ರೋಮ್, ನ 15 : 50 ವರ್ಷಗಳಲ್ಲೇ ವೆನಿಸ್ ನಗರದಲ್ಲಿ ಉಂಟಾದ ಭೀಕರ ಪ್ರವಾಹದ ಹಿನ್ನೆಲೆಯಲ್ಲಿ ಇಟಲಿ ಸರ್ಕಾರ ನಗರದಲ್ಲಿ ತುರ್ತು ಪರಿಸ್ಥಿತಿಯನ್ನು ಘೋಷಿಸಿದೆ. ಪ್ರವಾಹ ಪರಿಹಾರ ಹಾಗೂ ದುರಸ್ತಿ ಕಾರ್ಯಗಳಿಗೆ 20 ದಶಲಕ್ಷ ಯೂರೋಗಳ ತುರ್ತು ನಿಧಿಯನ್ನು ಕ್ಯಾಬಿನೆಟ್ ಅನುಮೋದಿಸಿದೆ. ಇದನ್ನು ನಗರದ ಕಾಮಗಾರಿಗಳು ಮತ್ತು ಜನರ ಪರಿಹಾರ ಕಾರ್ಯಗಳಿಗೆ ಬಳಸಲಾಗುತ್ತದೆ. ಹಾನಿಗೊಳಗಾದ ಮನೆಗಳ ಮಾಲೀಕರಿಗೆ ತಕ್ಷಣ 5,000 ಯುರೋಗಳನ್ನು ನೀಡಲಾಗುವುದು ಎಂದು ಪ್ರಧಾನಿ ಗೈಸೆಪೆ ಕಾಂಟೆ ಗುರುವಾರ ಹೇಳಿದ್ದಾರೆ. ನಗರದಲ್ಲಿ ಗುರುವಾರ ಮುಂಜಾನೆ ನೀರಿನ ಮಟ್ಟ ಗರಿಷ್ಠ 3 ಅಡಿ, 8 ಇಂಚುಗಳಷ್ಟು ತಲುಪಿದೆ. ಭಾರಿ ಮಳೆಯಿಂದ ನಗರಕ್ಕೆ ಮತ್ತಷ್ಟು ಪ್ರವಾಹದ ಭೀತಿ ಇದೆ ಎಂದು ನ್ಯಾಷನಲ್ ಪಬ್ಲಿಕ್ ರೇಡಿಯೋ ಅಧಿಕಾರಿಗಳು ಉಲ್ಲೇಖಿಸಿದ್ದಾರೆ. ಯುನೆಸ್ಕೋ ಪಟ್ಟಿಯಲ್ಲಿರುವ ನಗರದಲ್ಲಿ ಮೊಣಕಾಲು ಉದ್ದದ ನೀರಿನ ನಡುವೆಯೇ ವಾಣಿಜ್ಯ ಚಟುವಟಿಕೆಗಳು ನಡೆಯುತ್ತಿವೆ. ಹೆಚ್ಚುತ್ತಿರುವ ನೀರು ಸೆಂಟ್ ಮಾಕ್ರ್ಸ ಬೆಸಿಲಿಕಾ ಕ್ರಿಪ್ಟ್ ಮತ್ತು ಅಕ್ವಾ ಆಲ್ಟಾ ಗ್ರಂಥಾಲಯಕ್ಕೂ ನುಗ್ಗಿದೆ. ವಿಚಿತ್ರವೆಂದರೆ,ಸಾಂದರ್ಭಿಕ ಉಬ್ಬರವಿಳಿತದ ಪ್ರವಾಹಕ್ಕೆ ಇಟಾಲಿಯನ್ ಪದದ ಹೆಸರನ್ನು ನಗರಕ್ಕೆ ಇಡಲಾಗಿದೆ. ನಗರವನ್ನು ಸ್ವಚ್ಛಗೊಳಿಸಲು 140 ಕಾರ್ಮಿಕರು ಮತ್ತು 40 ದೋಣಿಗಳನ್ನು ಸೇವೆಗೆ ನಿಯೋಜಿಸಲಾಗಿದೆ.