ರೈತರು ಇಂಜಿನಿಯರಿ್ಗಂತ ಕಡಿಮೆಯಿಲ್ಲ: ಕವಿತಾ ಮಿಶ್ರಾ
Farmers are no less than engineers: Kavita Mishra
ಗದಗ 23: ನಗರದ ಒಕ್ಕಲಿಗರ ಓಣಿಯಲ್ಲಿ 18 ವರ್ಷಗಳ ಬಳಿಕ ನಡೆಯುತ್ತಿರುವ ಶ್ರೀ ದ್ಯಾಮವ್ವ ಹಾಗೂ ಶ್ರೀ ದುರ್ಗಮ್ಮ ದೇವಿಯರ ಹರಿಜಾತ್ರೋತ್ಸವದ ಐದನೇ ದಿನದ ಕಾರ್ಯಕ್ರಮದಲ್ಲಿ ಆದರ್ಶ ರೈತ ಮಹಿಳೆ ಕವಿತಾ ಮಿಶ್ರಾ ಅವರು ರೈತರ ಕುರಿತು ಉಪನ್ಯಾಸ ನೀಡಿದರು.
ರೈತರಿಗೆ ಸಂಬಳ ಹಾಗೂ ಪಿಂಚಣಿ ಇಲ್ಲದ ಕಾರಣ ಮಕ್ಕಳನ್ನು ರೈತರನ್ನಾಗಿ ಮಾಡಲು ಪೋಷಕರು ಹಿಂದೇಟು ಹಾಕುತ್ತಾರೆ. ಆದರೆ ಕೃಷಿಯನ್ನು ಆಧುನಿಕವಾಗಿ ನಡೆಸಿ, ಹೈನುಗಾರಿಕೆ, ಕುರಿ-ಮೇಕೆ, ಕೋಳಿ ಸಾಕಾಣಿಕೆ ಹಾಗೂ ತೋಟಗಾರಿಕೆಯನ್ನು ಸಮನ್ವಯಗೊಳಿಸಿದರೆ ರೈತರೂ ಇಂಜಿನಿಯರ್‌ಗಳಂತೆ ಕೋಟ್ಯಂತರ ರೂಪಾಯಿ ವಹಿವಾಟು ನಡೆಸಬಹುದು ಎಂದು ಅವರು ಹೇಳಿದರು.
ತಾವು ಇಂಜಿನಿಯರಿಂಗ್ ಪದವಿ ಪಡೆದಿದ್ದರೂ ವಿವಾಹದ ಬಳಿಕ ಕೃಷಿಗೆ ಬಂದಿದ್ದು, ಕಲ್ಲುಗಳಿಂದ ಕೂಡಿದ್ದ ಜಮೀನನ್ನು ಅಭಿವೃದ್ಧಿಪಡಿಸಿ, ಬೋರ್‌ವೆಲ್‌ಗಾಗಿ ಬಂಗಾರದ ಬಳೆಗಳನ್ನು ಮಾರಾಟ ಮಾಡಿ ಕೃಷಿ ಆರಂಭಿಸಿದ ಅನುಭವವನ್ನು ಹಂಚಿಕೊಂಡರು. ಸಂಕಷ್ಟಗಳ ನಡುವೆಯೂ ಎಂಟು ಎಕರೆ ಜಮೀನಿನಲ್ಲಿ ವಿವಿಧ ತೋಟಗಾರಿಕಾ ಬೆಳೆಗಳನ್ನು ಬೆಳೆಸಿ ಬದುಕು ಕಟ್ಟಿಕೊಂಡಿರುವುದಾಗಿ ತಿಳಿಸಿದರು.
