ಧಾರವಾಡ - ಹುಬ್ಬಳ್ಳಿ

ಪ್ರಾಮಾಣಿಕತೆಯಿಂದ ಸೇವೆ ಸಲ್ಲಿಸಿ ನಿವೃತ್ತರಾದ ಗಣ್ಯರಿಗೆ ಸನ್ಮಾನ

ಪ್ರಾಮಾಣಿಕತೆಯಿಂದ ಸೇವೆ ಸಲ್ಲಿಸಿ ನಿವೃತ್ತರಾದ ಗಣ್ಯರಿಗೆ ಸನ್ಮಾನ

ಹುಬ್ಬಳ್ಳಿ 22 : ಹೊರಕೇರಿ ಮಾಸ್ತರ ಶಿಕ್ಷಣ ಪ್ರತಿಷ್ಠಾನ, ರಾಣಿ ಚನ್ನಮ್ಮ ಪರಿಸರ ಸೇವಾ ಸಮಿತಿ ಹಾಗೂ ಬಸವ ಪರಿಸರ ಸಂರಕ್ಷಣಾ ಸಮಿತಿಯ ಪದಾಧಿಕಾರಿಗಳು ವಿವಿಧ ಇಲಾಖೆಗಳಲ್ಲಿ ನಿಷ್ಠೆ ಹಾಗೂ ಪ್ರಾಮಾಣಿಕತೆಯಿಂದ ಸೇವೆ ಸಲ್ಲಿಸಿ ನಿವೃತ್ತರಾದ ಗಣ್ಯರನ್ನು ಸನ್ಮಾನಿಸಿ ಗೌರವಿಸಿದರು.  ಕನ್ನಡ ಕಲಾ ಕೃಷಿ ಬಳಗ ಹಾಗೂ ಬಸವ ಸೇವಾ ಸಮಿತಿಯವರು ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಲೋಕೋಪಯೋಗಿ ಇಲಾಖೆಯ ಸಹಾಯಕ ಕಾರ್ಯಪಾಲಕ ಅಭಿಯಂತರರಾಗಿ ಸೇವೆ ಸಲ್ಲಿಸಿ ನಿವೃತ್ತರಾದ ಇಂಜಿನಿಯರ್ ಚಂದ್ರಶೇಖರ ಹತ್ತಿ ಹಾಗೂ ಕಾರ​‍್ೋರೇಶನ್ ಬ್ಯಾಂಕ್ನ ವ್ಯವಸ್ಥಾಪಕರಾಗಿ ಸೇವೆ ಸಲ್ಲಿಸಿ ನಿವೃತ್ತರಾದ ಶ್ರೀನಿವಾಸ ಭೂಮ ಅವರಿಗೆ ಮಾಲಾರೆ​‍್ಣ ಮಾಡಿ ಆತ್ಮೀಯವಾಗಿ ಸನ್ಮಾನಿಸಲಾಯಿತು.  ಈ ಸಂದರ್ಭದಲ್ಲಿ ಗಣ್ಯರ ಸೇವೆಯನ್ನು ಸ್ಮರಿಸಿ ಅಭಿನಂದಿಸಿದ ಪದಾಧಿಕಾರಿಗಳು, ಅವರ ನಿವೃತ್ತ ಜೀವನ ಸುಖ, ನೆಮ್ಮದಿ ಹಾಗೂ ಆರೋಗ್ಯದಿಂದ ಕೂಡಿರಲೆಂದು ಶುಭ ಹಾರೈಸಿದರು.  

ಕಾರ್ಯಕ್ರಮದಲ್ಲಿ ರಾಣಿ ಚನ್ನಮ್ಮ ಪರಿಸರ ಸೇವಾ ಸಮಿತಿಯ ಕಾರ್ಯದರ್ಶಿ, ಬಸವ ಪರಿಸರ ಸಂರಕ್ಷಣಾ ಸಮಿತಿಯ ಕಾರ್ಯದರ್ಶಿ, ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿಯ ಜಿಲ್ಲಾ ಘಟಕದ ಉಪಾಧ್ಯಕ್ಷ, ಕರ್ನಾಟಕ ವಚನ ಸಾಹಿತ್ಯ ಪರಿಷತ್ ಜಿಲ್ಲಾ ಘಟಕದ ಕಾರ್ಯಾಧ್ಯಕ್ಷ ಹಾಗೂ ಹೊರಕೇರಿ ಮಾಸ್ತರ ಶಿಕ್ಷಣ ಪ್ರತಿಷ್ಠಾನದ ಟ್ರಸ್ಟಿ ಡಾ. ಸುರೇಶ ಡಿ. ಹೊರಕೇರಿ, ಡಾ. ಸಿದ್ದೇಶ್ವರ ಕಟಕೋಳ, ಡಾ. ರಾಮು ಮೂಲಗಿ, ಡಾ. ಬಿ.ಎಸ್‌. ಮಾಳವಾಡ, ಸಿ.ಕೆ. ಮಾಳಿ ಪಾಟೀಲ, ರಂಗಭೂಮಿ ಕಲಾವಿದ ಗದಿಗೆಯ್ಯ ವಿಹಿರೇಮಠ, ಡಾ. ಎಚ್‌.ಎಚ್‌. ನದಾಫ, ಶ್ರೀಶೈಲ ತುಂಗಳದ, ಶಿವಾನಂದ ಬೆಂಗೇರಿ, ಮಲ್ಲಿಕಾರ್ಜುನ ಕಮ್ಮಾರ, ಎಂಜಿನಿಯರ್ ಕೆ.ಸಿ. ಪಾಟೀಲ, ಹಿರಿಯರಾದ ವಿ.ವಿ. ಕುರ್ತಕೋಟಿ, ಪ್ರೊ. ಶಿವಯೋಗಪ್ಪ ಯಮ್ಮಿ, ಪ್ರೇಮ ಕಳ್ಳಿಮನಿ, ಅರುಣಾ, ಕಿರಣ, ಸುಮನ, ಆದ್ಯ, ಶ್ರೀಕಾಂತ, ರೇಣುಕಾ, ಶಶಿಧರ, ಕಲ್ಲಪ್ಪ ಕರ್ಲಟ್ಟಿ ಸೇರಿದಂತೆ ಹಲವರು ಉಪಸ್ಥಿತರಿದ್ದರು. 


ಸುದ್ದಿ ಓದಿ