ರೈತ ಸಮಾವೇಶ: ಪೂರ್ವಭಾವಿ ಸಭೆ

ುಗಳಖೋಡ 04: ಕಬ್ಬಿನ ದರ ತಾರತಮ್ಯದ ವಿರುದ್ಧ ಹೊರಾಟ ನಡೆಸಲು ಜಿಲ್ಲಾ ಮಟ್ಟದ ಜಾಗೃತ ಸಮಾವೇಶವನ್ನು ನಡೆಸಲು ಕಬ್ಬು ಬೆಳೆಗಾರರ ಹಿತ ರಕ್ಷಣಾ ವೇದಿಕೆಯ ವತಿಯಿಂದ ಮೂಡಲಗಿ ಪಟ್ಟಣದ ಬಸವ ಮಂಟಪದಲ್ಲಿ ಇದೇ ದಿ 5 ರಂದು ಸಭೆಯನ್ನು ಆಯೋಜಿಸಲಾಗಿದೆ. 

    ಮುಗಳಖೋಡ ಪಟ್ಟಣದ ಪ್ರವಾಸಿ ಮಂದಿರದಲ್ಲಿ ನಡೆದ ರೈತ ಸಮಾವೇಶದ ಪೂರ್ವಭಾವಿ ಸಭೆಯಲ್ಲಿ ರಾಜ್ಯ ರೈತ ಸಂಘದ ತಾಲೂಕಾ ಅಧ್ಯಕ್ಷ ಮಲ್ಲಪ್ಪ ಅಂಗಡಿ ಮಾತನಾಡಿ ಕಬ್ಬಿಗೆ ಸೂಕ್ತ ಬೆಂಬಲ ಬೆಲೆ ನೀಡುವಂತೆ ಕನರ್ಾಟಕ ರಾಜ್ಯ ರೈತ ಸಂಘ ನಡೆಸುತ್ತಿರುವ ಹೋರಾಟಕ್ಕೆ ಸರಕಾರ ಹಾಗೂ ಕಾಖರ್ಾನೆ ಮಾಲಿಕರು ರೈತರನ್ನು ಕಡೆಗಣಿಸುತ್ತಾ ಬಂದಿದ್ದಾರೆ. ಈ ಸಭೆಯಲ್ಲಿ ಬೆಳಗಾವಿ ಜಿಲ್ಲೆಯ ಕಬ್ಬು ಬೆಳೆಗಾರರು ಪಕ್ಷಾತೀತವಾಗಿ ಒಗ್ಗಟಿನ ಹೋರಾಟ ನಡೆಸಿದರೆ ಮಾತ್ರ ನ್ಯಾಯ ಪಡೆಯಲು ಸಾಧ್ಯವಾಗುತ್ತದೆ ಎಂದು ಹೇಳಿದರು.

   ನಮ್ಮ ಬೆಳಗಾವಿ ಜಿಲ್ಲೆಯಲ್ಲಿ 24 ಕಾಖರ್ಾನೆಗಳು ಕಾರ್ಯನಿರ್ವಹಿಸುತ್ತಿವೆ ಆದರೆ ಕೃಷ್ಣಾ ಸಹಕಾರಿ ಶುಗರ್ಸ್ ಹಳಿಯಾಳ ಕಾಖರ್ಾನೆ ಮಾತ್ರ 2900. ಉಳಿದ ರೂ.ಬಿಲ್ಲನ್ನು ಉಳಿಸದೆ ಎಲ್ಲಾ ಬಾಕಿ ಮೊತ್ತವನ್ನು ನೀಡಿದೆ, ಉಳಿದ 23 ಕಾಖರ್ಾನೆಗಳು ರೈತರ ಬಾಕಿಹಣವನ್ನು ನೀಡದೆ ತಮ್ಮ ಕೆಲಸವನ್ನು ಪ್ರಾರಂಭಿಸಿವೆ. ಹಾಗಾಗಿ ರೈತರಿಗೆ ಈ ಬಾರಿ ಹೋರಾಟ ಅನಿವಾರ್ಯವಾಗಿದ್ದು, ಪ್ರತಿಯೊಬ್ಬ ರೈತ ಸಮಾವೇಶದಲ್ಲಿ ಪಾಲ್ಗೊಳ್ಳಬೇಕೆಂದು ಗಿರಮಲ್ಲ ತೇಗೂರ ಮನವಿ ಮಾಡಿದರು. 

    ಮೂಡಲಗಿಯಲ್ಲಿ ನಡೆಯುವ ಈ ಸಭೆಯಲ್ಲಿ ಸೇತ್ಕರಿ ಸಂಘಟನಾ ಅಧ್ಯಕ್ಷರು ಹಾಗೂ ಮಹಾರಾಷ್ಟ್ರದ ಸಂಸದ ರಾಜು ಶೆಟ್ಟಿ ಅಧ್ಯಕ್ಷತೆಯನ್ನು ವಹಿಸಲಿದ್ದಾರೆ. ರೈತಸಂಘದ ರಾಜ್ಯಾಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ ಸಮಾವೇಶದ ನೇತೃತ್ವ ವಹಿಸಲಿದ್ದಾರೆ. ಅಖಿಲ ಭಾರತ ರೈತ ಸಂಘರ್ಷ ಸಮನ್ವಯ ಸಮೀತಿಯ ಕಾರ್ಯದಶರ್ಿ ಉತ್ತರ ಪ್ರದೇಶ ವ್ಹಿ.ಎಮ್.ಸಿಂಗ್ ಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆ. ಇಂದಿನ ಸಭೆಯಲ್ಲಿ ದೇವಪ್ಪ ದೊಡವಾಡ, ಶಿವಬಸು ಕಾಪಸಿ, ಅಶೋಕ ಚೌಗಲಾ, ಗುರುಪಾದ ಚೌಗಲಾ, ಶಿವಪ್ಪ ಕಾಡಶೆಟ್ಟಿ, ಬೀರಪ್ಪ ಸವಸುದ್ದಿ, ಹಣಮಂತ ಪಾಟೀಲ, ಶ್ರೀಶೈಲ ನಿಂಗನೂರ, ಗಿರೇಪ್ಪ ಜಾಣಮಟ್ಟಿ, ಮಹೇಶ ಪಾಟೀಲ, ಜ್ಞಾನದೇವ ಅಳಗವಾಡಿ ಮುಂತಾದವರು ಪಾಲ್ಗೊಂಡಿದ್ದರು.