ಹುನಗುಂದ ಗ್ರಾಮದ ವಿರಕ್ತಮಠದ ಸಭಾಂಗಣದಲ್ಲಿ ಜಾನಪದ ಸಾಂಸ್ಕೃತಿಕ ಕಾರ್ಯಕ್ರಮ
ಮುಂಡಗೋಡ 04: ತಾಲೂಕಿನ ಹುನಗುಂದ ಗ್ರಾಮದ ವಿರಕ್ತಮಠದ ಸಭಾಂಗಣದಲ್ಲಿ ಶ್ರೀ ಸರಸ್ವತಿ ಜಾನಪದ ಕಲಾ ಮಹಿಳಾ ಸಂಘ ಹಾಗೂ ಶ್ರೀ ಗ್ರಾಮದೇವಿ ಕಲಾ ಸಾಂಸ್ಕೃತಿಕ ಸಂಘದ ಉದ್ಘಾಟನೆ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮವನ್ನು ಶಾಸಕ ಶಿವರಾಮ ಹೆಬ್ಬಾರ್ ಅವರು ಉದ್ಘಾಟನಾ ಹಾಗೂ ಸಂಘದ ಸಾಂಸ್ಕೃತಿಕ ಕಾರ್ಯಕ್ರಮವನ್ನು ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿ ಮಾತನಾಡಿದರು.ವಿರಕ್ತಮಠ ಮ.ನಿ.ಪ್ರ ಅಭಿನವ ಸಿದ್ದಲಿಂಗ ಮಹಾ ಸ್ವಾಮೀಜಿಗಳು ವಿರಕ್ತಮಠ ಹುನಗುಂದ ಆಶೀರ್ವಚನ ನೀಡಿ ನಮ್ಮ ಆರೋಗ್ಯದ ಸ್ವಾಸ್ಥ್ಯ ಇಟ್ಟುಕೊಂಡರೆ ಮಾತ್ರ ನಾವು ಸಮಾಜ ಮುಖಿ ಕಾರ್ಯಗಳನ್ನು ಮಾಡಲು ಸಾಧ್ಯ ಎಂದರು. ಈ ಕಾರ್ಯಕ್ರಮದಲ್ಲಿ ಶ್ರೀ ಮಾತೆ ಬಸವೇಶ್ವರಿ ಬಸವಧಾಮ ಅತ್ತಿವೇರಿ ಸಾನಿಧ್ಯ ವಹಿಸಿದ್ದರು.
ಈ ಸಂದರ್ಭದಲ್ಲಿ ಹುನಗುಂದ ವ್ಯವಸಾಯ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಎಚ್. ಎಂ. ನಾಯ್ಕ, ಸಿದ್ದಪ್ಪ ಹಡಪದ, ಪಿ.ಎಲ್.ಡಿ ಬ್ಯಾಂಕ್ ನ ಮಾಜಿ ಅಧ್ಯಕ್ಷ ಕೆ.ಸಿ.ಗಲಭಿ, ಮು ಖಂಡ ಚಿದಾನಂದ ಹರಿಜನ, ಸೇರಿದಂತೆ ಮಹಿಳಾ ಸಂಘದ ಪದಾಧಿಕಾರಿಗಳು, ಗ್ರಾಮದ ಹಿರಿಯರು ಹಾಗೂ ಉಪಸ್ಥಿತರಿದ್ದರು.