ಸರ್ಕಾರದ ಹುದ್ದೆಗಳನ್ನು ಭರ್ತಿ ಮಾಡಿ ;ಇಲ್ಲವೇ ಹೋರಾಟ ಖಚಿತ
Fill government posts; otherwise, struggle is certain
ಲೋಕದರ್ಶನ ವರದಿ
ರಬಕವಿ-ಬನಹಟ್ಟಿ 13 : ತಾಲೂಕು ತಹಶೀಲ್ದಾರ ಕಚೇರಿ ಮುಂಭಾಗದಲ್ಲಿ ಯುವ ಅಧಿವೇಶನ ಜರುಗಿತು. ನೇಕಾರ ಸೇವಾ ಸಂಘ ರಾಜ್ಯಾಧ್ಯಕ್ಷ ಶಿವಲಿಂಗ ಟಿರಕಿ ಮಾತನಾಡಿ, ಇಂದಿನ ಬಡಕುಟುಂಬದ ಯುವಕರು ರಾಜಕಾರಣಿಗಳಿಗೆ ಬಲಿಪಶುವಾಗುತ್ತಿದ್ದಾರೆ. ಸರ್ಕಾರಿ ನೌಕರಿಗೆ ವಯಸ್ಸಿನ ಮಿತಿಯಿದೆ. ಆದರೆ ನೇಕಾರರು 70-80 ವಯಸ್ಸಾದರೂ ದುಡಿಯದೇ ಹೊಟ್ಟೆ ತುಂಬುವುದಿಲ್ಲ. ಆದರೆ ಪ್ರಜೆಗಳಿಂದ ಆಯ್ಕೆಯಾಗುವ ಶಾಸಕರೇಇಂದು ಬಂಡವಾಳಶಾಹಿ ಆಗುತ್ತಿದ್ದು, ಈ ಸಂಸ್ಕೃಇಗೆಅಂತ್ಯ ಹಾಡಿ ಮುಂಬರುವ ದಿನಗಳಲ್ಲಿ 224 ಶಾಸಕರುಯುವಕರೇಆಗಿರಬೇಕುಎಂದು ಒತ್ತಾಯಿಸಿದರು.
ಎಎಪಿ ಮುಖಂಡ, ನ್ಯಾಯವಾದಿ ಅರ್ಜುನ ಹಲಗಿಗೌಡರ ಮಾತನಾಡಿ, ಇಂದಿನ ಎಲ್ಲಾ ರಾಜಕಾರಣಿಗಳು ಶಿಕ್ಷಣ ಸಂಸ್ಥೆಗಳನ್ನು ಕಟ್ಟಿಕೊಂಡು ಸರ್ಕಾರಿ ಶಾಲೆಗಳು ಮುಚ್ಚಲು ಕಾರಣರಾಗಿದ್ದಾರೆ. ರಾಜ್ಯದಲ್ಲಿ ನಾಲ್ಕು ಸಾವಿರ ಸೇರಿದೇಶದಲ್ಲಿ ಒಂಬತ್ತು ಸಾವಿರ ಸರ್ಕಾರಿ ಶಾಲೆಗಳನ್ನು ಬಂದ್ ಮಾಡಲಾಗಿದೆ. ಜನರಿಗೆ ಸಾರಾಯಿ ಕುಡಿಸಿ ಸರ್ಕಾರತೆರಿಗೆ ತುಂಬಿಕೊಳ್ಳುತ್ತಿದೆ. ಯುವಕರಿಗೆ ನೌಕರಿ ಸಿಗುವ ಭರವಸೆ ಹೋಗಿಬಿಟ್ಟಿದೆ. ಶಿಕ್ಷಣದ ಮೂಲಭೂತ ಹಕ್ಕನ್ನು ರಕ್ಷಿಸಬೇಕಾದ ಅವಶ್ಯಕತೆಯಿದೆ. ಯುವಕರಿಗೆ ನೌಕರಿ ಕೊಡದೇ ಇದ್ದರೆ ಗ್ರಾಮೀಣ ಮಟ್ಟದಲ್ಲೂ ಹೋರಾಟ ಮಾಡುವ ಎಚ್ಚರಿಕೆಯನ್ನು ನೀಡಿದರು.
