ವಿದ್ಯುತ ಖಾಸಗಿಕರಣ ವಿರೋಧಿಸಿ ರೈತರು, ಸಾರ್ವಜನಿಕರಿಂದ ಪ್ರತಿಭಟನೆ
Farmers, public protest against electricity privatization
ಲೋಕದರ್ಶನ ವರದಿ
ಮಹಾಲಿಂಗಪುರ 17: ಸರ್ಕಾರ ಟಾಟಾ ಕಂಪನಿಗೆ ವಿದ್ಯುತ ಖಾಸಗಿರಿಸುವುದನ್ನು ಕೂಡಲೆ ಬಿಡಬೇಕು ಒತ್ತಾಯಿಸಿ ರೈತರು ಮತ್ತು ಸಾರ್ವಜನಿಕರು ಹೆಸ್ಕಾಂ ಕಚೇರಿಯ ಆವರಣದಲ್ಲಿ ಪ್ರತಿಭಟನೆ ನಡೆಸಿ ಹೆಸ್ಕಾಂ ಎ.ಇ.ಇ ವ್ಹಿ,ಎನ್ ಮರಿಕಟ್ಟಿ, ಮತ್ತು ತೇರದಾಳ ತಹಶಿಲ್ದಾರ ವಿಜಯಕುಮಾರ ಕಡಕೋಳ ಇವರಿಗೆ ಪ್ರತಿಭಟನಾಕಾರರು ಮನವಿ ನೀಡಿದರು. ರೈತ ಮುಖಂಡ ಗಂಗಾಧರ ಮೇಟಿ ಮಾತನಾಡಿ ರೈತರಿಗೆ, ನೇಕಾರರಿಗೆ ಜನಸಾಮಾನ್ಯರಿಗೆ ಸಿಗುವ ಸೌಲಭ್ಯಗಳನ್ನು ಸರ್ಕಾರ ನಿರ್ವಹಿಸದಂತೆ ಖಾಸಗಿಯವರು ನಡೆಸಲು ಸಾದ್ಯವಿಲ್ಲ.
ಸರ್ಕಾರಿ ಸಂಸ್ಥೇಯನ್ನು ಖಾಸಗಿ ಕಂಪನಿಗೆ ವಹಿಸುವುದರಿಂದ ರೈತರ ಬದುಕಿಗೆ ಬೆಂಕಿ ಇಟ್ಚಂತಾಗುತ್ತದೆ. ಈಗಾಗಲೇ ಸಾಲದಲ್ಲಿ ಹುಟ್ಟಿ ಸಾಲದಲ್ಲಿಯೇ ಸಾಯುತ್ತಿರುವ ರೈತರಿಗೆ ಇದು ತುಂಬಾ ಹೊರೆಯಾಗುತ್ತದೆ. ಎಲ್ಲರಿಗೂ ಅವಶ್ಯವಿರುವ ವಿದ್ಯುತನ್ನ ಸರ್ಕಾರವೇ ನಿರ್ವಹಿಸಿದರೆ ಎಲ್ಲರ ಬದುಕಿಗೂ ಅನುಕೂಲವಾಗುತ್ತದೆ, ಒಂದು ವೇಳೆ ಸರ್ಕಾರ ಖಾಸಗಿಕರಣವನ್ನು ಕೈಬಿಡದೆ ಇದ್ದರೆ ರೈತರು ಮತ್ತು ಸಾರ್ವಜನಿಕರು ಸೇರಿ ಉಗ್ರ ಹೋರಾಟ ಮಾಡಲಾಗುವುದು ಎಂದರು.
ನಂತರ ಮಾತನಾಡಿದ ಮುಖಂಡರಾದ ದರೇಪ್ಪ ಸಾಂಗ್ಲಿಕರ ಲಕ್ಷಾಂತರ ಕೋಟಿ ರೂ ಆಸ್ತಿ ಹೊಂದಿರುವ ಸರ್ಕಾರಿ ಇಲಾಖೆಗಳು, ನೌಕರಸ್ಥರು, ಎಲ್ಲವು ಸಾರ್ವಜನಿಕ ಹಿತಕ್ಕೆ ಅನುಕೂಲವಾಗದೆ ಕಾರ್ೋರೇಟ ಕಂಪನಿ ಹಿತಕ್ಕೆ ಕೊಟ್ಟರೆ ನಮ್ಮೇಲ್ಲರ ಬದುಕಿಗೆ ತೊಂದರೆಯಾಗುತ್ತದೆ. ಅಲ್ಲದೆ ಹೆಸ್ಕಾಂ ನಲ್ಲ ಸಾಕಷ್ಟು ಜನ ಸೇವೆ ಸಲ್ಲಿಸುವತ್ತಿದ್ದು ಅವರ ಬದುಕಿ ಆದಾರವಿಲ್ಲದಂತಾಗುತ್ತದೆ ಎಂದರು.
ಸುಪ್ರೀಂ ಕೋರ್ಟ್ ನ್ಯಾಯವಾದಿ ಕಾತರಕಿ ಜೊತೆ ಕನ್ನಡ ಸಂಘಟನೆಗಳ ಸಂವಾದ ನಾಳೆ
ನಿಡಸೋಸಿ ರಸ್ತೆ ಅಗಲಿಕರಣಕ್ಕೆ ವೇಗ: ಭರದಿಂದ ಸಾಗಿದ ಮುಸ್ಲಿಂ ಸ್ಮಶಾನ ಆವರಣ ತೆರವು ಕಾರ್ಯಾಚರಣೆ; ಡಿಸಿ ಕಾರ್ಯಕ್ಕೆ ಮೆಚ್ವುಗೆ
ವಿಮೆ ಹಣಕ್ಕಾಗಿ ಪತಿ ಹತ್ಯೆ: ಪತ್ನಿ, ಎಫ್ಎಸ್ಎಲ್ ಅಧಿಕಾರಿ ಸೇರಿ 9 ಜನ ಬಂಧನ : ಎಸ್ ಪಿ ರಾಮರಾಜನ್
ಹಿಂಡಲಗಾ ಜೈಲಿನಿಂದ ಶಿವಾನಂದ ನಿಲಣ್ಣವರ ಬಿಡುಗಡೆ : ಎಲ್ಲದಕ್ಕು ಓಂ ನಮಃ ಶಿವಾಯ ಎಂದು ಪ್ರತಿಕ್ರಿಯೆ
ಕಲುಸಿತ ಆಹಾರ ಸೇವನೆ: 30 ವಿಧ್ಯಾರ್ಥಿಗಳು ಆಸ್ಪತ್ರೆಗೆ ಅಲೇದಾಟ, ಅಧಿಕಾರಿಗಳ ವಿರುದ್ಧ ತಡರಾತ್ರಿ ಪ್ರತಿಭಟನೆ
ಬಹುಕೋಟಿ ವಂಚನೆ ಪ್ರಕರಣ : ಶಿವಾನಂದ ನೀಲಣ್ಣವರಗೆ ಮಧ್ಯಂತರ ಜಾಮೀನು ಮಂಜೂರು 