ಜಾನಪದ ಕಲೆ ಗ್ರಾಮೀಣ ಭಾಗದ ಜನರ ಜೀವನಾಡಿ
Folk art is the lifeblood of rural people
ಹೂವಿನಹಡಗಲಿ 06: ಜಾನಪದ ಕಲೆ ನಮ್ಮ ನಾಡಿನ ಗ್ರಾಮೀಣ ಭಾಗದ ಜನರ ಜೀವನಾಡಿ ಎಂದು ವಿಕೆಕೆ ಕಾಲೇಜಿನ ಪ್ರಾಚಾರ್ಯರಾದ ಮೈಲಾರ ರೇವಣಸಿದ್ದಪ್ಪ ಮಾಗಳ ಅಭಿಪ್ರಾಯ ಪಟ್ಟರು.
ತಾಲೂಕಿನ ಹಿರೇಹಡಗಲಿ ವಿಕೆಕೆ ಶಾಲೆಯಲ್ಲಿ ಕರ್ನಾಟಕ ಜಾನಪದ ಪರಿಷತ್ತು ವಿಜಯನಗರ ಜಿಲ್ಲೆ ಹಾಗೂ ಚಂದ್ರಶೇಖರ ಕಲಾಬಳಗ ಅಂಗೂರ್ ಇವರ ಸಹಯೋಗದೊಂದಿಗೆ ಆಯೋಜಿಸಿದ ಜಾನಪದ ಸಂಭ್ರಮ ಹಾಗೂ ಜಾನಪದ ಕಲೆಗಳ ವಿಚಾರ ಸಂಕಿರಣ ಕಾರ್ಯಕ್ರಮದಲ್ಲಿ ಮಾತನಾಡಿದರು. ಉದ್ಘಾಟನೆಯನ್ನು ಸದ್ಗುರು ಅಭಿಷೇಕ ಹಾಲಸ್ವಾಮಿಗಳು ನೆರವೇರಿಸಿದರು ಪ್ರಾಸ್ತಾವಿಕವಾಗಿ ಕರ್ನಾಟಕ ಜಾನಪದ ಪರಿಷತ್ತಿನ ಜಿಲ್ಲಾಧ್ಯಕ್ಷ ಕೆ ಸಿ ಪರಶುರಾಮ್ ಅಂಗೂರ್ ಮಾತನಾಡಿದರು. ಅದ್ಯಕ್ಷತೆ ಹಿರಿಯ ಸಂಗೀತ ಶಿಕ್ಷಕ ಎ ಉಮಾಪತಿ ವಹಿಸಿದ್ದರು.
ಜಾನಪದ ಕಲೆಗಳ ವಿಚಾರ ಸಂಕಿರಣದಲ್ಲಿ ಆಧುನಿಕ ಯುಗದಲ್ಲಿ ಜಾನಪದ ಸಾಹಿತ್ಯ ಎಂಬ ವಿಷಯ ಕುರಿತು ಉಪನ್ಯಾಸವನ್ನು ಶಿಕ್ಷಕ ಸಿಎನ್ ಸೋಮೇಶಪ್ಪ ನಡೆಸಿಕೊಟ್ಟರು. ಹಂತಿ ಪದಗಳು ಬಿ ಬಾಸು ಸಾಹೇಬ್ ಜಾನಪದ ಗೀತೆಗಳು ಕೆ ಅಶೋಕ್ ಕಟ್ಟಿಮನಿ ಗಂಗಪ್ಪ ಕುಮಾರಿ ಚಂದ್ರಮ್ಮ ನಡೆಸಿಕೊಟ್ಟರು ಆರಂಭದಲ್ಲಿ ಶಿಕ್ಷಕ ಕರಿಯಪ್ಪ ಸ್ವಾಗತಿಸಿ ನಿರೂಪಿಸಿದರು ಕೊನೆಯಲ್ಲಿ ಗೀತಾ ವಂದಿಸಿದರು
ಗಾಂಜಾ ಮಾರಾಟಗಾರರ ಮೇಲೆ ದಾಳಿ; 9,21 ಲಕ್ಷದ ವಸ್ತುಗಳ ವಶ, ಐವರ ಬಂಧನ
ಹೆತ್ತ ವೃದ್ದ ತಾಯಿಯನ್ನೆ ನಿರ್ಜನ ಪ್ರದೇಶಕ್ಕೆ ರಾತ್ರಿ ಎಸೆದು ಹೋದ ಪಾಪಿ ಪುತ್ರ : ಅನ್ನ ನೀರು ಇಲ್ಲದೆ ಈಡಿ ರಾತ್ರಿ ಕಳೆದ ಹಿರಿಯ ಜೀವ
ಹಿಜಾಬ್ ವಿರುದ್ದ ಕೇಸರಿ ಶಾಲು ನೀಡಲು ಹೊರಟ ಶ್ರೀರಾಮಸೇನೆ ಕಾರ್ಯಕರ್ತರು ಪೊಲೀಸ ವಶಕ್ಕೆ
ನಿಡಸೋಸಿ ರಸ್ತೆ ಅಗಲಿಕರಣ: ಸ್ಮಶಾನದ ಸಮಾಧಿಗಳ ತೆರವು ಕಾರ್ಯ ಪ್ರಾರಂಭ, ನುಡಿದಂತೆ ನಡೆದ ಜಿಲ್ಲಾಧಿಕಾರಿ ಮೊಹ್ಮದ್ ರೋಶನ್
ಮಹಾರಾಷ್ಟ್ರ ಸಚಿವನ ಟಿಪಿಯಲ್ಲಿ ಬೆಳಗಾವಿ ಎಂದು ನಮೂದು : ಎಮ್ ಇಎಸ್ ಆಕ್ಷೇಪ, ಕ್ರಮ ಖಂಡಿತ ಎಂದ ಸಾಮಂತ
ಮತ್ತೆ ಬೆಳಗಾವಿಯಲ್ಲಿ ಭಾಷಾ ಕ್ಯಾತೆ ಆರಂಭಿಸಿದ ಎಮ್ ಇಎಸ್ : 22ರಂದು ಡಾಂಬರ ಮೋರ್ಚಾ ಮಾಡತಾರಂತೆ 