ಅಪಾಯಕ್ಕೆ ಆಹ್ವಾನ ನೀಡುತ್ತಿರುವ ಭಾರಿ ಗಾತ್ರದ ತೊಳ್ಳು ಮರಗಳು: ಎಚ್ಚೆತ್ತುಕೊಳ್ಳಬೇಕಾದ ನಗರಸಭೆ
ರಾಣೇಬೆನ್ನೂರು 01: ವಾಣಿಜ್ಯ ನಗರದ ಜನನೀಬೀಡ ಪ್ರದೇಶವಾದ ಪ್ರಧಾನ ಅಂಚೆ ಕಚೇರಿ. ಇಲ್ಲಿಂದ ಬಸ್ಟ್ಯಾಂಡ್ ರಸ್ತೆಗೆ ಸಾಗುವ ಮಾರ್ಗ ಮಧ್ಯದಲ್ಲಿ, ಭಾರಿ ಗಾತ್ರದ 8 ಮರಗಳು ಇಲ್ಲಿವೆ. ಅದರಲ್ಲಿ ಎರಡು ಟೊಳ್ಳು ಮರಗಳು ಕಳೆದ ವರ್ಷದಿಂದ, ಬಿರುಗಾಳಿಗೆ ಭಾಗಿ ನಲಕಚ್ಚಿವೆ. ಇದೀಗ ಬಹಳ ವರ್ಷಗಳಿಂದ, ನಾಗರಿಕ ಸ್ನೆಹಿಯಾಗಿ, ಪರಿಸರಕ್ಕೆ ಪೂರಕವಾಗಿ ಸಾಲಂಕೃತವಾಗಿ 6 ಭಾರಿ ಗಾತ್ರ ಎತ್ತರದ, ಭಾರಿ ಟೊಂಗೆಗೊಳುಳ್ಳ ಮರಗಳಿವೆ. ಮಳೆಗಾಲ ಪ್ರಾರಂಭವಾಗಿದೆ, ಬಿರುಗಾಳಿಯು ಬೀಸುತ್ತದೆ ಇಂದಲ್ಲ ಈ ಮರಗಳು ಅದರಲ್ಲಿರೋ ಟೊಂಗೆಗಳು ಉರುಳುವ ಸಾಧ್ಯತೆಗಳಿವೆ ಕೂಡಲೇ ಅಪಾಯ ಸಂಭವಿಸುವ ಮುನ್ನ,
ನಗರಸಭೆ ಎಚ್ಚೆತ್ತುಕೊಂಡು ಮುಂಜಾಗ್ರತೆ ಕ್ರಮ ವಹಿಸಿ, ನಾಗರಿಕರಿಗೆ ಅಪಘಾತ ಮುನ್ನ ರಕ್ಷಿಸುವ ಕ್ರಮಕೈಗೊಳ್ಳಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ. ಬುಧವಾರ ಸಂಜೆ ದೀಡೀರನೆ ನಗರದಲ್ಲೇಡೆ ಸುರಿದಿರುವ ಭಾರಿ ಬಿರುಗಾಳಿ ಸಹಿತ ಮಳೆಯಿಂದಾಗಿ, ಅಲ್ಲಲ್ಲಿ ಹತ್ತಾರು ಮರಗಳು ನೆಲಕ್ಕುರುಳಿ, ನಗರದ ನಾಗರಿಕರಲ್ಲಿ ಮತ್ತು ಪಾದಚಾರಿಗಳಲ್ಲಿ ಬಹು ಆತಂಕವನ್ನುಂಟು ಮಾಡಿದೆ. ಸುರಿದ ಬಾರಿ ಬಿರುಗಾಳಿ,ಮಳೆಯಿಂದಅಶೋಕನಗರದ ಸುಜನ್ ಆಸ್ಪತ್ರೆ ಹತ್ತಿರ, ಮುಂಡಾ ಸದ ಮನೆ ಬಳಿ, ಪಕ್ಕದ ರಸ್ತೆಯ ಸೂರಣಿಗೆ ವಕೀಲರ ಮನೆ ಹತ್ತಿರ, ಮತ್ತು ಶುಭಾಸ ಸಾವಕಾರ ಮನೆ ಹತ್ತಿರ , ಪ್ರಾಚೀನ ಪ್ರಾಥಮಿಕ ಶಾಲೆ ಬಳಿ ನೆಲಕ್ಕುರಿಳಿದ ಮರಗಳಿಂದಾಗಿ, ಸಂಚಾರ ಸಂಪೂರ್ಣ ಸ್ಥಗಿತಗೊಂಡಿತ್ತು.