ಮಂಜುನಾಥೇಶ್ವರ ಸೆಂಟ್ರಲ್ ಶಾಲೆಯಲ್ಲಿ ಫಾದರ್ಸ್ ಡೇ ಆಚರಣೆ
Father's Day celebration at Manjunatheshwara Central School
ಲೋಕದರ್ಶನ ವರದಿ
ಧಾರವಾಡ 20 : ಜೂನ್ 20 2026 ರಂದು ಶ್ರೀ ಮಂಜುನಾಥೇಶ್ವರ ಸೆಂಟ್ರಲ್ ಶಾಲೆಯ ನಾಲ್ಕು ಮತ್ತು 5ನೇ ತರಗತಿಯ ಮಕ್ಕಳು ಪಾಲಕರಿಗಾಗಿ ಫಾದರ್ಸ್ ಡೇ ಅನ್ನು ಅದ್ದೂರಿಯಾಗಿ ಆಚರಿಸಿದರು. ಕಾರ್ಯಕ್ರಮವು ಜ್ಯೋತಿ ಬೆಳಗಿಸುವುದರ ಮುಖಾಂತರ ಆರಂಭವಾಯಿತು. ಶಾಲಾ ಪ್ರಾಚಾರ್ಯ ರಜನಿ ಪಾಟೀಲ್ ಎಲ್ಲರನ್ನು ಕಾರ್ಯಕ್ರಮಕ್ಕೆ ಸ್ವಾಗತಿಸಿ ಮಕ್ಕಳ ಪ್ರಯತ್ನದಲ್ಲಿ ತಾವೆಲ್ಲರೂ ಭಾಗಿಯಾಗಿ ಎಲ್ಲ ಮಕ್ಕಳನ್ನ ಪ್ರೋತ್ಸಾಹಿಸಬೇಕು ಎಂದರು .
ಶ್ರೀಯುತ ಆನಂದ್ ಕುಮಾರ್ ಹಾಗೂ ಜನತಾ ಶಿಕ್ಷಣ ಸಮಿತಿಯ ಆಡಳಿತ ಅಧಿಕಾರಿಗಳಾದ ಶ್ರೀಯುತ ಹರಿಹಂತ ಪ್ರಸಾದ್ ಇವರುಗಳು ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿದ್ದರು. ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿತ್ತು. ಪಾಲಕರಿಗಾಗಿ ಬ್ಲೈಂಡ್ ಫೋಲ್ಡ್ , ಹಗ್ಗ ಜಗ್ಗಾಟ, ಮಕ್ಕಳ ಮೇಕಪ್ ಮಾಡುವ ಸ್ಪರ್ಧೆ, ಹಾಗೂ ಪ್ರಾಂತವಾರು ವೇಷ ಧರಿಸಿ ಮಕ್ಕಳೊಂದಿಗೆ ರಾಂಪ್ ವಾಕ್ ಹೀಗೆ ಹಲವಾರು ಸ್ಪರ್ಧೆಗಳನ್ನು ಆಯೋಜಿಸಲಾಗಿತ್ತು.
ಪಾಲಕರು ಸ್ಪರ್ಧೆಗಳಲ್ಲಿ ಭಾಗವಹಿಸಿ ತಮ್ಮ ಮಕ್ಕಳೊಂದಿಗೆ ಶಾಲಾ ಆವರಣದಲ್ಲಿ ಸಂತೋಷದಿಂದ ಕಾಲ ಕಳೆದರು. ಪಾಲಕರು ಶಿಕ್ಷಕರ ಹಾಗೂ ಮಕ್ಕಳ ಕಾರ್ಯಕ್ರಮ ಆಯೋಜನೆಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಕಾರ್ಯಕ್ರಮದ ನಿರೂಪಣೆಯನ್ನು ವಾಣಿಶ್ರೀ ಹಾಗೂ ವಸುಧಾ ನೆರವೇರಿಸಿದರು. ನಾಲ್ಕು ಮತ್ತು 5ನೇ ತರಗತಿಯ ಕೋಆರ್ಡಿನೇಟರ್ ಪಾಲಕರಿಗೆ ವಂದಿಸಿದರು.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 