ರೈತ ಮುಖಂಡ ಗಂಗಾಧರ ಮೇಟಿ ಮಾತನಾಡಿ, ರಾಜ್ಯದಲ್ಲಿ 84 ಲಕ್ಷಕ್ಕೂ ಹೆಚ್ಚು ಹುದ್ದೆಗಳು ಖಾಲಿಯಿದ್ದು, ಹುದ್ದೆಗಳನ್ನು ತುಂಬಿಕೊಳ್ಳಬೇಕು. ಶಿಕ್ಷಣಕ್ಕೆ ಕೀಲಿ ಹಾಕುವ ಸ್ಥಿತಿಯನ್ನು ಖಂಡಿಸುತ್ತೇವೆ. ಒಬ್ಬ ಆಯುಕ್ತರು ಸಕ್ಕರೆ ಇಲಾಖೆ ಮತ್ತು ಕಾರ್ಮಿಕ ಇಲಾಖೆ ನೋಡಿಕೊಳ್ಳುತ್ತಿದ್ದು, ಅಧಿಕಾರಿಗಳ ಕೆಲಸದ ಒತ್ತಡದಿಂದ ಕಾರ್ಮಿಕರಿಗೆ ಸರಿಯಾದ ಸೌಲಭ್ಯ ಸಿಗುತ್ತಿಲ್ಲ. ಎಐ ಕಡೆ ಹೆಜ್ಜೆಹಾಕುತ್ತಿರುವ ಇಂದಿನ ಸರ್ಕಾರವು ಮತ್ತಷ್ಟು ನಿರುದ್ಯೋಗವನ್ನು ಸೃಷ್ಟಿಸುತ್ತದೆ. ಪಾನಶಾಪ ಅಂಗಡಿಗಳಿಗೂ ಜಿಎಸ್‌ಟಿ ಹೊರೆಯಿದೆ. ಇಂದಿನ ಬಜೆಟ್‌ಗಳು ಸಾಲದಿಂದಆಗುತ್ತಿವೆ. ಆದರೆ ನಮ್ಮತೆರಿಗೆ ಹಣಎಲ್ಲಿ ಹೋಯಿತು. ಕಾರಣ ಇಡೀ ವ್ಯವಸ್ಥೆಯ ಬದಲಾವಣೆಅವಶ್ಯಕತೆಇದೆಎಂದರು.
ಮಹಾನಿಂಗ ಮಾಯನ್ನವರ, ಪ್ರವೀಣ ಹೆಗ್ಗಳಗಿ, ಶಿಕ್ಷಕ ಶ್ರೀಶೈಲ, ಸೀತಾರಾಂ ಮಾದರ ಸೇರಿದಂತೆ ಅನೇಕರು ಮಾತನಾಡಿದರು. ಸಭಾಧ್ಯಕ್ಷರಾಗಿ ಮಾಳು ಹಿಪ್ಪರಗಿಕಾರ್ಯನಿರ್ವಹಿಸಿದರು. ಇದೆ ಸಂದರ್ಭದಲ್ಲಿ ಸಿಎಂ ಅವರಿಗೆ ಬರೆಯಲಾದ ಮನವಿಯನ್ನು ತಹಶೀಲ್ದಾರ ಮೂಲಕ ಸಲ್ಲಿಸಲಾಯಿತು. ಸಭೆಯಲ್ಲಿ ನ್ಯಾಯವಾದಿಗಳು, ನೇಕಾರ, ರೈತ, ಕೆಆರ್‌ಎಸ್ ಸೇರಿ ವಿವಿಧ ಸಂಘಟನೆಗಳ ಪದಾಧಿಕಾರಿಗಳು ಭಾಗಿಯಾಗಿದ್ದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 