ರೈತರ ಬೆಳೆಗಳಿಗೆ ಬೆಲೆ ನಿಗದಿಪಡಿಸುವ ಅಧಿಕಾರ ರೈತರಿಗೆ ಸಿಗಬೇಕು. ಆಧುನಿಕ ಬೆಳೆಗಳ ಜೊತೆಗೆ ಪಶುಸಂಗೋಪನೆ ಮತ್ತು ತೋಟಗಾರಿಕೆಗೆ ಆದ್ಯತೆ ನೀಡಬೇಕು ಎಂದು ಅವರು ಸಲಹೆ ನೀಡಿದರು. ಮಹಿಳೆಯರು ತಾಯಿ, ಹೆಂಡತಿ, ಮಗಳು ಹಾಗೂ ಸೊಸೆಯಾಗಿ ಕುಟುಂಬವನ್ನು ಬೆಸೆಯುವ ಪಾತ್ರ ನಿರ್ವಹಿಸಬೇಕು. ಮಕ್ಕಳಲ್ಲಿ ಸಂಸ್ಕಾರ ಬೆಳೆಸುವುದು ಅಗತ್ಯ ಎಂದರು.
ವಿಧಾನಪರಿಷತ್ ಸದಸ್ಯ ಎಸ್.ವಿ. ಸಂಕನೂರ ಮಾತನಾಡಿ, ಭಾರತ ಆರ್ಥಿಕವಾಗಿ ಅಭಿವೃದ್ಧಿಶೀಲ ದೇಶವಾಗಿದ್ದರೂ ಧಾರ್ಮಿಕ ಹಾಗೂ ಆಧ್ಯಾತ್ಮಿಕವಾಗಿ ಶ್ರೀಮಂತವಾಗಿದೆ. ಜಾತಿ-ಮತ ಭೇದ ಮರೆತು ಭಕ್ತಿ ಮತ್ತು ಶ್ರದ್ಧೆಯಿಂದ ಜಾತ್ರೆಯಲ್ಲಿ ಪಾಲ್ಗೊಳ್ಳುತ್ತಿರುವುದು ಸಂತಸದ ಸಂಗತಿ. ಎಲ್ಲರಿಗೂ ಒಳಿತನ್ನು ಮಾಡುವುದೇ ನಿಜವಾದ ಧರ್ಮ ಎಂದರು.
ಮಾಜಿ ಶಾಸಕ ಡಿ.ಆರ್. ಪಾಟೀಲ ಮಾತನಾಡಿ, ರೈತರು ಸ್ವಾಭಿಮಾನದಿಂದ ಬದುಕಬೇಕು. ಬೆಳೆಗಳಿಗೆ ಬೆಲೆ ನಿಗದಿಪಡಿಸುವ ಹಕ್ಕು ರೈತರಿಗೆ ದೊರೆಯಬೇಕು ಎಂದು ಒತ್ತಾಯಿಸಿದರು.
ಸೂಡಿಯ ಕೊಟ್ಟೂರು ಬಸವೇಶ್ವರ ಶಿವಾಚಾರ್ಯರು ಸಾನಿಧ್ಯ ವಹಿಸಿದ್ದರು. ಟ್ರಸ್ಟ್ ಕಮಿಟಿ ಅಧ್ಯಕ್ಷ ಕೊಟ್ರ್ಪ ಕಮತರ, ಜಾತ್ರಾ ಕಮಿಟಿ ಕಾರ್ಯಾಧ್ಯಕ್ಷ ಫಕ್ಕೀರ್ಪ ಹೆಬಸೂರ, ಬಿಜೆಪಿ ಜಿಲ್ಲಾಧ್ಯಕ್ಷ ರಾಜು ಕುರಡಗಿ ಸೇರಿದಂತೆ ಗಣ್ಯರು ಉಪಸ್ಥಿತರಿದ್ದರು.
ವಕೀಲ ಎಂ.ಎಂ. ಹಿರೇಮಠ ಅವರು ಕವಿತಾ ಮಿಶ್ರಾ ಅವರ ಪರಿಚಯ ಮಾಡಿದರು. ಚೈತ್ರ ಶಿವಪ್ಪನಮಠ ಪ್ರಾರ್ಥಿಸಿದರು. ಸುಜಾತ ಗುಗ್ಗುರಿ ಸ್ವಾಗತಿಸಿದರು. ಬಾಹುಬಲಿ ಜೈನ ಕಾರ್ಯಕ್ರಮ ನಿರೂಪಿಸಿದರು. ಬಳಿಕ ಮಂಗಳೂರಿನ ಹೆಜ್ಜೆನಾದ ಕಲಾ ತಂಡದಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 