಳುಹಿಸುವ ವ್ಯವಸ್ಥೆ ಕಲ್ಪಿಸಿದ್ದು ಮತ್ತಷ್ಟು ಅಪಹಾಸ್ಯಕ್ಕೆ ಕಾರಣವಾಗಿದೆ.

ಚಿಕ್ಕ ವಿಷಯವೆಂದ ಅಧಿಕಾರಿಃ

ಅಂಗನವಾಡಿ ಕೇಂದ್ರದ ಮಕ್ಕಳಿಗೆ ಬಳಕೆ ಮಾಡುತ್ತಿರುವ ಅಹಾರ ಹುಳು ಬಿದ್ದಿದೆ. ಹೀಗಾದರೆ ಚಿಕ್ಕ ಮಕ್ಕಳ ಗತಿ ಏನೆಂದು ಮಾಧ್ಯಮದವರು ಪ್ರಶ್ನಿಸಿದಾಗ ಸ್ಥಳೀಯ ಪ್ರಭಾರಿ ಶಿಶು ಅಭಿವೃದ್ಧಿ ಅಧಿಕಾರಿ ಖಾದರಬಿ ಲಕ್ಷ್ಮೇಶ್ವರ ಇದೊಂದು ಚಿಕ್ಕ ವಿಷಯವೆಂದು ಜಾರಿಕೊಳ್ಳುವ ಮೂಲಕ ಗಂಭೀರವಾಗಿ ಪರಿಗಣಿಸಿದೇ ಜಾರಿಕೊಂಡರು.

ಹೀಗಾದರೆ ಬಡ ಚಿಕ್ಕ ಮಕ್ಕಳ ಗತಿ ಹೇಗೆ?

ತಾಲೂಕಿನಲ್ಲಿ ಕೆಲವಡೆ ಆಹಾರವನ್ನು ಸರಿಯಾಗಿ ಸ್ವಚ್ಛಗೊಳಿಸಿ ಮಕ್ಕಳ ಆಹಾರ ಪದಾರ್ಥಕ್ಕೆ ಬಳಕೆ ಮಾಡುತ್ತಿಲ್ಲ ಎಂಬ ಆರೋಪಗಳು ಕೇಳಿ ಬರುತ್ತಿವೆ. ಹೆಚ್ಚು ಸಂಗ್ರಹ ಮಾಡಿಕೊಳ್ಳದೆ ಬೇಕಾದಷ್ಟು ಬಳಕೆ ಮಾಡಿ, ಉಳಿಕೆಯಾಗದಂತೆ ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳು ಗಮನ ಹರಿಸದೇ ಇರುವುದರಿಂದ ಅನೇಕ ಅನಾಹುತಗಳು ಸಂಭಸುವ ಮುನ್ಸೂಚನೆಗಳು ವ್ಯಕ್ತವಾಗಿವೆ. ಹೀಗಾದರೆ ಬಡ ಚಿಕ್ಕ ಮಕ್ಕಳ ಗತಿ ಏನು ಎಂಬುವುದು ಯಕ್ಷ ಪ್ರಶ್ನೆಯಾಗಿದೆ.

ಕೋಟ್-1

ಪದೇ ಪದೇ ಉಳಿಕೆ ಮಾಡಿಕೊಂಡ ಆಹಾರ ಪದಾರ್ಥಗಳನ್ನು ಬಳಕೆ ಮಾಡದಂತೆ ಸೂಚನೆ ನೀಡಿದರೂ ಮೊದಲಿನ ಆಹಾರ ಪದಾರ್ಥ ಬಳಕೆ ಮಾಡಿದಲ್ಲಿ ಘಟನೆ ಸಂಭವಿಸಿರಬಹುದು. ಇಲಾಖೆಯ ತಾಲೂಕಾ ಅಧಿಕಾರಿಗಳಿಗೆ ಸೂಚನೆ ನೀಡಿ, ಪರಿಶೀಲನೆ ಮಾಡುವಂತೆ ಸೂಚನೆ ನೀಡಿ, ಮುಂದೆ ಹೀಗಾಗದಂತೆ ನೋಡಿಕೊಳ್ಳಲು ಸೂಚಿಸುತ್ತೇನೆ.

ಮಲ್ಲಿಕಾಜರ್ುನ ಮಾಳಗೇರ. 

            ಶಿಶು ಅಭಿವೃದ್ಧಿ ಇಲಾಖೆಯ ಜಿಲ್ಲಾ ನಿದರ್ೇಶಕ.