ಗಣೇಶೋತ್ಸವದಲ್ಲಿ ಶಾಂತಿ ಕಾಪಾಡಿದ ಮಂಡಳಿಗಳಿಗೆ ಸನ್ಮಾನ

ಗಣೇಶೋತ್ಸವದಲ್ಲಿ ಶಾಂತಿ ಕಾಪಾಡಿದ ಮಂಡಳಿಗಳಿಗೆ ಸನ್ಮಾನ  Felicitations to committees that maintained peace during Ganeshotsava


ಯಮಕನಮರಡಿ 9: ಸ್ಥಳೀಯ ಪೊಲೀಸ್ ಠಾಣೆ ವ್ಯಾಪ್ತಿಯ ಗ್ರಾಮಗಳಲ್ಲಿ ಶಾಂತಿ, ಸೌಹಾರ್ದತೆಯಿಂದ ಗಣೇಶೋತ್ಸವ ಆಚರಿಸಿ ಪೊಲೀಸ್ ನಿಯಮಗಳನ್ನು ಪಾಲಿಸಿದ ಗಣೇಶೋತ್ಸವ ಮಂಡಳಿಗಳ ಸದಸ್ಯರನ್ನು ಇತ್ತೀಚೆಗೆ ನಡೆದ ಶಾಂತಿ ಸಭೆಯಲ್ಲಿ ಸನ್ಮಾನಿಸಲಾಯಿತು.  ಪೊಲೀಸ್ ಇಲಾಖೆಯಿಂದ ಸೂಕ್ತ ಬಹುಮಾನ ಹಾಗೂ ಸನ್ಮಾನ ನೀಡುವ ಯೋಜನೆ ರೂಪಿಸಲಾಗಿದ್ದು, ಬೆಳಗಾವಿ ಜಿಲ್ಲೆಯಲ್ಲಿ ಯಮಕನಮರಡಿ ಪೊಲೀಸ್ ಠಾಣೆ ಮಾದರಿಯಾಗಿದೆ. ಕಳೆದ ವರ್ಷ ಶಾಂತಿ ಮತ್ತು ಸೌಹಾರ್ದತೆಯಿಂದ ಗಣೇಶೋತ್ಸವ ಆಚರಿಸಿದ ಸ್ಥಳೀಯ ಗಣೇಶೋತ್ಸವ ಮಂಡಳಿಗಳ ಸದಸ್ಯರನ್ನು ಠಾಣೆಗೆ ಆಹ್ವಾನಿಸಿ ಗೌರವಿಸಲಾಯಿತು.  ಈ ಸಂದರ್ಭದಲ್ಲಿ ಠಾಣೆಯ ಸಿಪಿಐ ಜಾವೀದ್ ಮುಸಾ ಪೂರಿ ಹಾಗೂ ಪಿಎಸ್‌ಐ ಸಿಬ್ಬಂದಿ ಉಪಸ್ಥಿತರಿದ್ದರು.