ಬೆಳಗಾವಿ 05: ಹಂಪಿ ಉತ್ಸವ ನಿಮಿತ್ತ ಏರಿ್ಡಸಿದ್ದ ಸಂಗೀತ ಕಾರ್ಯಕ್ರಮದಲ್ಲಿ ತಂದೆ- ಪುತ್ರಿ ಒಂದೇ ವೇದಿಕೆ ಮೇಲೆ ಜಾನಪದ ಹಾಡನ್ನು ಹಾಡಿ ಸಾರ್ವಜನಿಕರಿಂದ ಮೆಚ್ಚುಗೆ ಗಳಿಸಿದರು.
ಜಾನಪದ ಕಲಾವಿದ, ಪೊಲೀಸ ಅಧಿಕಾರಿ ಜೋತಿರ್ಲಿಂಗ ಹೊನಕಟ್ಟಿ, ಅವರ ಪುತ್ರಿ ಗಾಯನಾ ಅವರು ಜಾನಪದ ಹಾಡನ್ನು ಹಾಕಿ ಸಭಿಕರನ್ನು ರಂಜಿಸಿದರು.
ಚಂದ್ರಕಾಂತ ಬೈಲಹೊಂಗಲ ತಬಲಾ ಸಾಥ್ ನೀಡಿದರು. ನಂದಕುಮಾರ ಹಾರ್ಮೋನಿಯಂ ಸಾಥ ನೀಡಿದರು. ಅರುಣ್ ಸಿರಗಾಪೂರ ಹಿನ್ನೆಲೆ ಗಾಯಕರಾಗಿ ಸೇವೆ ಸಲ್ಲಿಸಿದರು.ಜ್ಯೋತಿರ್ಲಿಂಗ ಹೊನಕಟ್ಟಿ ಅವರು ವೃತ್ತಿಯಲ್ಲಿ ಪೊಲೀಸ್ ಅಧಿಕಾರಿಯಾಗಿದ್ದರೂ ಜಾನಪದ ಕ್ಷೇತ್ರದಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.