ಈದ್‌-ಮಿಲಾದ ಹಬ್ಬ: ಶಾಂತಿ ಸಭೆ ಆಯೋಜನೆ

ಈದ್‌-ಮಿಲಾದ ಹಬ್ಬ: ಶಾಂತಿ ಸಭೆ ಆಯೋಜನೆ  Festival of Eid-Mila: Shanti Sabha Plan

ಲೋಕದರ್ಶನ ವರದಿ 

ದಾಂಡೇಲಿ 18 : ನಗರ ಪೊಲೀಸ್ ಠಾಣೆಯಲ್ಲಿ ಸೋಮವಾರ ಈದ್‌-ಮಿಲಾದ ಹಬ್ಬದ ಆಚರಣೆ ಹಿನ್ನೆಲೆಯಲ್ಲಿ ಶಾಂತಿ ಸಭೆಯನ್ನು ಆಯೋಜಿಸಲಾಗಿತ್ತು.  ಸಭೆಯಲ್ಲಿ ಮಾತನಾಡಿದ ಸಿ.ಪಿ.ಐ ಶಿವಾನಂದ ಅಂಬಿಗೇರ್, ನಗರದಲ್ಲಿ ಈದ್‌-ಮಿಲಾದ ಹಬ್ಬವನ್ನು ಶಾಂತಿಯುತವಾಗಿ ಹಾಗೂ ಸೌಹಾರ್ದತೆಯಿಂದ ಆಚರಿಸುವಂತೆ ಸಾರ್ವಜನಿಕರಿಗೆ ಮತ್ತು ವಿವಿಧ ಈದ್‌-ಮಿಲಾದ ಮುಖಂಡರಿಗೆ ರಚನಾತ್ಮಕ ಸಲಹೆಗಳನ್ನು ನೀಡಿದರು.  

ಹಬ್ಬದ ಸಂದರ್ಭದಲ್ಲಿ ಯಾವುದೇ ಅಹಿತಕರ ಘಟನೆಗಳಿಗೆ ಅವಕಾಶ ನೀಡದೆ, ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವಲ್ಲಿ ಎಲ್ಲರೂ ಪೊಲೀಸರೊಂದಿಗೆ ಸಹಕರಿಸುವಂತೆ ಅವರು ಮನವಿ ಮಾಡಿದರು.  ಸಭೆಯಲ್ಲಿ ಪಿಎಸ್‌ಐಗಳಾದ ಅಮೀನ್ ಅತ್ತಾರ್, ಶಿವಾನಂದ ನಾವದಗಿ, ಕಿರಣ್ ಪಾಟೀಲ್ ಸೇರಿದಂತೆ ಪೊಲೀಸ್ ಸಿಬ್ಬಂದಿ, ವಿವಿಧ ಮುಖಂಡರು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.