ಹಾಗೂ ಏಕೆಜಿ ಕಾಲೋನಿ, ಕೋರ್ಟ್ ಪಕ್ಕದ ರಸ್ತೆಯ ಮನೆಯೊಂದರ ಮೇಲೆ ಭಾರಿಗಾತ್ರದ ಮರ ಬಿದ್ದು ಮನೆ ಜಖಂ ಗೊಂಡಿದೆ
ಅದೃಷ್ಟವಶಾತ್ ಮನೆಯಲ್ಲಿ ಯಾರೂ ಇಲ್ಲದ ಕಾರಣ ಯಾವುದೇ ಪ್ರಾಣ ಹಾನಿ ಸಂಭವಿಸಿಲ್ಲ. ಕೆಲ ರಸ್ತೆಗಳಲ್ಲಿ ಸುರಿದ ಭಾರಿ ಮಳೆಗೆ, ಸಂಚಾರ ಸ್ಥಗಿ ತಗೊಂಡು, ಅನೇಕ ರೀತಿಯಲ್ಲಿ ತೊಂದರೆ ಅನುಭವಿಸುವಂತಾಗಿದೆ. ಚೌಡೇಶ್ವರಿ ದೇವಸ್ಥಾನದ ಎದುರಗಡೆಯ ಕಾಲುವೆಯಿಂದ ನೀರು ಸರಾಗ ಸಾಗದೆ, ರಸ್ತೆ ಮೇಲೆ ಹಾದುಹೋಗುವುದರಿಂದ ತಾಸುಗಳ ಕಾಲ, ಜನ ಸೇರಿದಂತೆ ಯಾವುದೇ ವಾಹನಗಳು ಚಲಿದಂತಾ ಗಿದ್ದವು. ಬೇರೆ ಬೇರೆ ಭಾಗಗಳಲ್ಲಿ ಗಿಡಗಳು ನೆಲಕ್ಕುರಳಿ, ವಿದ್ಯುತ್ ಸ್ತಗಿತಗೊಂಡು, ಕತ್ತಲಲ್ಲೇ ಕಾಲ ಕಳೆಯುವಂತಾಗಿತ್ತು. ಘಟನೆಯ ಸುದ್ದಿ ತಿಳಿಯುತ್ತಿದ್ದಂತೆ, ಸ್ಥಳಕ್ಕಾಗಮಿಸಿದ, ನಗರ ಸಭೆ ಸಿಬ್ಬಂದಿ, ಪೌರಾಯುಕ್ತ ಬೆಳಗವು ಮತ್ತು ಹೆಸ್ಕಾಂ ಸಿಬ್ಬಂದಿ ಅಧಿಕಾರಿಗಳು ಸಮರೋಪಾದಿಯಲ್ಲಿ ತಮ್ಮ ಕರ್ತವ್ಯ ನಿರ್ವಹಿಸುತ್ತಿರುವುದು ಕಂಡುಬಂದಿತು. ಒಟ್ಟಾರೆ ನಗರದ ಬಹುಭಾಗಗಳಲ್ಲಿ ಇಂತಹ ಅವಘಡಗಳು ಸಂಭವಿಸಿದೆ, ಮಳೆ ಗಾಳಿ ಸಂದರ್ಭದಲ್ಲಿ ಸಂಭವಿಸುತ್ತಲೆ ಸಾಗುತ್ತಿದೆ. ಹೀಗಾಗಿ ನಗರಸಭೆ ಇವುಗಳೆಲ್ಲವನ್ನು ಪರೀಶೀಲನೆ ನಡೆಸಿ, ಸೂಕ್ತ ಕ್ರಮ ಕೈಗೊಳ್ಳುವುದರಿಂದ ಆಗಬಹುದಾದ ಅನಾಹುತಗಳು ತಪ್ಪಿಸಬಹುದಾಗಿದೆ ಎನ್ನುವುದು ಸಾರ್ವಜನಿಕರ ಮಾತಾಗಿದೆ.