ಹೆಲ್ಮೆಟ್ ಇಲ್ಲದೆ ವಾಹನ ಸವಾರಿ ಮಾಡಿದವರಿಗೆ ದಂಡ

ಹೆಲ್ಮೆಟ್ ಇಲ್ಲದೆ ವಾಹನ ಸವಾರಿ ಮಾಡಿದವರಿಗೆ ದಂಡ  Fines for riding without a helmet

ಶಿರಹಟ್ಟಿ  26: ವಾಹನ ಸವರಾರು ತಪ್ಪದೆ ಸಂಚಾರಿ ನಿಯಮಗಳನ್ನು ಪಾಲಿಸಬೇಕು ಇದರಿಂದ ಅಪಘಾತಗಳ ಸಂಖ್ಯೆ, ಟ್ರಾಫೀಕ್ ಸಮಸ್ಯೆ ಕಡಿಮೆಯಾಗುತ್ತದೆ ಎಂದು ಪಿಎಸ್‌ಐ ಈರ​‍್ಪ ರಿತ್ತಿ ಹೇಳಿದರು. ಅವರು ಮಂಗಳವಾರ ಪಟ್ಟಣದ ಬಸವೇಶ್ವರ ವೃತ್ತದ ಬಳಿ ಸಂಚಾರಿ ನಿಯಮಗಳನ್ನು ಪಾಲಿಸದೇ ಬರುತ್ತಿದ್ದ ವಾಹನ ಸವಾರರನ್ನು ದಂಡ ವಿಧಿಸುತ್ತಿದ್ದರು. ಕೇವಲ ನಾವು (ಪೊಲೀಸರು) ದಂಡ ವಿಧಿಸುವುದರಿಂದ ಅಪಘಾತಗಳು ನಿಲ್ಲುವುದಿಲ್ಲ, ಪ್ರತಿಯೊಬ್ಬ ವಾಹನ ಸವಾರರು ಸ್ವಯಂಪ್ರೇರಿತರಾಗಿ ಸಂಚಾರ ನಿಯಮಗಳನ್ನು ಪಾಲಿಸಿದಾಗ ಮಾತ್ರ ಅಪಘಾತಗಳಿಗೆ ಕಡಿವಾಣ ಹಾಕಲು ಸಾಧ್ಯವಾಗುವುದು ಎಂದರು. ನಂತರ ದ್ವಿಚಕ್ರ ವಾಹನ ಸವಾರರು ಕಡ್ಡಯಾವಾಗಿ ಹೆಲೈಟ್ ಧರಿಸುವಂತೆ ಪೊಲೀಸ್ ಇಲಾಖೆಯಿಂದ ಸಾಕಷ್ಟು ಜಾಗೃತಿ ಮೂಡಿಸಲಾಗುತ್ತಿದೆ. ಆದರೆ ಸಾಕಷ್ಟು ಸವಾರರು ಮಾತ್ರ ಹೆಲೈಟ್ ಧರಿಸದೆ ವಾಹನ ಸವಾರಿ ಮಾಡುತ್ತಿರುವುದನ್ನು ಕಂಡು ನಾವು ಇಂದು ದಂಡ ವಿಧಿಸುತ್ತಿದ್ದೇವೆ ಎಂದರು.