ಜನಪದ ಗೀತೆ ಗಾಯನ ಕಾರ್ಯಕ್ರಮ
Folk song singing programme
ಬಳ್ಳಾರಿ. ಸೆ. 06 : ರಾಯಪುರ ಬಳಗುಡ್ಡ ಗ್ರಾಮದಲ್ಲಿ ಶ್ರೀ ತೋಟಪ್ಪ ತಾತನವರ ಜಾತ್ರೆ ಅಂಗವಾಗಿ ಜನಪದ ಗೀತೆ ಗಾಯನ ವಾಲ್ಮೀಕಿ ತಾಲ್ಲೂಕಿನ ಗಡಿಭಾಗದ ರಾಯಪುರ ಬಳಗುಡ್ಡ ಗ್ರಾಮದಲ್ಲಿ ನಿನ್ನೆ ಶನಿವಾರ ಜರುಗಿದ ಶ್ರೀ ತೋಟಪ್ಪ ತಾತನವರ ಜಾತ್ರೆಯ ಅಂಗವಾಗಿ ಶ್ರೀ ವೀರಭದ್ರೇಶ್ವರ ಬೈಲಾಟ ಕಲಾವಿದರ ಸಂಘ ಹಾಗೂ ಬಳ್ಳಾರಿ ಜಿಲ್ಲೆಯ ಮೋಕಾ ಗೋನಾಳ್ ಅವರ ವತಿಯಿಂದ, ಕಲಾವಿದ ನಾಗನಗೌಡ ಅವರ ನೇತೃತ್ವದಲ್ಲಿ ಜನಪದ ಗೀತೆ ಗಾಯನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು.
ಕಾರ್ಯಕ್ರಮದಲ್ಲಿ ಮಾತನಾಡಿದ ಗ್ರಾಮದ ಹಿರಿಯ ಮುಖಂಡರಾದ ವೀರಭದ್ರಯ್ಯ ಸ್ವಾಮಿ ಮಠದ ಪೀಠಾಧಿಪತಿಗಳು, “ಎಲ್ಲ ಸಂಗೀತಕ್ಕೂ ತಾಯಿ ಬೇರು ಜನಪದ ಸಂಗೀತ. ಸಂಗೀತ ಎಲ್ಲರನ್ನೂ ಮಂತ್ರಮುಗ್ಧರನ್ನಾಗಿಸುತ್ತದೆ. ಸಂಗೀತ ಆಲಿಸುವುದರಿಂದ ಮಾನಸಿಕ ಒತ್ತಡವನ್ನು ಕಡಿಮೆ ಮಾಡಿಕೊಳ್ಳಬಹುದು,” ಎಂದು ಹೇಳಿದರು. ಗ್ರಾಮದ ಹಿರಿಯರಾದ ಕೃಷ್ಣಪ್ಪ ಅವರ ಆಶೀರ್ವಾದದೊಂದಿಗೆ ಕಾರ್ಯಕ್ರಮವು ಯಶಸ್ವಿಯಾಗಿ ನಡೆಯಿತು.
ಈ ಸಂದರ್ಭದಲ್ಲಿ ಗಾಯಕರಾದ ಹುಲುಗಪ್ಪ, ಹನುಮಯ್ಯ ಹಾಗೂ ಸಂಗಡಿಗರು ಜನಪದ ಗೀತೆಗಳನ್ನು ಗಾಯನ ಮಾಡಿದರು. ಇವರಿಗೆ ಹಾರ್ಮೋನಿಯಂನಲ್ಲಿ ಮುದ್ದಟನೂರು ತಿಪ್ಪೇಸ್ವಾಮಿ, ಕಾಶಿಯಪ್ಪ, ವೀರಭದ್ರಸ್ವಾಮಿ ಹಾಗೂ ತಬಲಾದಲ್ಲಿ ಖಾಸಿಂ ಸೇರಿದಂತೆ ಇತರ ಕಲಾವಿದರು ಸಾಥ್ ನೀಡಿದರು. ಕಾರ್ಯಕ್ರಮದಲ್ಲಿ ಗ್ರಾಮದ ಮುಖಂಡರಾದ ಗಂಗಾಧರ್ಪ, ಜ್ಞಾನಮೂರ್ತಿ ಸ್ವಾಮಿ ಸೇರಿದಂತೆ ಹಲವಾರು ಸಂಗೀತಾಸಕ್ತರು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 