ಪರಿಷ್ಕೃತ ಜಾಗತಿಕ ಬಾಸ್ಕೆಟ್ ಬಾಲ್ ವೇಳಾಪಟ್ಟಿ ಘೋಷಿಸಿದ ಫಿಬಾ
ಮೈಸ್ (ಸ್ವಿಜರ್ಲೆಂಡ್), ಏ 10,ಕೋವಿಡ್ -19 ರೋಗ ತೀವ್ರಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ವಿಶ್ವ ಬಾಸ್ಕೆಟ್ ಬಾಲ್ ಆಡಳಿತ ಮಂಡಳಿ (ಎಫ್ ಬಿಎ) ತನ್ನ ಜಾಗತಿಕ ಬಾಸ್ಕೆಟ್ ಬಾಲ್ ವೇಳಾಪಟ್ಟಿಯ ನವೀಕರಿಸಿದ ಆವೃತ್ತಿಯನ್ನು ಶುಕ್ರವಾರ ಪ್ರಕಟಿಸಿದೆ.2020ರ ಟೋಕಿಯೊ ಒಲಿಂಪಿಕ್ ಕ್ರೀಡಾಕೂಟವನ್ನು ಮುಂದೂಡಿದ ಆಧಾರದ ಮೇರೆಗೆ ಫಿಬಾ ಕಾರ್ಯಕಾರಿ ಸಮಿತಿ ವಿಡಿಯೊ ಸಮ್ಮೇಳನ ನಡೆಸಿ ಪರಿಷ್ಕೃತ ಬಾಸ್ಕೆಟ್ ಬಾಲ್ ವೇಳಾಪಟ್ಟಿ ಪ್ರಕಟಿಸುವ ಕುರಿತು ಒಪ್ಪಂದಕ್ಕೆ ಬಂದಿದೆ.ಫಿಬಾ ಒಲಿಂಪಿಕ್ ಅರ್ಹತಾ ಟೂರ್ನಿಗಳು 2021ರ ಜೂನ್ 22ರಿಂದ ಮತ್ತು ಜುಲೈ 24ರವರೆಗೆ ನಡೆಯಲಿದ್ದು, ನಿಖರವಾದ ದಿನಾಂಕಗಳನ್ನು ಘೋಷಿಸಲು ಅಂತಾರಾಷ್ಟ್ರೀಯ ಒಲಿಂಪಿಕ್ ಸಮಿತಿ (ಐಒಸಿ)ಯ ಅನುಮೋದನೆಗೆ ಎದುರು ನೋಡುತ್ತಿದೆ.2021ರ ಫಿಬಾ ಯುರೋ ಬಾಸ್ಕೆಟ್ ಬಾಲ್ ಮತ್ತು ಫಿಬಾ ಅಮೆರಿಕ ಕಪ್ ಅನ್ನು 2022ರ ಸೆಪ್ಟೆಂಬರ್ 1 ಮತ್ತು 18 ನಡುವಿನ ಅವಧಿಗೆ ಮರು ನಿಗದಿಪಡಿಸಲಾಗಿದೆ.
ಹೆತ್ತ ವೃದ್ದ ತಾಯಿಯನ್ನೆ ನಿರ್ಜನ ಪ್ರದೇಶಕ್ಕೆ ರಾತ್ರಿ ಎಸೆದು ಹೋದ ಪಾಪಿ ಪುತ್ರ : ಅನ್ನ ನೀರು ಇಲ್ಲದೆ ಈಡಿ ರಾತ್ರಿ ಕಳೆದ ಹಿರಿಯ ಜೀವ
ಹಿಜಾಬ್ ವಿರುದ್ದ ಕೇಸರಿ ಶಾಲು ನೀಡಲು ಹೊರಟ ಶ್ರೀರಾಮಸೇನೆ ಕಾರ್ಯಕರ್ತರು ಪೊಲೀಸ ವಶಕ್ಕೆ
ನಿಡಸೋಸಿ ರಸ್ತೆ ಅಗಲಿಕರಣ: ಸ್ಮಶಾನದ ಸಮಾಧಿಗಳ ತೆರವು ಕಾರ್ಯ ಪ್ರಾರಂಭ, ನುಡಿದಂತೆ ನಡೆದ ಜಿಲ್ಲಾಧಿಕಾರಿ ಮೊಹ್ಮದ್ ರೋಶನ್
ಮಹಾರಾಷ್ಟ್ರ ಸಚಿವನ ಟಿಪಿಯಲ್ಲಿ ಬೆಳಗಾವಿ ಎಂದು ನಮೂದು : ಎಮ್ ಇಎಸ್ ಆಕ್ಷೇಪ, ಕ್ರಮ ಖಂಡಿತ ಎಂದ ಸಾಮಂತ
ಮತ್ತೆ ಬೆಳಗಾವಿಯಲ್ಲಿ ಭಾಷಾ ಕ್ಯಾತೆ ಆರಂಭಿಸಿದ ಎಮ್ ಇಎಸ್ : 22ರಂದು ಡಾಂಬರ ಮೋರ್ಚಾ ಮಾಡತಾರಂತೆ
ಇಂದು ರಾತ್ರಿ ಬೆಳಗಾವಿಗೆ ಮಹಾರಾಷ್ಟ್ರ ಶಾಸಕ ಸಾಮಂತ ಆಗಮನ : 31ರಂದು ಎಮ್ ಇಎಸ್ ಮುಖಂಡರ ಜತೆ ಸಭೆ, ಚರ್ಚೆ 