ಬಸವ ಜಯಂತಿ : ಜೋಡೆತ್ತುಗಳ ಭವ್ಯ ಮೆರವಣಿಗೆ

Basava Jayanti: Grand procession of Jodethus

ಬಸವ ಜಯಂತಿ : ಜೋಡೆತ್ತುಗಳ ಭವ್ಯ ಮೆರವಣಿಗೆ

ದೇವರಹಿಪ್ಪರಗಿ 01: ಪಟ್ಟಣದಲ್ಲಿ ಬಸವ ಜಯಂತಿ ನಿಮಿತ್ತ ಜೋಡೆತ್ತುಗಳ ಭವ್ಯ ಮೆರವಣಿಗೆ ಏರಿ​‍್ಡಸಲಾಗಿತ್ತು. ಹತ್ತಕ್ಕೂ ಹೆಚ್ಚು ಐದು ಜೋಡಿಗಳ ಮೆರವಣಿಗೆ ಕಣ್ಣಿಗೆ ಮುದ ನೀಡಿತು. ನಾನಾ ತರದ ಹೂಮಾಲೆ ಮತ್ತು ಅಲಂಕಾರಿ ವಸ್ತುಗಳಿಂದ ಸುಂದರಗೊಂಡಿದ್ದ ಎತ್ತುಗಳ ಮೆರವಣಿಗೆಯಲ್ಲಿ ಪಾಲ್ಗೊಂಡು ಪುನೀತಗೊಂಡವು. ಪಟ್ಟಣದ ರೈತಾಪಿ ವರ್ಗದ ಸದಸ್ಯರು ಹುರುಪಿನಿಂದ ಪಾಲ್ಗೊಂಡು ಬಸವ ಜಯಂತಿಗೆ ಕಳೆ ತಂದು ಕೊಟ್ಟರು.ಪ್ರತಿವರ್ಷದಂತೆ ಈ ವರ್ಷವೂ ಬಸವ ಜಯಂತಿ ಪ್ರಯುಕ್ತ ಪಟ್ಟಣದ ಬಸವೇಶ್ವರ ವೃತ್ತದಿಂದ ಕಲ್ಮೇಶ್ವರ ದೇವಸ್ಥಾನದವರೆಗೆ ಸುಮಾರು ಐದಕ್ಕೂ ಹೆಚ್ಚು ಜೋಡಿ ಎತ್ತುಗಳ ಮತ್ತು ಬಸವೇಶ್ವರ ಭಾವಚಿತ್ರದ ಮೆರವಣಿಗೆ ರಾಷ್ಟ್ರೀಯ ಹೆದ್ದಾರಿ ಮಾರ್ಗವಾಗಿ ಬಸ್ ನಿಲ್ದಾಣದ ಮುಂದೆ ಮೇನ್ ಬಜಾರ್ ರಸ್ತೆಯ ಮೂಲಕ ಅದ್ದೂರಿಯಾಗಿ ನಡೆಯಿತು.ರೈತ ಮುಖಂಡರುಗಳಾದ ರಾಮು ದೇಸಾಯಿ, ವೀರೇಶ ಕುದುರಿ, ರಮೇಶ ಅಸ್ಕಿ, ಸಂಪತ್ ಜಮಾದಾರ, ಅಪ್ಪುಗೌಡ ಪಾಟೀಲ, ಕಾಶೀಪತಿ ಕುದುರಿ, ಕಾಸಪ್ಪ ಜಿರ್ಲಿ, ಬಸವರಾಜ ಇಂಡಿ, ರಾಘು ಬಾವಿಮನಿ, ಸಾಬು ಕೋಟಿನ್, ಕಾಸಪ್ಪ ಸರೂರ, ವಿವೇಕ ಕೋಟಿನ್, ಮುದುಕಪ್ಪ ನಾಯ್ಕೋಡಿ ಸೇರಿದಂತೆ ರೈತ ಸಂಘಟನೆಯ ಪದಾಧಿಕಾರಿಗಳು ಹಾಗೂ ಪಟ್ಟಣದ ರೈತ ಮುಖಂಡರು ಉಪಸ್ಥಿತರಿದ್ದರು.